ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ವಿಶೇಷ ಕ್ರ್ಯಾಶ್ ಕೋರ್ಸ್ ಬಗ್ಗೆ ಅಶ್ವತ್ಥ ನಾರಾಯಣ ಮಾಹಿತಿ

|
Google Oneindia Kannada News

ಬೆಂಗಳೂರು, ಮೇ 13: ಸಿಇಟಿ, ನೀಟ್ ವಿದ್ಯಾರ್ಥಿಗಳಿಗೆ ಕ್ರ್ಯಾಶ್ ಕೋರ್ಸ್ ಕುರಿತು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ. ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.

ಸಿಇಟಿ, ನೀಟ್ ಪರೀಕ್ಷೆ ನಡೆಯುವವರೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರ್ಯಾಶ್ ಕೋರ್ಸ್ ನಡೆಸಲಾಗುತ್ತದೆ. ಗೆಟ್ ಸಿಇಟಿ ಗೋ ಹೆಸರಿನಲ್ಲಿ ನಡೆಯಲಿದೆ.

Breaking:ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆ: 1 ಸಾವು Breaking:ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆ: 1 ಸಾವು

ಲಾಕ್‌ಡೌನ್ ಹಿನ್ನಲೆಯಲ್ಲಿ ಸಿಇಟಿ ಹಾಗೂ ನೀಟಗ ಪರೀಕ್ಷೆಗಳನ್ನು ಮುಂದೂಡಲಾಗಿದೆ.ಹೀಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕ್ರ್ಯಾಶ್‌ಕೋರ್ಸ್ ತರಗತಿ ಆರಂಭಿಸಲಾಗಿದೆ ಎಂದರು.

Crash Course For CET NEET Students

ಆನ್ ಲೈನ್ ಮೂಲಕ ತರಬೇತಿ ನೀಡಲಾಗುತ್ತಿದೆ. ಸಿಇಟಿ, ನೀಟ್ ಗೆ ಅನುಕೂಲವಾಗುವ ವಿಡಿಯೋ, ಟೆಸ್ಟ್, ಪಠ್ಯಗಳ ವಿವರ ಈ ಕೋರ್ಸ್ ನಲ್ಲಿ ಇಲ್ಲಿದೆ. ಈಗಾಗಲೇ ಕೋರ್ಸ್ ಪ್ರಾರಂಭ ಆಗಿದೆ.

160510 ಜನ ಈಗಾಗಲೇ ಈ ಪೇಜ್ ನೋಡಿದ್ದಾರೆ., 76913 ವಿದ್ಯಾರ್ಥಿಗಳು ಲಾಗಿನ್., 38 ಸಾವಿರ ವಿದ್ಯಾರ್ಥಿಗಳು ಆಪ್ ಮೂಲಕ ಲಾಗಿನ್ ಆಗಿದ್ದಾರೆ., 38 ಸಾವಿರ ವಿದ್ಯಾರ್ಥಿಗಳು ವೆಬ್ ಪೋರ್ಟಲ್ ಮೂಲಕ ಲಾಗಿನ್ ಆಗಿದ್ದಾರೆ., 51975 ವಿದ್ಯಾರ್ಥಿಗಳು ಈಗಾಗಲೇ ಟೆಸ್ಟ್ ತೆಗೆದುಕೊಂಡಿದ್ದಾರೆ.ಸಹಾಯವಾಣಿಯನ್ನು ಕೂಡಾ ಪ್ರಾರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಕೊವಿಡ್19 ಸಾಂಕ್ರಾಮಿಕ ರೋಗದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಕಷ್ಟ ಹೇಳತೀರದು, ಅದರಲ್ಲೂ ವಿಶೇಷವಾಗಿ ದ್ವಿತೀಯ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಇಂತಹ ಕಷ್ಟದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ವಿದ್ಯಾರ್ಥಿ ಸಮೂಹಕ್ಕೆ ಸಹಕಾರ ನೀಡುವುದರೊಂದಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

English summary
Karnataka Government Providing Online Crash Courses For CET, NEET Students Says DCM Ashwath Narayan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X