ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ಫೋಸಿಸ್ ಹೆಸರಿನಲ್ಲಿ ವ್ಯಕ್ತಿಗೆ ದೋಖಾ: ಪತ್ನಿಯನ್ನು ಕೊಂದು ನಾಟಕವಾಡಿದ್ದ ಕೊಲೆಗಾರ ಸೆರೆ

|
Google Oneindia Kannada News

ಬೆಂಗಳೂರು, ಜ. 13: ಇನ್ಫೋಸಿಸ್ ಹೆಸರಿನಲ್ಲಿ ಲಕ್ಷ ಲಕ್ಷ ವಂಚನೆ. ಸೈಬರ್ ಠಾಣೆ ಮೆಟ್ಟಿಲೇರಿದ ಪ್ರಕರಣ. ಅನೈತಿಕ ಸಂಬಂಧ ಅನುಮಾನ. ಪತ್ನಿಯನ್ನು ಕೊಂದು ನಾಟಕವಾಡಿದ್ದ ಆರೋಪಿ ಬಂಧನ. ಕೆ.ಜಿ. ಹಳ್ಳಿ ಪೊಲೀಸರಿಂದ ಡ್ರಗ್ ಪೆಡ್ಲರ್ ಸೆರೆ. ಇವಿಷ್ಟು ಬೆಂಗಳೂರು ಅಪರಾಧ ಲೋಕದ ಸುದ್ದಿಗಳು.

ಇನ್ಫೋಸಿಸ್ ಹೆಸರಿನಲ್ಲಿ ದೋಖಾ : ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನಿಂದ 4 ಲಕ್ಷ ರೂ. ಪಡೆದು ಸೈಬರ್ ಖದೀಮರು ವಂಚಿಸಿದ್ದಾರೆ. ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಸಿಕ್ಕಿದೆ ಎಂದು ಉದ್ಯೋಗ ಆಫರ್ ನೀಡಿ ಕರೆ ಮಾಡಿದ್ದಾರೆ. ಅಲ್ಲದೇ ನಕಲಿ ಉದ್ಯೋಗ ಸಿಕ್ಕಿರುವ ಪ್ರಮಾಣ ಪತ್ರವನ್ನು ತೋರಿಸಿದ್ದಾರೆ. ಇದನ್ನು ನಂಬಿದ ವ್ಯಕ್ತಿ ತನ್ನ ಬ್ಯಾಂಕ್‌ನಲ್ಲಿದ್ದ 4.32 ಲಕ್ಷ ರೂ. ಹಣವನ್ನು ಅವರು ಹೇಳಿದ ಬ್ಯಾಂಕ್ ಅಕೌಂಟ್‌ಗೆ ವರ್ಗಾವಣೆ ಮಾಡಿದ್ದು, ಇನ್ನೇನು ಇನ್ಫೋಸಿಸ್‌ನಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿ ತೇಲಾಡುತ್ತಿದ್ದ ವ್ಯಕ್ತಿ ಪತ್ರ ಪಡೆದು ನೋಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಬೆಂಗಳೂರು ಸೈಬರ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕೊಲೆ ನಾಟಕಕಾರ ಸೆರೆ: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಭಾವಿಸಿ ಮಹಿಳೇಯನ್ನು ಕೊಲೆ ಮಾಡಿದ್ದ ನಾಟಕಕಾರನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ. ಕೋಣನಕುಂಟೆ ಬೀರೇಶ್ವರ ನಗರ ನಿವಾಸಿ ಮಂಜುಳಾ ಮತ್ತು ಮಂಜುನಾಥ್ ಪರಸ್ಪರ ಅನ್ಯೋನ್ಯವಾಗಿದ್ದರು. ಇಬ್ಬರೂ ಲಿವ್ ಇನ್ ಸಂಬಂಧ ಹೊಂದಿದ್ದರು. ಆದರೆ, ಮಂಜುಳಾ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಗೊಂಡಿದ್ದ ಮಂಜುನಾಥ್ ಹಲವು ಬಾರಿ ಜಗಳ ಕೂಡ ಮಾಡಿದ್ದ ಎನ್ನಲಾಗಿದೆ.

Bengaluru Crime News Roundup (13 Jan 2022) : Fraud in the Name of Infosys, Man Arrested for Killing Wife

ಮೂರು ದಿನದ ಹಿಂದೆ ಅನೈತಿಕ ಸಂಬಂಧ ವಿಚಾರವಾಗಿ ಮಂಜುನಾಥ್ ಥಳಿಸಿದ್ದ. ಆಂತರಿಕ ರಕ್ತ ಸಾವ್ರದಿಂದ ಮಂಜುಆ ಸಾವನ್ನಪ್ಪಿದ್ದಳು. ಹೆಂಡತಿ ಅನಾರೋಗ್ಯಗೊಂಡಿದ್ದಾಳೆ ಎಂದು ಹೇಳಿ ಮೃತ ದೇಹವನ್ನು ಜಯನಗರದ ಖಾಸಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದ. ಮಂಜುಳಾ ಮೃತಪಟ್ಟ ವಿಚಾರ ತಿಳಿದ ಮಂಜುನಾಥ್ ಮೃತದೇಹವನ್ನು ಅಟೋದಲ್ಲಿಯೇ ಬಿಟ್ಟು ಪರಾರಿಯಾಗಿದ್ದ. ಈ ಕುರಿಉ ವೈದ್ಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಆ ಬಳಿಕ ಆರೋಪಿ ಮಂಜುನಾಥ್‌ನನ್ನು ಪತ್ತೆ ಮಾಡಿ ಪೊಲೀಸರು ಬಂಧಿಸಿದ್ದಾರೆ.

Bengaluru Crime News Roundup (13 Jan 2022) : Fraud in the Name of Infosys, Man Arrested for Killing Wife

ಡ್ರಗ್ ಪೆಡ್ಲರ್ ಸೆರೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್‌ನನ್ನು ಕೆ.ಜಿ. ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಜೋವಾಚಿನ್ ಒನಿಬಿಚಿ ಬಂಧಿತ ಆರೋಪಿ. ಬಂಧಿತನಿಂದ 10 ಲಕ್ಷ ರೂ. ಮೌಲ್ಯದ ಕೊಕೇನ್ ಮತ್ತು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಡಿಕಲ್ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದ ಆರೋಪಿ, ಇಲ್ಲಿ ಡ್ರಗ್ ಮಾರಾಟ ಮಾಡುತ್ತಿದ್ದ. ವೀಸಾ ಅವಧಿ ಮುಗಿದರೂ ಇಲ್ಲಿಯೇ ಅಕ್ರಮವಾಗಿ ವಾಸವಾಗಿದ್ದ. ಸಾರ್ವಜನಿಕರಿಗೆ ಡ್ರಗ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಆಧರಿಸಿ ಅರೋಪಿಯನ್ನು ಬಂಧಿಸಿದ್ದಾರೆ.

English summary
Bengaluru Crime News Roundup (13 Jan 2022) : Bengaluru: Cyber criminals duped man Rs 4 lakh in promise of offering job in Infosys. Konanakunte police arrest man for killing his wife. KG Halli police arrest drug peddler and seized drugs worth Rs 10 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X