ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೊಜ್ಜು ಹೊಂದಿರುವ ಕೊರೊನಾ ಸೋಂಕಿತರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ ನಿಜವೇ?

|
Google Oneindia Kannada News

ಬೆಂಗಳೂರು,ಫೆಬ್ರವರಿ 13: ಬೊಜ್ಜು ಹೊಂದಿರುವ ವ್ಯಕ್ತಿಗಳ ಮೇಲೆ ಕೊರೊನಾ ಲಸಿಕೆ ಪರಿಣಾಮ ಬೀರುವುದಿಲ್ಲ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಇಡೀ ವಿಶ್ವದ ಜನತೆ ಕೊರೊನಾ ಭಯದಿಂದ ನಡುಗುತ್ತಿದೆ, ಹೀಗಿರುವಾಗ ತಜ್ಞರು ನೀಡಿದ ಈ ವರದಿ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.ಬೊಜ್ಜು ಹಾಗೂ ಕೊರೊನಾ ನಡುವೆ ನೇರ ಸಂಬಂಧವಿದೆಯೇ ಎಂಬುದಕ್ಕೆ ಸಾಕಷ್ಟು ಅಧ್ಯಯನಗಳು ಬೇಕಿವೆ.

ವದಂತಿಗಳಿಗೆ ಕಿವಿಕೊಡಬೇಡಿ, ವ್ಯಾಕ್ಸಿನ್ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿವದಂತಿಗಳಿಗೆ ಕಿವಿಕೊಡಬೇಡಿ, ವ್ಯಾಕ್ಸಿನ್ ಅತ್ಯಂತ ಸುರಕ್ಷಿತ: ಜಿಲ್ಲಾಧಿಕಾರಿ

ಈ ವರ್ಗಗಳಲ್ಲಿ ಪರಿಣಾಮಗಳು ಭಿನ್ನವಾಗಿರಬಹುದು, ಆದಾಗ್ಯೂ,ಲಸಿಕೆಗಳನ್ನು ಅಭಿವೃದ್ಧಿಗೊಳಿಸಲು ವಿಭಿನ್ನ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ ಎಂದು ಪರಿಗಣಿಸಿ ಕೊರೊನಾ ಲಸಿಕೆಗಳ ಪ್ರತಿಕ್ರಿಯೆ ಅಥವಾ ಪರಿಣಾಮವನ್ನು ಅಧ್ಯಯನ ಮಾಡಲು ಹೆಚ್ಚಿನ ಡೇಟಾಗಳು ಬೇಕಾಗುತ್ತದೆ.

ಬೊಜ್ಜು ಹೊಂದಿರುವವರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ

ಬೊಜ್ಜು ಹೊಂದಿರುವವರ ಮೇಲೆ ಲಸಿಕೆ ಪರಿಣಾಮ ಬೀರುವುದಿಲ್ಲ

ಜ್ವರ ಅಥವಾ ಇತರೆ ಕಾಯಿಲೆ ಇರುವವರಿಗೆ ಲಸಿಕೆ ನೀಡಿದಾಗ ತೆಳ್ಳಗಿರುವವರ ಮೇಲೆ ಪರಿಣಾಮ ಬೀರಿದಷ್ಟು ಬೊಜ್ಜು ಹೊಂದಿರುವ ವ್ಯಕ್ತಿಗಳ ಮೇಲೆ ಲಸಿಕೆ ಪರಿಣಾಮ ಬೀರಿಲ್ಲ. ಆದರೂ, ನಾವು ಕಾಯಲೇ ಬೇಕು ಎಂದು ತಜ್ಞರು ಹೇಳಿದ್ದಾರೆ.
ಕರ್ನಾಟಕದಲ್ಲಿ ಬಳ್ಳಾರಿ ಮೂಲದ 43 ವರ್ಷದ ವ್ಯಕ್ತಿ ಲಸಿಕೆ ತೆಗೆದುಕೊಂಡ ಬಳಿಕ ಮೃತಪಟ್ಟಿದ್ದಾರೆ. ಮಯೋಕಾರ್ಡಿಯಲ್ ಇನ್‌ಫಾಕ್ಷನ್‌ನಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದರೂ ಅವರಿಗೂ ಬೊಜ್ಜುತನವಿತ್ತು.

ಹೆಚ್ಚು ಅಧ್ಯಯನ ನಡೆಯಬೇಕು

ಹೆಚ್ಚು ಅಧ್ಯಯನ ನಡೆಯಬೇಕು

ಬೆಂಗಳೂರಿನ ಅಪೊಲೊ ಆಸ್ಪತ್ರೆಗಳ ಶಾಸ್ವಕೋಶತಜ್ಞ ಡಾ. ರವೀಂದ್ರ ಅವರು ಹೇಳುವ ಪ್ರಕಾರ ಬೇರೆ ಬೇರೆ ಗುಂಪುಗಳ ಬಗ್ಗೆ ಅಧ್ಯಯನ ನಡೆಸುವುದು ಬಹಳ ಮುಖ್ಯವಾಗಿದೆ.

ಯಾವ ಗುಂಪುಗಳಲ್ಲಿ ಲಸಿಕೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ, ಯಾವುದರಲ್ಲಿ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕಿದೆ.
ಕೊರೊನಾ ಲಸಿಕೆ ಬೊಜ್ಜು ಹೊಂದಿರುವವರ ಮೇಲೂ ಪರಿಣಾಮ ಬೀರಬಲ್ಲದು

ಕೊರೊನಾ ಲಸಿಕೆ ಬೊಜ್ಜು ಹೊಂದಿರುವವರ ಮೇಲೂ ಪರಿಣಾಮ ಬೀರಬಲ್ಲದು

ಲಸಿಕೆಗಳು ತೆಳ್ಳಗಿರುವವರು ಹಾಗೂ ಬೊಜ್ಜು ಹೊಂದಿರುವವರಿಬ್ಬರ ಮೇಲೂ ಪರಿಣಾಮ ಬೀರಬಲ್ಲದು ಎಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಫೈಜರ್ ಲಸಿಕೆ ಪ್ರಯೋಗಗಳನ್ನು ಎಲ್ಲಾ ಗುಂಪುಗಳ ನಡುವೆ ಮಾಡಲಾಗಿದೆ, ಮತ್ತು ಇದು ಶೇ.95ರಷ್ಟು ಪರಿಣಾಮಕಾರಿತ್ವವನ್ನು ತೋರಿಸಿದೆ.
ಆದಾಗ್ಯೂ,ಬೊಜ್ಜು ಇರುವ ವ್ಯಕ್ತಿಗಳು ಕೊರೊನಾ ಲಸಿಕೆಯನ್ನು ತೆಗೆದುಕೊಳ್ಳಬೇಕೆ ಬೇಡವೇ ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ.

ರೂಪಾಂತರಿ ಸೋಂಕಿನ ವಿರುದ್ಧ ಫೈಜರ್ ಪರಿಣಾಮಕಾರಿ

ರೂಪಾಂತರಿ ಸೋಂಕಿನ ವಿರುದ್ಧ ಫೈಜರ್ ಪರಿಣಾಮಕಾರಿ

ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಮೊದಲ ರೂಪಾಂತರ ವೈರಸ್‌ ಅನ್ನು ಫೈಜರ್ ಲಸಿಕೆ ಪರಿಣಾಮಕಾರಿಯಾಗಿ ತಟಸ್ಥಗೊಳಿಸಲಿದೆ ಎಂದು ಹೊಸ ಅಧ್ಯಯನ ತಿಳಿಸಿದೆ.
ಅಮೆರಿಕದ ಫೈಜರ್‌ ಮತ್ತು ಜರ್ಮನಿಯ ಬಯೋ ಎನ್‌ಟೆಕ್‌ ಕಂಪನಿ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಫೈಜರ್ ಕೊರೊನಾ ಲಸಿಕೆ ರೂಪಾಂತರ ಕೊರೊನಾವೈರಸ್ ಮೇಲೆ ನಡೆಸಿದ ಈ ಸಂಶೋಧನಾ ಅಧ್ಯಯನ ನೇಚರ್ ಮೆಡಿಸಿನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

Recommended Video

ನಿರ್ಮಲ ಸೀತಾರಾಮನ್ ಗೆ ಬಸವಣ್ಣನ ವಚನವನ್ನ ಬಿಡಿಸಿ ಹೇಳಿದ್ದು ಇದೆ ಕಾರಣಕ್ಕೆ | Oneindia Kannada

English summary
Health experts say that Covid vaccines may not be fully effective on people who are obese, a population at greater risk of contracting Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X