ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಕಾಲದ ಬೆಂಗಳೂರು ರೌಡಿ ಕೊರಂಗು ಕೃಷ್ಣ ಇನ್ನಿಲ್ಲ

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಜೂನ್ 19: ಜಯರಾಜ್ ಅವರ ಕಾಲದಲ್ಲಿ ಮಿಂಚಿದ್ದ ರೌಡಿ ಕೊರಂಗು ಕೃಷ್ಣ ಇಂದು ತನ್ನ ಊರಿನಲ್ಲಿ ಕರಳುಬೇನೆಗೆ ತುತ್ತಾಗಿ ಅಸುನೀಗಿದ್ದಾನೆ. ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕೈಯಾಡಿಸಲು ಹೋಗಿ ಹೆಬ್ಬಟ್ಟು ಮಂಜ ಗ್ಯಾಂಗಿನಿಂದ ಹಲ್ಲೆಗೊಳಗಾಗಿದ್ದ

ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಕೊರಂಗುಗೆ ಮಧುಮೇಹ, ಅಧಿಕ ರಕ್ತದೊತ್ತಡ ಕೂಡಾ ಇತ್ತು. ಆಂಧ್ರದ ಚಿತ್ತೂರಿಗೆ ಮರಳಿ ಕೊನೆಕಾಲ ಕಳೆಯಲು ನಿರ್ಧರಿಸಿದ್ದ. ಆದರೆ, ಅನಾರೋಗ್ಯಕ್ಕೆ ತುತ್ತಾದ ಕೊರಂಗು ಮತ್ತೆ ಚೇತರಿಸಿಕೊಳ್ಳಲಿಲ್ಲ. ಚಿತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳುಸಕತ್ ಕಿಕ್ ಕೊಡುವ ರೌಡಿ ಶೀಟರ್ 'ಅಲಿಯಾಸ್' ಗಳು

17ನೇ ವರ್ಷಕ್ಕೆ ಭೂಗತ ಜಗತ್ತಿಗೆ ಕಾಲಿಟ್ಟ ಕೊರಂಗು ನಂತರ ಅಂದಿನ ಡಾನ್ ಜಯರಾಜ್ ಅವರ ಬಲಗೈ ಬಂಟನಾಗಿ ಬೆಳೆದಿದ್ದ. ಕೊಲೆ, ಸುಲಿಗೆ, ಕೊಲೆ ಯತ್ನ, ಕಿಡ್ನಾಪ್, ಬೆದರಿಕೆ ಹೀಗೆ 50ಕ್ಕೂ ಅಧಿಕ ಕೇಸುಗಳನ್ನು ಮೈಮೇಲೆ ಎಳೆದುಕೊಂಡಿದ್ದವ.

ಜೈಲಲ್ಲೇ ಕುಳಿತು ಸ್ಕೆಚ್:

ಜೈಲಲ್ಲೇ ಕುಳಿತು ಸ್ಕೆಚ್:

ಕೊಗಿಲು ಕ್ರಾಸ್ ದಾಸನಪುರ ಎಪಿಎಂಸಿ ಯಾರ್ಡ್ ಬಳಿ ಕಡಬಗೆರೆ ಶ್ರೀನಿವಾಸ ಮೇಲೆ ಅಪರಿಚಿತರು ಗುಂಡು ಹಾರಿಸಿದ್ದರು. 2016ರ ಫೆಬ್ರವರಿಯಲ್ಲಿ ನಡೆದ ಈ ಘಟನೆಗೆ ಬಳ್ಳಾರಿ ಜೈಲಿನಲ್ಲಿ ಕುಳಿತೇ ಕೊರಂಗು ಕೃಷ್ಣ ಸ್ಕೆಚ್ ಹಾಕಿದ್ದ.

ಡಿಸಿಪಿ ಎಂ ನಾರಾಯಣ ನೇತೃತ್ವದ ತಂಡ ಬಳ್ಳಾರಿಯಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ನಡೆಸಿದ್ದರು. 2011ರಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಸ್ಪಿಗೆ ಅವಾಜ್ ಹಾಕಿ ಹಲ್ಲೆ ನಡೆಸಲು ಯತ್ನಿಸಿದ್ದರಿಂದ ಬಳ್ಳಾರಿ ಜೈಲಿಗೆ ಹಾಕಲಾಗಿತ್ತು.

ಲೋ..ಎಸ್ಪಿ ಹೊರಗೆ ಬಾರೋ ನೋಡ್ಕೊತೀನೋ ನಿನ್ನಲೋ..ಎಸ್ಪಿ ಹೊರಗೆ ಬಾರೋ ನೋಡ್ಕೊತೀನೋ ನಿನ್ನ

ರೌಡಿ ಬಲರಾಮ್ ಕೊಲೆ

ರೌಡಿ ಬಲರಾಮ್ ಕೊಲೆ

ಕೊರಂಗು ಆಪ್ತ ತಿಮ್ಮೇನಹಳ್ಳಿ ತಮ್ಮಯ್ಯನಿಗೆ ಬಲರಾಮ ಬೈದಿದ್ದಕ್ಕೆ ಸಿಟ್ಟಿಗೆದ್ದು ಬಲರಾಮನನ್ನು ಕೊರಂಗು ಕೊಲ್ಲಿಸಿದ್ದ. ಬೆಂಗಳೂರಿನ ಹಳೆ ಸೆಂಟ್ರಲ್ ಜೈಲಿನಲ್ಲಿದ್ದ ಬಲರಾಮನನ್ನು ಜೈಲಿನಲ್ಲೇ ಕೊಲೆ ಮಾಡಿಸಿದ್ದ ಕೊರಂಗು.

ಬಲರಾಮನ ಶಿಷ್ಯ ಹೆಬ್ಬೆಟ್ಟು ಮಂಜ ತನ್ನ ಗುರುವಿನ ಸಾವಿನ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕಿ ಹಿರಿಯೂರಿನ ಬಳಿ ಡಾಬದಲ್ಲಿದ್ದ ಕೊರಂಗು ಮೇಲೆ ದಾಳಿ ಮಾಡಿದ್ದ ಅಂದು ಜೊತೆಗಿದ್ದ ದೀಪು ಸತ್ತಿದ್ದ, ಕೊರಂಗು ಬದುಕಿದ್ದ.

ಕುಟ್ಟಿ ಅಲಿಯಾಸ್ ತಿರು vs ವಿಜಿ ಅಲಿಯಾಸ್ ಕವಳಕುಟ್ಟಿ ಅಲಿಯಾಸ್ ತಿರು vs ವಿಜಿ ಅಲಿಯಾಸ್ ಕವಳ

ವಿದೇಶದಿಂದ ಡೀಲ್

ವಿದೇಶದಿಂದ ಡೀಲ್

ಹೆಬ್ಬೆಟ್ಟು ಮಂಜ ತನ್ನ ಬಾಲ್ಯ ಸ್ನೇಹಿತ ಅಶ್ರಫ್ ಗೆ ಸುಪಾರಿ ನೀಡಿದ್ದ. ಅಶ್ರಫ್ ಹಾಗೂ ನದೀಮ್ ಇಬ್ಬರು ಕೇರಳದಿಂದ ಗನ್ ತರೆಸಿಕೊಂಡು ಅಂಬರೀಷ್ ಮೂಲಕ ಕೊರಂಗು ಕೃಷ್ಣ ಹತ್ಯೆಗೆ ಸ್ಕೆಚ್ ಹಾಕಿದ್ದರು. ಆದರೆ, ಸುಪಾರಿ ಪಡೆದವರು ಶಿವಮೊಗ್ಗ ಜಿಲ್ಲೆ ಮಂಡಗದ್ದೆಯ ಅಡಿಕೆ ತೋಟದಲ್ಲಿದ್ದಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಬಂಧಿತರ ಬಳಿ 4 ಗನ್ 48 ಸಜೀವ ಗುಂಡು ವಶವಾಗಿತ್ತು.

ಉಪೇಂದ್ರ ಅವರ ಓಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೊರಂಗು

ಉಪೇಂದ್ರ ಅವರ ಓಂ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಕೊರಂಗು

ಉಪೇಂದ್ರ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ''ಓಂ'' ಸಿನಿಮಾದಲ್ಲಿ ರಿಯಲ್ ರೌಡಿಗಳನ್ನು ಬಳಸಿಕೊಳ್ಳಲಾಗಿತ್ತು. ಅಂದಿನ ಕಾಲದ ಅಂದಿನ ರೌಡಿಗಳು ಬಣ್ಣ ಹಚ್ಚಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಕೊರಂಗು ಕೃಷ್ಣ ಅಲ್ಲದೆ, ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್​, ಸಿನಿಮಾದಲ್ಲಿ ನಟಿಸಿದ್ದರು. ಮುತ್ತಪ್ಪ ರೈ ನಂತರ ಆ ಕಾಲದ ಪಂಟರ್, ರೌಡಿ ಕೊರಂಗು ಕಥೆ ಕೂಡಾ ಅಂತ್ಯವಾಗಿದೆ. ಸುಬ್ರಹ್ಮಣ್ಯ ನಾಯ್ಡು ಅವರ ಪುತ್ರ, ರಾಜರಾಜೇಶ್ವರಿ ನಗರದ ರಾಜಕೀಯ ಮುಖಂಡ, ನಿರ್ಮಾಪಕ ಮುನಿರತ್ನಂ ನಾಯ್ಡು ಸೋದರ ಕೊರಂಗು ಚಾಪ್ಟರ್ ಕ್ಲೋಸ್ ಆಗಿದೆ.

English summary
Crime Beat: Banaglore Rowdy Korangu Krishna died in his native Chittoor hospital due to Liver problem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X