ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ವರ್ಷದ ಹಿಂದೆ ಕಟ್ಟಿದ ಪೊಲೀಸ್ ಕ್ವಾಟ್ರಸ್ ಕುಸಿಯುವ ಭೀತಿಯಲ್ಲಿ!

|
Google Oneindia Kannada News

ಬೆಂಗಳೂರು, ಅ. 16: ಮೂರು ಕೆ.ಜಿ. ನಕಲಿ ಚಿನ್ನ ಕೊಟ್ಟು ಮೋಸ ಮಾಡಿದ್ದವ ಗುಜರಾತ್ ನಲ್ಲಿ ಬಂಧನ, ಬಾಳೆ ದಿಂಡಿಗೆ ಬುಲೆಟ್ ಹೊಡೆದು ಎಡವಟ್ಟು. ಕುಸಿದು ಬೀಳುವ ಭೀತಿಯಲ್ಲಿ ಪೊಲೀಸ್ ಕ್ವಾಟ್ರಸ್. ಇದು ಬೆಂಗಳೂರು ಅಪರಾಧ ಲೋಕದ ಚಿತ್ರಣ.

ನಕಲಿ ಚಿನ್ನ ಕೊಟ್ಟು ಒಂದೂವರೆ ಕೋಟಿ ರೂಪಾಯಿ ಪಡೆದು ವಂಚಿಸಿದ್ದ ಕಿರಾತಕ ವಂಚಕ ಕೊನೆಗೂ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಗುಜರಾತ್ ನಲ್ಲಿ ತಲೆ ಮರೆಸಿಕೊಂಡಿದ್ದ ಚಿನ್ನದ ವಂಚಕನ್ನು ಎಸ್.ಜೆ. ಪಾರ್ಕ್ ಪೊಲೀಸರು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲಿಯಾಸ್ ಬಂಧಿತ ಆರೋಪಿ. ನಗರ್ತಪೇಟೆಯ ಕೆಸಿಆರ್ ಜ್ಯುವೆಲರಿ ಅಂಡ್ ಬುಲಿಯನ್ ಮಾಲೀಕ ರಾಹುಲ್ ಗೆ ಇಲಿಯಾಸ್ ವಂಚಿಸಿ ನಾಪತ್ತೆಯಾಗಿದ್ದ. ಚಿನ್ನವನ್ನು ತಂದು ಕೊಡುತ್ತಿದ್ದ ಇಲಿಯಾಸ್ ಗೆ ರಾಹುಲ್ ನ ಸಂಪರ್ಕ ಸಿಕ್ಕಿತ್ತು. ಕಳೆದ ಎಂಟು ತಿಂಗಳಿನಿಂದ ಕೆಸಿಆರ್ ಜ್ಯುವೆಲರಿ ಮಾಲೀಕ ರಾಹುಲ್ ಗೆ ಚಿನ್ನ ಪೂರೈಸುತ್ತಿದ್ದ. ಆರಂಭದಲ್ಲಿ ತುಂಬಾ ಕಡಿಮೆ ಬೆಲೆಗೆ ಚಿನ್ನ ಕೊಟ್ಟು ನಂಬಿಕೆ ಗಳಿಸಿದ್ದ. ಕೆ.ಜಿ ಗಟ್ಟಲೆ ಚಿನ್ನವನ್ನು ರಾಹುಲ್ ಗೆ ಕೊಡುತ್ತಿದ್ದ.

Bengaluru crime news: Fear of collapsing police residential Building built two years ago

ಕಳೆದ ಜುಲೈನಲ್ಲಿ ಮೂರು ಕೆ.ಜಿ. ಚಿನ್ನದ ಬಿಸ್ಕೆಟ್ ಗಳನ್ನು ಇಲಿಯಾಸ್ ರಾಹುಲ್ ಗೆ ನೀಡಿದ್ದ. ನಂಬಿಕಸ್ತನಾಗಿದ್ದ ಇಲಿಯಾಸ್ ನೀಡಿದ ಚಿನ್ನವನ್ನು ರಾಹುಲ್ ಪರಿಶೀಲನೆ ನಡೆಸದೇ 1.30. ಕೋಟಿ ರೂ. ಹಣ ಕೊಟ್ಟಿದ್ದ. ಹಲವು ದಿನ ಚಿನ್ನವನ್ನು ತಪಾಸಣೆ ಮಾಡಿರಲಿಲ್ಲ. ಕೆಲ ದಿನಗಳ ನಂತರ ಚಿನ್ನದ ಬಿಸ್ಕೆಟ್ ಕರಗಿಸುವ ಸಂಬಂಧ ಜ್ಯುವೆಲರಿ ಅಂಗಡಿ ಮಾಲೀಕ ಪರಿಶೀಲಿಸಿದಾಗ ಕೊಟ್ಟಿ ಚಿನ್ನ ಕೊಟ್ಟು ಯಾಮಾರಿಸಿರುವ ಸಂಗತಿ ಗೊತ್ತಾಗಿದೆ. ಅಷ್ಟರಲ್ಲಿ ಇಲಿಯಾಸ್ ಬೆಂಗಳೂರು ಖಾಲಿ ಮಾಡಿದ್ದ. ಈ ಕುರಿತು ರಾಹುಲ್ ಎಸ್ ಜೆ. ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ನಕಲಿ ಚಿನ್ನ ಕೊಟ್ಟು ಹಣ ಪಡೆದು ಎಸ್ಕೇಪ್ ಆಗಿದ್ದ ಇಲಿಯಾಸ್ ಗುಜರಾತ್ ನ ಬರೋಡಾದಲ್ಲಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಅಜೀಂಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಎಸ್. ಜೆ. ಪಾರ್ಕ್ ಪೊಲೀಸ್ ಠಾಣೆ ಪೊಲೀಸರು ಪ್ರಕರಣದ ತನಿಖೆ ನಡೆಸತ್ತಿದ್ದಾರೆ.

ಅಪ್ಪನ ಗನ್‌ನಿಂದ ಮಗ ಫೈರಿಂಗ್:

ತಂದೆ ಹೆಸರಿನಲ್ಲಿರುವ ಸಿಂಗಲ್ ಬ್ಯಾರೆಲ್ ಗನ್ ಬಳಿಸಿ ಗುಂಡು ಹಾರಿಸಿದ ವ್ಯಕ್ತಿಯೊಬ್ಬ ಇದೀಗ ಬಂಧನ ಬೀತಿ ಎದುರಿಸುತ್ತಿದ್ದಾನೆ. ಗುಬ್ಬಲಾಳದ ನಿವಾಸಿ ವಸಂತ್ ಬಂಧನದ ಬೀತಿ ಎದುರಿಸುತ್ತಿರುವರು. ಸಾಮಾನ್ಯವಾಗಿ ಯಾರು ಗನ್ ಪರವಾನಗಿ ಪಡೆದಿರುತ್ತಾರೋ ಅವರೇ ಆ ಗನ್ ಬಳಕೆ ಮಾಡಬೇಕು. ವಸಂತ್ ತಂದೆ ನಾರಾಯಣಪ್ಪ ಅವರು ತೋಟದ ರಕ್ಷಣೆಗೆಂದು ಗಲ್ ಬ್ಯಾರಲ್ ಗನ್ ಪಡೆದಿದ್ದರು. ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ವಸಂತ್ ತನ್ನ ತೋಟದ ಮನೆಯ ಬಾಳೆ ದಿಂಡಿಗೆ ಗುಂಡು ಹಾರಿಸಿದ್ದ. ಈ ವಿಷಯ ಪೊಲೀಸರಿಗೆ ಗೊತ್ತಾಗಿದ್ದು, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಸಂತ್ ತಲೆ ಮರೆಸಿಕೊಂಡಿದ್ದಾರೆ. ಸಿಂಗಲ್ ಬ್ಯಾರಲ್ ಗನ್ ನ್ನು ತಲಘಟ್ಟಪುರ ಪೊಲೀಸರು ಜಪ್ತಿ ಮಾಡಿದ್ದಾರೆ.

Bengaluru crime news: Fear of collapsing police residential Building built two years ago

ವಾಲಿಕೊಂಡಿದೆ ಮತ್ತೊಂದು ಬಹುಮಹಡಿ ಕಟ್ಟಡ

ಕುಸಿಯುವ ಭೀತಿಯಲ್ಲಿ ಪೊಲೀಸ್ ಕಟ್ಟಡ: ಎರಡು ವರ್ಷದ ಹಿಂದೆ ನಿರ್ಮಾಣ ವಾಗಿದ್ದ ಬಿನ್ನಿಪೇಟೆ ಪೊಲೀಸ್ ವಸತಿ ಸಂಕೀರ್ಣದ ಬಹುಮಟ್ಟಡ ಕಟ್ಟಡ ಬಿರುಕು ಬಿಟ್ಟಿದ್ದು, ಪೊಲೀಸ್ ಕುಟುಂಬಗಳಲ್ಲಿ ಆತಂಕ ಮನೆ ಮಾಡಿದೆ. ಬೆಂಗಳೂರಿನಲ್ಲಿ ಸರಣಿ ಕಟ್ಟಡಗಳು ಕುಸಿದು ಬಿದ್ದ ಬೆನ್ನಲ್ಲೇ ಇದೀಗ ಬಿನ್ನಿಪೇಟೆ ವಸತಿ ಸಂಕೀರ್ಣದಲ್ಲಿರುವ ಪೊಲೀಸ್ ಕುಟುಂಬಗಳು ಜೀವ ಕೈಯಲ್ಲಿಟ್ಟುಕೊಂಡು ಪರದಾಡುತ್ತಿವೆ.

ಎರಡು ವರ್ಷದ ಹಿಂದೆಷ್ಟೇ ನಿರ್ಮಣವಾಗಿದ್ದ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ಏಳು ಅಂತಸ್ತಿನ ಕಟ್ಟಡ ಸುಮಾರು ಒಂದು ಅಡಿಯಷ್ಟು ಬಿರುಕು ಬಿಟ್ಟು ಸಂಪೂರ್ಣ ವಾಲಿಕೊಂಡಿದೆ. ಜಪಾನ್ ಟೆಕ್ನಾಲಜಿ ಬಳಸಿ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದ್ದ ಇಂಜಿನಿಯರ್ ಗಳ ಬಂಡವಾಳ ಈಗ ಬಯಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಏಳು ಹಂತಸ್ತಿನ ಪೊಲೀಸ್ ಕಟ್ಟಡ ಕುಸಿದು ಬೀಳುವ ಮುನ್ಸೂಚನೆ ನೀಡಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ದೂರು ನೀಡಿದ್ದು, ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

English summary
Benagaru crime news, crime news in kanannada, fake gold cheater arrest, Police residential building collapse,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X