ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೆಡಿಟ್ ಕಾರ್ಡ್‌ ಕಾಲ್‌ಸೆಂಟರ್ ಹೆಸರಿನಲ್ಲಿ 85 ಜನರಿಗೆ ವಂಚನೆ

|
Google Oneindia Kannada News

ಬೆಂಗಳೂರು, ಜ. 24: ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ ? ಕಾರ್ಡ್ ಕುರಿತು ಕಾಲ್ ಸೆಂಟರ್‌ಗೆ ಕರೆ ಮಾಡುವ ಮುನ್ನ ನೂರು ಬಾರಿ ಆಲೋಚಿಸಿ. ಕ್ರೆಡಿಟ್ ಕಾರ್ಡ್ ಸಮಸ್ಯೆ ಇತ್ಯರ್ಥ ಪಡಿಸುವ ಸೋಗಿನಲ್ಲಿ ಕರೆ ಮಾಡುವ ಸೈಬರ್ ವಂಚಕರು ಕ್ರೆಡಿಟ್ ಕಾರ್ಡ್‌ನ ವಿವರಗಳನ್ನು ಪಡೆದು ಹಣ ವರ್ಗಾಯಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಕಳೆದ ಹದಿನೈದು ದಿನದಲ್ಲಿ ಬೆಂಗಳೂರು ನಗರದಲ್ಲಿ ಕ್ರೆಡಿಟ್ ಕಾರ್ಡ್ ವಿವರ ಪಡೆದು 85 ಮಂದಿಗೆ ವಂಚಿಸಿದ್ದಾರೆ. ಲಕ್ಷಾಂತರ ಹಣವನ್ನು ಪಡೆದು ಮೋಸ ಮಾಡಿದ್ದಾರೆ. ಸೈಬರ್ ವಂಚಕರ ಉಪಟಳ ತಾಳಲಾರದೇ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಹೊಸ ಐಡಿಯಾ:

ಈವರೆಗೂ ಒಟಿಪಿ ಪಡೆದು ಸೈಬರ್ ವಂಚಕರು ಮೋಸ ಮಾಡುತ್ತಿದ್ದರು. ಇದೀಗ ಹೊಸ ಹಾದಿ ಕಂಡು ಕೋಂಡಿದ್ದಾರೆ. ಕ್ರೆಡಿಟ್ ಕಾರ್ಡ್ ನ ಸಮಸ್ಯೆಗೆ ಸಂಬಂಧಿಸಿದಂತೆ ಕಾಲ್ ಸೆಂಟರ್‌ಗೆ ಕರೆ ಮಾಡಿ ದೂರು ಕೊಟ್ಟಿರುವ ಗ್ರಾಹಕರನ್ನು ಟಾರ್ಗೆಟ್ ಮಾಡಿ ಕರೆ ಮಾಡುತ್ತಾರೆ.

ಕ್ರೆಡಿಟ್ ಕಾರ್ಡ್ ಸಮಸ್ಯೆ ಇತ್ಯರ್ಥ ಪಡಿಸುವ ಸೋಗಿನಲ್ಲಿ Any Desk ಆಪ್ ಮೂಲಕ ಮೊಬೈಲ್‌ ಅನ್ನು ರಿಮೂಟ್ ಮೂಲಕ ನಿರ್ವಹಣೆಗೆ ತೆಗೆದುಕೊಳ್ಳುತ್ತಾರೆ. ಈ ವೇಳೆ ಕ್ರೆಡಿಟ್ ಕಾರ್ಡ್ ನಲ್ಲಿರುವ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ನಾಮ ಹಾಕುತ್ತಿದ್ದಾರೆ.

Bengaluru : Credit card customers are the target for cyber frauds; cheat 85 customers

ಈ ಮೊದಲು ಗಿಫ್ಟ್ ಕಳಿಸುವ ಸೋಗಿನಲ್ಲಿ ವಂಚಿಸುತ್ತಿದ್ದರು. ಅಲ್ಲದೇ ಡೆಬಿಟ್ ಕಾರ್ಡ್ ವಿವರ ಸ್ಕಿಮ್ಮಿಂಗ್ ಮೂಲಕ ಪಡೆದು ದ್ರೋಹ ಮಾಡುತ್ತಿದ್ದರು. ಇದೀಗ ಹೊಸ ತಂತ್ರಜ್ಞಾನ ಬಳಸಿ ಎನಿಡೆಸ್ಕ್ ಆಪ್ ಮೂಲಕವೇ ಮೊಬೈಲ್ ರಿಮೋಟ್ ಪಡೆದು ಮೋಸ ಮಾಡುತ್ತಿದ್ದಾರೆ. ವಿಪರ್ಯಾಸವೆಂದರೆ ಕ್ರೆಡಿಟ್ ಕಾರ್ಡ್ ವಿಷಯಕ್ಕೆ ಸಂಬಂಧಸಿದಂತೆ ಕಾಲ್ ಸೆಂಟರ್ ಗೆ ಕರೆ ಮಾಡಿರುವರನ್ನೇ ಟಾರ್ಗೆಟ್ ಮಾಡಿ ದೋಖಾ ಮಾಡುತ್ತಿದ್ದಾರೆ. ಈ ಸೈಬರ್ ದೂರುಗಳಿಂದ ಕಂಗಾಲಾಗಿರುವ ಪೊಲೀಸರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ಸೈಬರ್ ವಂಚಕರ ಜಾಲ ಪತ್ತೆಗೆ ಮುಂದಾಗಿದ್ದಾರೆ.

Bengaluru : Credit card customers are the target for cyber frauds; cheat 85 customers

ಉತ್ತರ ಭಾರತ ಮೂಲದ ವಂಚಕರು ಕಸ್ಟಮರ್ ಕೇರ್ ಸೋಗಿನಲ್ಲಿ ಕರೆ ಮಾಡಿ ಪರಿಚಯಿಸಿಕೊಳ್ಳುತ್ತಾರೆ. ಗ್ರಾಹಕನ ನಂಬಿಕೆ ಗಳಿಸುತ್ತಿದ್ದಾರೆ. ಆನಂತರ ಕ್ರೆಡಿಟ್ ಕಾರ್ಡ್ ವಿವರ ಪಡೆಯುತ್ತಾರೆ. ಅದಾದ ಬಳಿಕ ಕ್ರೆಡಿಟ್ ಕಾರ್ಡ್ ಹಣ ವರ್ಗಾವಣೆ ಮಾಡಿಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಇದೇ ರೀತಿ ಬೆಂಗಳೂರಿನಲ್ಲಿ ನೂರಾರು ಮಂದಿಗೆ ಮೋಸ ಮಾಡಿದ್ದು ಹದಿನೈದು ದಿನದಲ್ಲಿ 85 ವಂಚನೆ ಪ್ರಕರಣ ದಾಖಲಾಗಿದ್ದು, ಸೈಬರ್ ವಂಚಕರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Bengaluru : Credit card customers are the target for cyber frauds; cheat 85 customers

ಸೈಬರ್ ವಂಚನೆ ಜಾಗೃತಿ ಒಂದೇ ಪರಿಹಾರ :
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಬಳಕೆದಾರರು ಎಚ್ಚರಿಕೆಯಿಂದ ಕಾರ್ಡ್ ಬಳಸಬೇಕು. ಕಸ್ಟಮರ್ ಕೇರ್ ನಿಂದ ಕರೆ ಮಾಡಿದ್ರೂ ಕಾರ್ಡ್ ನ ಸಂಪೂರ್ಣ ವಿವರ ಕೊಡಲೇಬಾರದು. ಒಟಿಪಿ, ಪಾಸ್ ವರ್ಡ್ ಯಾರೂ ಕೇಳುವಂತಿಲ್ಲ. ಈ ಬಗ್ಗೆ ಜನರು ಜಾಗೃತಿ ವಹಸಬೇಕು. ಇನ್ನು ಗ್ರಾಹಕರಿಂದ 10 ಸಾವಿರ, 20 ಸಾವಿರ ವಂಚನೆ ಮಾಡುವ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಬೆಂಗಳೂರು ಪೊಲೀಸರು ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ. ಸೈಬರ್ ವಂಚನೆ ನಿಯಂತ್ರಿಸಲು ಪೊಲೀಸರು ತಾಂತ್ರಿಕವಾಗಿ ನಿಪುಣರಾಗಬೇಕು. ಸೈಬರ್ ಲಾ ನಲ್ಲಿ ನಿಪುಣತೆ ಸಾಧಿಸಬೇಕು. ಸೈಬರ್ ವಂಚನೆ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೈಬರ್ ತಜ್ಞ ನಾ. ವಿಜಯ ಶಂಕರ್ ಅವರು 'ಒನ್‌ಇಂಡಿಯಾ ಕನ್ನಡ' ಕ್ಕೆ ತಿಳಿಸಿದ್ದಾರೆ.

Recommended Video

Rahul Rocket Throw: ವಾವ್ ಕನ್ನಡಿಗನ‌ ಫಿಲ್ಡಿಂಗ್ ವಿಡಿಯೋ ಸಖತ್ ವೈರಲ್ | Oneindia Kannada

English summary
Bengaluru : Credit card customers are the target for cyber frauds; cheats 85 customers in 15 days. Cyber police registered cases. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X