ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ವಾರಿಯರ್ಸ್-ಪೊಲೀಸರಿಗೆ ಟಿವಿಎಸ್ ಅಪಾಚೆ ಬೈಕ್

|
Google Oneindia Kannada News

ಬೆಂಗಳೂರು, ನ. 12: ಕೋವಿಡ್-19 ವಿರುದ್ಧ ನಿರ್ಣಾಯಕ ಹೋರಾಟ ನಡೆಸಿರುವ ಕರ್ನಾಟಕ ಸರ್ಕಾರದ ಜೊತೆಗೆ ಟಿವಿಎಸ್ ಮೋಟರ್ಸ್ ಜೂನ್ ತಿಂಗಳಿನಿಂದಲೇ ಕೈಜೋಡಿಸಿದೆ. ಸರ್ಕಾರದ ಕ್ರಮಗಳನ್ನು ಬೆಂಬಲಿಸುವುದರ ಜೊತೆಗೆ ಕೊರೊನಾ ವಾರಿಯರ್ಸ್ ಗೆ ಅಗತ್ಯವಾಗಿ ಬೇಕಿರುವ ವೈದ್ಯಕೀಯ ಸಾಧನಗಳನ್ನು ಈ ಹಿಂದೆ ನೀಡಿತ್ತು. ಈಗ ಕೋವಿಡ್ 19 ವಾರಿಯರ್ಸ್ ಗಳೆನಿಸಿರುವ ಬೆಂಗಳೂರು ಪೊಲೀಸರಿಗೆ ಕಂಪನಿಯ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ ಟಿವಿಎಸ್ ಅಪಾಚೆ ಬೈಕ್ ಗಳನ್ನು ನೀಡಲಾಗಿದೆ.

ವಿಶ್ವದಲ್ಲಿ ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹಗಳನ್ನು ಉತ್ಪಾದಿಸುವ ಪ್ರತಿಷ್ಠಿತ ಕಂಪನಿಯಾದ ಟಿವಿಎಸ್ ಮೋಟರ್ ಕಂಪನಿಯ ಪ್ರಿಮಿಯಮ್ ಮೋಟರ್ ಸೈಕಲ್ ಬ್ರಾಂಡ್ ಟಿವಿಎಸ್ ಅಪಾಚೆ ಜಾಗತಿಕ ಮಟ್ಟದಲ್ಲಿ 40 ಲಕ್ಷ ಮಾರಾಟದ ಮೈಲುಗಲ್ಲು ದಾಟಿದೆ.

ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್ರಾಜ್ಯ ಸರ್ಕಾರಕ್ಕೆ 3 ಸಾವಿರ ಪಿಪಿಇ ಕಿಟ್ ನೀಡಿದ ಟಿವಿಎಸ್ ಮೋಟರ್ಸ್

ಟಿವಿಎಸ್ ಮೋಟಾರ್ ಸಂಸ್ಥೆಯ (ಮಾರ್ಕೆಟಿಂಗ್) ಪ್ರೀಮಿಯಂ ಮೋಟರ್ ಸೈಕಲ್ಸ್, ಮುಖ್ಯಸ್ಥ - ಮೇಘಶ್ಯಾಮ್ ದಿಘೋಲೆ, ಅವರು ಇಂದು 25 ಟಿವಿಎಸ್ ಅಪಾಚೆ ಆರ್‍ಟಿಆರ್ 160 ಮೋಟಾರ್ ಸೈಕಲ್ ಗಳನ್ನು ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಗೌರವಾನ್ವಿತ ಸಚಿವರು - ಗೃಹ, ಕರ್ನಾಟಕ ಸರ್ಕಾರ - ಬಸವರಾಜ್ ಬೊಮ್ಮಾಯಿ ಮತ್ತು ಬೆಂಗಳೂರಿನ ಪೊಲೀಸ್ ಆಯುಕ್ತರು -ಕಮಲ್ ಪಂತ್ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದರು. ಈ ಕಾರ್ಯಕ್ರಮವು ನಮ್ಮ ಮುಂಚೂಣಿ ಕಾರ್ಮಿಕರನ್ನು ಬೆಂಬಲಿಸುವ ಸಂಸ್ಥೆಯ ಬದ್ಧತೆಯ ಭಾಗವಾಗಿದೆ.

Covid19: TVS Apache RTR 160 motorcycles to the Bengaluru Police personnel

ಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟ ಹೊಸ ಮೈಲಿಗಲ್ಲು: ಟಿವಿಎಸ್ ಸಂಸ್ಥೆಯ ಅಪಾಚೆ 40 ಲಕ್ಷ ಮಾರಾಟ

ಟಿವಿಎಸ್ ಅಪಾಚೆ ಸರಣಿಯು ಪ್ರಿಮಿಯಂ ಮೋಟರ್ ಸೈಕಲ್ ಬ್ರಾಂಡ್ ಆಗಿದ್ದು, ನೇಕೆಡ್ ಹಾಗೂ ಸೂಪರ್ ಸ್ಪೋರ್ಟ್ಸ್ ಹೀಗೆ ಎರಡು ವರ್ಗಗಳಲ್ಲಿದೆ. ಆರ್‍ಟಿಆರ್ (ರೇಸಿಂಗ್ ಥ್ರೋಟಲ್ ರೆಸ್ಪಾನ್ಸ್) ಸರಣಿಯ ನೇಕೆಡ್ ಮೋಟರ್ ಸೈಕಲ್ ವರ್ಗದಲ್ಲಿ ಟಿವಿಎಸ್ ಅಪಾಚೆ ಆರ್‍ಟಿಆರ್160, ಟಿವಿಎಸ್ ಅಪಾಚೆ ಆರ್‍ಟಿಆರ್ 1604ವಿ, ಟಿವಿಎಸ್ ಅಪಾಚೆ ಆರ್‍ಟಿಆರ್ 180 ಮತ್ತು ಟಿವಿಎಸ್ ಅಪಾಚೆ ಆರ್‍ಟಿಆರ್200 4ವಿಯನ್ನು ಹೊಂದಿದೆ.

English summary
TVS Motor Company handed over 25 units of TVS Apache RTR 160 motorcycles to the Bangalore City Police personnel in the presence of Home minister Basavaraj Bommai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X