ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಕಲಮ್ ಕಂಪನಿಯಿಂದ ಆಚಾರ್ಯ ಕ್ರಿಕೆಟ್ ಕಪ್ ಲೈವ್

By Mahesh
|
Google Oneindia Kannada News

ಬೆಂಗಳೂರು, ಫೆ.19: ಆಚಾರ್ಯ ಇನ್ಸ್ ಸ್ಟಿಟ್ಯೂಟ್ ಸಂಸ್ಥೆ ಆಯೋಜನೆಯ ವಾರ್ಷಿಕ ಹಬ್ಬದ ಅಂಗವಾಗಿ ಮಾಧ್ಯಮ ವಲಯಕ್ಕಾಗಿ ವಿಶೇಷ ಕ್ರಿಕೆಟ್ ಟೂರ್ನಮೆಂಟ್ ಆರಂಭಗೊಂಡಿದೆ. ಮಾಧ್ಯಮ ಸಂಸ್ಥೆಗಳ ಕ್ರಿಕೆಟ್ ಕಾದಾಟವನ್ನು ಈ ಬಾರಿ ನ್ಯೂಜಿಲೆಂಡ್ ಮೂಲದ ಕ್ರಿಕ್ ಎಚ್ ಕ್ಯೂ ಸಂಸ್ಥೆ ನೇರವಾಗಿ ಪ್ರಸಾರ ಮಾಡುತ್ತಿದೆ. ಈ ಮಾಧ್ಯಮ ಕಪ್ ಟೂರ್ನಮೆಂಟ್ ಗೆ ಒನ್ಇಂಡಿಯಾ ಸಂಸ್ಥೆ ಅಧಿಕೃತ ಆನ್ ಲೈನ್ ಮೀಡಿಯಾ ಪಾರ್ಟನರ್ ಆಗಿದೆ.

ಆಚಾರ್ಯ ಮೀಡಿಯಾ ಕಪ್ 2014ರ ಆಧಿಕೃತ ತಂತ್ರಜ್ಞಾನ ಸಹಯೋಗ ಸಂಸ್ಥೆಯಾಗಿರುವ ಕ್ರಿಕ್ ಎಚ್ ಕ್ಯೂ ಸತತವಾಗಿ ಕ್ರಿಕೆಟ್ ಪಂದ್ಯಗಳನ್ನು ಲೈವ್ ಆಗಿ ನೀಡಲಿದೆ. ಇದರ ಜತೆಗೆ ಮೊಬೈಲ್ ಅಪ್ಲಿಕೇಷನ್ ಮೂಲಕ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುವ ಸೌಲಭ್ಯವನ್ನು ಕಲ್ಪಿಸಿದ್ದಾರೆ.

CricHQ announced as the official technology partner of the Acharya Media Cup-2014

ಫೆ. 20, 21 ಹಾಗೂ 22 ರಂದು ಟೆನ್ನಿಸ್ ಬಾಲ್ ನಾಕೌಟ್ ಟೂರ್ನಮೆಂಟ್ ನಡೆಯಲಿದೆ. ಫೆ.22ರಂದು ಉಪಾಂತ್ಯ ಹಾಗೂ ಅಂತಿಮ ಹಣಾಹಣಿ ನಡೆಯಲಿದೆ. ಎಲ್ಲಾ ಪಂದ್ಯಗಳನ್ನು ವೆಬ್ ಲಿಂಕ್ ಮೂಲಕ ನೇರ ಪ್ರಸಾರ ಮಾಡಲು ಆಯೋಜಕರು ಉದ್ದೇಶಿಸಿದ್ದಾರೆ. ಆಪಲ್ ಐಸ್ಟೋರ್ , ಗೂಗಲ್ ಪ್ಲೇ ನಲ್ಲಿ CricHQ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು ಕೂಡಾ ಲೈವ್ ವೀಕ್ಷಣೆ ಮಾಡಬಹುದು.

CricHQ announced as the official technology partner of the Acharya Media Cup-2014

ಐಸಿಸಿ, ಶ್ರೀಲಂಕಾ ಕ್ರಿಕೆಟ್ ಮಂಡಳಿ, ನ್ಯೂಜಿಲೆಂಡ್ ಕ್ರಿಕೆಟ್, ಕೇರಳ ಕ್ರಿಕೆಟ್ ಮಂಡಳಿ ಸೇರಿದಂತೆ ಸುಮಾರು 120 ಕ್ಕೂ ಅಧಿಕ ಸಂಸ್ಥೆಗಳು ವಿಶ್ವದಾದ್ಯಂತ ಈ ರೀತಿ ನೇರ ಪ್ರಸಾರ ಸಿಆರ್ ಎಂ ವ್ಯವಸ್ಥೆಯನ್ನು ಬಳಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಮಾಧ್ಯಮ ಕಪ್ ಗಾಗಿ ಕ್ರಿಕ್ ಎಚ್ ಕ್ಯೂ ಈ ಸೌಲಭ್ಯ ಒದಗಿಸುತ್ತಿದೆ ಎಂದು ಸಂಸ್ಥೆಯ ಕ್ರಿಕ್ ಎಚ್ ಕ್ಯೂ ಸಿಇಒ ಸಿಮೋನ್ ಬಾಕರ್ ಹೇಳಿದ್ದಾರೆ.

ನ್ಯೂಜಿಲೆಂಡ್ ಮೂಲದ ಉದ್ಯಮಿ ಸಿಮೋನ್ ಬಾಕಲ್, ಮಾಜಿ ಕ್ರಿಕೆಟರ್ ಸ್ಟೀಫನ್ ಫ್ಲೆಮಿಂಗ್ ಹಾಗೂ ಕಿವೀಸ್ ತಂಡದ ನಾಯಕ ಬ್ರೆಂಡನ್ ಮೆಕಲಮ್ ಅವರಿಂದ 2010ರಲ್ಲಿ ಕ್ರಿಕ್ ಎಚ್ ಕ್ಯೂ ಸಂಸ್ಥೆ ಸ್ಥಾಪನೆಗೊಂಡಿದೆ. ಭಾರತದಲ್ಲಿ ಚೆನ್ನೈ ಹಾಗೂ ಕೊಚ್ಚಿಯಲ್ಲಿ ಕಚೇರಿ ಹೊಂದಿದ್ದು, 7ಕ್ಕೂ ಅಧಿಕ ರಾಷ್ಟ್ರಗಳಲ್ಲಿ 70 ಕ್ಕೂ ಅಧಿಕ ತಜ್ಞರು ಕ್ರಿಕೆಟ್ ನೇರ ಪ್ರಸಾರ, ವಿಶ್ಲೇಷಣೆ, ಲೈವ್ ಸ್ಕೋರ್ ಕಾರ್ಡ್ ಒದಗಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ : ಕ್ರಿಕ್ ಎಚ್ ಕ್ಯೂ ವೆಬ್ ತಾಣ
ಇಮೇಲ್ : [email protected]
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸಂತೋಷ್ ಅನಂತಪುರ: 98457 19566, 080 2333 22222
ಗಂಗಾಧರ್ ಜಿಎಸ್ : 93418 52633

English summary
CricHQ announced as the official technology partner of the Acharya Media Cup-2014. Acharya institute is pleased to announce the appointment of CricHQ as the official scoring and technology partner for this year’s Acharya Media Cup, which will be held from the 20th to 22nd of Feb, 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X