ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

crime beat 2: ಸಾಕೇತ್ ಎನ್ಕೌಂಟರ್ ಮಾಡಿದ ಕಾಪ್ ಈಗ ಸಿಗರೇಟ್ ಸುಲಿಗೆ ಕೇಸ್ ಆರೋಪಿ

By ವಿ. ಮುರಳೀಧರ
|
Google Oneindia Kannada News

ಸಾಕೇತ್ ಎನ್ಕೌಂಟರ್ ಸ್ಪೆಷಲಿಸ್ಟ್ ಕಾಪ್ ಅಜಯ್ ಆರ್.ಎಂ ಈಗ ಲಾಕ್ಡೌನ್ ದಾಳವಾಗಿ ಬಳಸಿಕೊಂಡು ಸಿಗರೇಟ್ ಡೀಲಿಂಗ್ ಆರೋಪಿಯಾಗಿದ್ದಾರೆ.

ಅಜಯ್ ಆರ್.ಎಂ. ಯಾರು ? ಸಿಗರೇಟ್ ಡೀಲಿಂಗ್ ನಲ್ಲಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಪೊಲೀಸ್ ಇನ್ಸ್ ಪೆಕ್ಟರ್ ಅಜಯ್ ಆರ್. ಎಮ್. ಖಡಕ್ ಹಿನ್ನೆಲೆ ಹೊಂದಿದ್ದಾರೆ.

crime beat 1: ಲಾಕ್ಡೌನ್ ಟೈಮಲ್ಲಿ ಸಿಗರೇಟ್ ಸುಲಿಗೆ ಪ್ರಕರಣ crime beat 1: ಲಾಕ್ಡೌನ್ ಟೈಮಲ್ಲಿ ಸಿಗರೇಟ್ ಸುಲಿಗೆ ಪ್ರಕರಣ

ಸಿಐಐ (ಮಾವೋವಾದಿ) ಪಕ್ಷದ ರಾಜ್ಯ ಕಾರ್ಯದರ್ಶಿ ಸಾಕೇತ್ ರಾಜನ್ ಅಲಿಯಾಸ್ ಪ್ರೇಮ್ ಅವರ ಎನ್ಕೌಂಟರ್ ಪ್ರಕರಣದಲ್ಲಿ ಗ್ಯಾಲೆಂಟರಿ ಪದಕ ಪಡೆದ ಪೊಲೀಸ್ ಇಬ್ಬರು ಖಡಕ್ ಅಧಿಕಾರಿಗಳು ಶ್ರೀನಿಧಿ ಹಾಗೂ ಅಜಯ್. ಪೊಲೀಸ್ ಸಬ್ಇನ್ಸ್ ಪೆಕ್ಟರ್ ಆಗಿದ್ದ ಅಜಯ್, ಸಾಕೇತ್ ರಾಜನ್ ಎನ್ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಸೇವೆಗೆ ರಾಷ್ಟ್ರಪತಿ ನೀಡುವ ಶೌರ್ಯ ಪ್ರಶಸ್ತಿ ಪಡೆದಿದ್ದರು.

Crime Beat: Naxal Saket Rajan Encounter Specialist Cop booked in Cigarette racketeering

ಸಾಕೇತ್ ರಾಜನ್ ಮಾವೋವಾದಿ ನಾಯಕರಾಗಿದ್ದರು. ಅವರ ಕ್ರಾಂತಿಕಾರಿ ನಡೆಯ ಹಿನ್ನೆಲೆಯಲ್ಲಿ ನಕ್ಸಲ್ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು. 2005 ಫೆಬ್ರವರಿಯಲ್ಲಿ ಕಾಮ್ರೆಡ್ ಸಾಕೇತ್ ರಾಜನ್ ಅಡಗುತಾಣದ ಬಗ್ಗೆಬಜರಂಗದಳದ ಕಾರ್ಯಕರ್ತನೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದರು. ಫೆ. 6 ರಂದು ಸುಮಾರು 80 ಜನರ ಪೊಲೀಸ್ ನಾಲ್ಕು ತಂಡಗಳಾಗಿ ಶೋಧ ನಡೆಸಿದ್ದರು.

Crime Beat: Naxal Saket Rajan Encounter Specialist Cop booked in Cigarette racketeering

ಚಿಕ್ಕಮಗಳೂರಿನ ಸಮೀಪದ ಕಾಡಿನಲ್ಲಿ ತಂಗಿದ್ದ ಕಾಮ್ರೆಡ್ ಸಾಕೇತ್ ರಾಜನ್ ಮತ್ತು ಅಂಗರಕ್ಷಕ ಶಿವಲಿಂಗು ಅವರನ್ನು ಸುತ್ತು ವರೆದಿದ್ದರು. ಈ ವೇಳೆ ಸಾಕೇತ್ ರಾಜನ್ ಜೀವ ರಕ್ಷಕ ಎ.ಕೆ. 47 ಕೈಕೊಟ್ಟಿತ್ತು. ಸಾಕೇತ್ ರಾಜನ್ ತಲೆಗೆ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಎರಡು ಮೃತ ದೇಹ ಪೋಷಕರಿಗೆ ನೀಡಲು ಪೊಲೀಸರು ನಿರಾಕರಿಸಿದ್ದರು. ಕಾಮ್ರೆಡ್ ಬೆಂಬಲಿಗರು ಮತ್ತು ಸ್ನೇಹಿತರ ಒತ್ತಾಯದ ಮೇರೆಗೆ ಅಂದಿನ ಕರ್ನಾಟಕದ ಮುಖ್ಯಮಂತ್ರಿ ಭರವಸೆ ನೀಡಿದ್ದರು ಎಂಬುದು ಸಾಕೇತ್ ರಾಜನ್ ಗೆ ಮೀಸಲಾಗಿರುವ ಅಂತರ್ಜಾಲ ತಾಣದಲ್ಲಿರುವ ಮಾಹಿತಿ.

English summary
Crime Beat: Today's Lockdown Time Crime story revolves around Cigarette Robbery racketeering By three Karnataka police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X