ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸಿಬಿ ದಾಳಿ: ಕೋಟಿ ಕೋಟಿ ಮೌಲ್ಯ ತೂಗಿದ ಬಿಡಿಎ "ಮಾಲೀ'ಕ

|
Google Oneindia Kannada News

ಬೆಂಗಳೂರು, ಜೂನ್ 17: ಬಿಡಿಎ..(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಬೃಹತ್ ಡಿಮ್ಯಾಂಡ್ ಅಥಾರಿಟಿಯಾಗಿ ಬದಲಾಗಿದೆ ಅಂದರೆ ತಪ್ಪಲ್ಲೇನೋ..? ಬಿಡಿಎದಲ್ಲಿ ಮಾಲಿಯಾಗಿ ಕೆಲಸ ಮಾಡುವವನು ಸಹ ಕೋಟಿ ಕೋಟಿಯ ಒಡೆಯ. ನಾಲ್ಕಾರು ಬಿಲ್ಡಿಂಗ್‌ಗಳ ಮಾಲೀಕ.. ಬಿಡಿಎ ತೋಟದಲ್ಲಿ ಮಾಲೀಯಾಗಿ ದುಡಿಯುವವನು "ಮಾಲೀ'ಕನಾಗಿದ್ದೇ ಶಿವಲಿಂಗಯ್ಯ ಮೇಲೆ ಎಸಿಬಿ ಕಣ್ಣು ಬಿದ್ದು ದಾಳಿಯಾಗಿದೆ. ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬಿಡಿಎ ಅಸಿಸ್ಟೆಂಟ್ ಶಿವಲಿಂಗಯ್ಯ ಮನೆ ಮೇಲೆ ಎಸಿಬಿ ದಾಳಿಯಾಗಿದೆ. ದೊಡ್ಡಕಲ್ಲಸಂದ್ರ ಬಳಿಯ ಗೋಕುಲ ನಗರದ ಮನೆಯಲ್ಲಿ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಮೂರು ಅಂತಸ್ಥಿನ ಭವ್ಯ ಮನೆ ಹೊಂದಿರುವ ಶಿವಲಿಂಗಯ್ಯ ತನ್ನ ಮನೆಯಲ್ಲಿ ಗ್ರೌಂಡ್ ಪ್ಲೋರ್ ಬಾಡಿಗೆ ಕೊಟ್ಟಿದ್ದಾನೆ. ಮೊದಲನೆ ಮಹಡಿಯ ಡ್ಯೂಪ್ಲೆಕ್ಸ್‌ ಮನೆಯಲ್ಲಿ ವಾಸಗಿದ್ದಾನೆ. ಶಿವಲಿಂಗಯ್ಯಗೆ ಸೇರಿದ ಮೂರು ಕಡೆಗಳಲ್ಲಿ ಎಸಿಬಿ ದಾಳಿಯಾಗಿದೆ. ದೊಡ್ಡಕಲ್ಲಸಂದ್ರ ಗೋಕುಲ ನಗರದ ಮನೆ, ಜೆಪಿ ನಗರ 6ನೇ ಹಂತದ ಮನೆ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಕಚೇರಿ ಮೇಲೆ ದಾಳಿಯಾಗಿದ್ದು ಆದಾಯಕ್ಕೂ ಮೀರಿದ ಅಧಿಕ ಆಸ್ತಿ ಗಳಿಕೆ ಆರೋಪದಲ್ಲಿ ದಾಳಿಯಾಗಿದೆ.

ಈ ಇನ್ಸ್‌ಪೆಕ್ಟರ್‌ಗೆ ಅಕ್ರಮದ ಹಣ ಇಡಲು ಪೊಲೀಸ್ ಠಾಣೆಯೇ ಸೇಫ್ ಜಾಗವಾಗಿತ್ತು!ಈ ಇನ್ಸ್‌ಪೆಕ್ಟರ್‌ಗೆ ಅಕ್ರಮದ ಹಣ ಇಡಲು ಪೊಲೀಸ್ ಠಾಣೆಯೇ ಸೇಫ್ ಜಾಗವಾಗಿತ್ತು!

ಎಸಿಬಿ ಡಿವೈಎಸ್‌ಪಿ ವಿಜಯ್ ಹಡಗಲಿ ನೇತೃತ್ವದ ತಂಡದಿಂದ ದಾಳಿ. ಇದೇ ತಿಂಗಳ 31 ರಂದು ವೃತ್ತಿ ಜೀವನದ ಕೊನೆಯ ದಿನವಾಗಿತ್ತು. ಈ ನಡುವೆ ಎಸಿಬಿ ಶಿವಲಿಂಗಯ್ಯನಿಗೆ ಶಾಕ್ ನೀಡಿದೆ . ಶಿವಲಿಂಗಯ್ಯ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ಶೋಧ ಕಾರ್ಯವನ್ನು ಮಾಡುತ್ತಿದೆ.

ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ

ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆ

ಶಿವಲಿಂಗಯ್ಯಗೆ ಸೇರಿದ ಮೂರು ಮನೆಗಳ ಮೇಲೆ ದಾಳಿಯನ್ನು ನಡೆಸಲಾಗಿದೆ. ದೊಡ್ಡಕಲ್ಲಸಂದ್ರ ಗೋಕುಲ ನಗರದ ಮನೆ, ಜೆಪಿ ನಗರ 6ನೇ ಹಂತದ ಮನೆ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಕಚೇರಿ ಮೇಲೆ ದಾಳಿಯಾಗಿದ್ದು ದಾಳಿ ವೇಳೆ ಆಸ್ತಿ ಪತ್ರಗಳು, ಬೆಳ್ಳಿ, ಚಿನ್ನಾಭರಣ ಪತ್ತೆಯಾಗಿದೆ. ಬೆಂಗಳೂರು ನಗರದಲ್ಲಿ ಐದು ನಿವೇಶನ ಹೊಂದಿರುವ ಪತ್ರಗಳು ಪತ್ತೆಯಾಗಿದೆ. ಚನ್ನಪಟ್ಟಣದ ಬೆಂಗಳೂರು ಮೈಸೂರು ಕಾರಿಡಾರ್ ಬಳಿ ಒಂದು ಎಕರೆ 10 ಗುಂಟೆ ಕಮರ್ಷಿಯಲ್ ಲ್ಯಾಂಡ್ ಪತ್ತೆಯಾಗಿದೆ. ಇನ್ನು ಬ್ಯಾಂಕ್‌ನಲ್ಲಿ ಚಿನ್ನಾಭರಣ ಇಟ್ಟಿರೋ ಬಗ್ಗೆ ಮತ್ತು ಖಾಸಗಿ ಬ್ಯಾಂಕ್‌ನ ಲಾಕರ್‌ನಲ್ಲಿ ಸಹ ಚಿನ್ನಾಭರಣವನ್ನು ಇಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಪಾರ ಆಸ್ತಿಯ ಬಗ್ಗೆ ವಿವರಣೆ

ಅಪಾರ ಆಸ್ತಿಯ ಬಗ್ಗೆ ವಿವರಣೆ

ಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ಏಕಾಏಕಿ ಬಂದ ವೇಳೆಯಲ್ಲಿ ಶಿವವಿಂಗಯ್ಯ ತನಿಖೆಗೆ ಸಹಕಾರವನ್ನು ನೀಡದೇ ಬಾಗಿಲು ತೆರೆಯದೇ ಸತಾಯಿಸಿದ್ದಾರೆ. ಕೆಲಸಮಯದ ನಂತರ ಬಾಗಿಲು ತೆರೆದ ಶಿವಲಿಂಗಯ್ಯ ದಾಳಿಯ ವೇಳೆಯಲ್ಲಿ ಮನೆಯಲ್ಲೇ ಇದ್ದಾರೆ. ಮನೆಯಲ್ಲಿ ಸಿಕ್ಕ ಅಪಾರ ಪ್ರಮಾಣದ ಆಸ್ತಿಯ ಬಗ್ಗೆ ಎಸಿಬಿ ಅಧಿಕಾರಿಗಳು ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಬ್ಯಾಂಕ್ ಅಕೌಂಟ್ ಲಾಕರ್ ಪರಿಶೀಲನೆ

ಬ್ಯಾಂಕ್ ಅಕೌಂಟ್ ಲಾಕರ್ ಪರಿಶೀಲನೆ

ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಮನೆ ಮೇಲೆ ದಾಳಿ ಎರಡು ವಾಹನಗಳಲ್ಲಿ ಮನೆಗೆ ಬಂದ ಎಸಿಬಿ ಅಧಿಕಾರಿಗಳು. ಮನೆಯಲ್ಲಿ ಸಿಕ್ಕಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪಂಚನಾಮೆ ನಡೆಸಲು ಪಂಚನಾಮರ್ ಕರೆದುಕೊಂಡು ಬಂದ ಅಧಿಕಾರಿಗಳು. ಬ್ಯಾಂಕ್ ಅಕೌಂಟ್ ಮತ್ತು ಲಾಕರ್ ಪರಿಶೀಲನೆಯನ್ನು ಸಹ ನಡೆಸುತ್ತಿದ್ದಾರೆ.

ಆಸ್ತಿಗಳ ವಿವರ ಪಡೆದ ಎಸ್ಪಿ

ಆಸ್ತಿಗಳ ವಿವರ ಪಡೆದ ಎಸ್ಪಿ

ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಮನೆಗೆ ಎಸಿಬಿ ಎಸ್ಪಿ ಯತೀಶ್ ಚಂದ್ರ ಭೇಟಿ‌ ನೀಡಿದ್ದಾರೆ. ಎಸಿಬಿ ದಾಳಿ ಕುರಿತು ಡಿವೈಎಸ್ಪಿ ವಿಜಯ್ ಹಡಗಲಿಯಿಂದ ಮಾಹಿತಿ ಪಡೆಯುತ್ತಿರುವ ಯತೀಶ್ ಚಂದ್ರರವರು ಶಿವಲಿಂಗಯ್ಯ ಮನೆಯಲ್ಲಿ ಬೆಳಗ್ಗೆಯಿಂದ ಸಿಕ್ಕ ದಾಖಲೆಗಳ ಪರಿಶೀಲನೆ ಮತ್ತು ಮನೆಯಲ್ಲಿ ಆಸ್ತಿ, ನಿವೇಶನ ಪತ್ರಗಳು, ಆಸ್ತಿಗಳ ವಿವರವನ್ನು ಪಡೆದಿದ್ದಾರೆ.

Recommended Video

2nd PUC ಫಲಿತಾಂಶ ಪ್ರಕಟ , ಪಾಸ್ ಫೇಲ್ ಲೆಕ್ಕಾಚಾರ | Oneindia Kannada

English summary
Karnataka ACB Raids: Crore worth assets unearthed during ACB raid on bda gardenian Shivalingaiah house in bengaluru Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X