ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು ಬರಲಿದೆ ಪಾದರಾಯನಪುರ ಪುಂಡರ ಬಂಧಿಸಿದ್ದ ಪೊಲೀಸರ ಕೊರೊನಾ ಪರೀಕ್ಷಾ ವರದಿ

|
Google Oneindia Kannada News

ಬೆಂಗಳೂರು, ಏ. 27: ಪಾದರಾಯನಪುರ ಗಲಭೆ ಪ್ರಕರಣ ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಸಿಬ್ಬಂದಿಯ ಕೋವಿಡ್ ಸೋಂಕಿನ ಪರೀಕ್ಷಾ ವರದಿ ಇವತ್ತು ಬರಲಿದೆ. ಪರೀಕ್ಷೆಗೆ ಒಳಪಟ್ಟಿರುವ ಸಿಬ್ಬಂದಿ ಕುರಿತು ಗೃಹ ಇಲಾಖೆ ಕೂಡ ಆತಂಕದಲ್ಲಿದೆ. ಕಳೆದ ಏಪ್ರಿಲ್ 19 ರಂದು ಕೊರೊನಾ ವೈರಸ್ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಪಾದರಾಯನಪುರ ಪುಂಡರನನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಿದ್ದಾಗ ಹಲ್ಲೆ ನಡೆದಿತ್ತು.

ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮೂಲಕ ಶಂಕಿತರನ್ನು ವಶಕ್ಕೆ ಪಡೆದು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿದ್ದಾಗ 5 ಪುಂಡರಲ್ಲಿ ಸೋಂಕು ಪತ್ತೆಯಾಗಿದೆ. ಪಾದರಾಯನಪುರದಲ್ಲಿ ಈವರೆಗೆ ಒಟ್ಟು 25 ಜನರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.

ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆ ವಾರಗಳ ಬಳಿಕ ಬದುಕಿ ಬಂದಿದ್ಹೇಗೆ? ಕೊರೊನಾದಿಂದ ಮೃತಪಟ್ಟಿದ್ದ ಮಹಿಳೆ ವಾರಗಳ ಬಳಿಕ ಬದುಕಿ ಬಂದಿದ್ಹೇಗೆ?

ಹೀಗಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ 186ಕ್ಕೂ ಹೆಚ್ಚು ಪೊಲೀಸರಿಗೆ ಕೂಡ ಕೊರೊನಾ ವೈರಸ್ ತಪಾಸಣೆಗೆ ಥ್ರೋಟ್ ಸ್ವಾಬ್ ಪರೀಕ್ಷೆಗೆ ಒಳಪಡಿಸಲಾಗಿದೆ. ಪೊಲೀಸರಿಗೆ ಮಾಡಲಾಗಿದ್ದ ಕೊರೊನ ತಪಾಸಣೆಯ ವರದಿ ಇವತ್ತು ಬರಲಿದೆ. ಹೀಗಾಗಿ ಪೊಲೀಸ್ ಸಿಬ್ಬಂದಿ ಕೂಡ ಸ್ವಲ್ಪ ಆತಂಕದಲ್ಲಿದ್ದಾರೆ.

Covid test report of the police involved in the arrest of the Padarayanapura detainee is arrive today

ಕಿಡಿಗೇಡಿಗಳ ಪತ್ತೆಗೆ ಶ್ರಮಿಸಿದ್ದ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಪೊಲೀಸರಿಗೆ ಕೋವಿಡ್-19 ಪರೀಕ್ಷೆ ಮಾಡಲಾಗಿದೆ. ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಕೋವಿಡ್-19 ಪರೀಕ್ಷೆಗೊಳಪಟ್ಟಿದ್ದ 186 ಪೊಲೀಸರು. ಸೋಂಕಿತರ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯಿರುವ ಎಲ್ಲ ಸಿಬ್ಬಂದಿಯ ಮಾದರಿ ಸಂಗ್ರಹ ಮಾಡಲಾಗಿತ್ತು.

Covid test report of the police involved in the arrest of the Padarayanapura detainee is arrive today

ಅದೇ ಸಂದರ್ಭದಲ್ಲಿ 83 ಆರೋಪಿಗಳನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಹೀಗಾಗಿ ಸಿಸಿಬಿ ಪೊಲೀಸರು ಕೂಡ ಪರೀಕ್ಷೆಗೆ ಒಳಗಾಗಿದ್ದಾರೆ.

English summary
The Covid test report of the police involved in the arrest of the Padarayanapura detainee is arrive today. 186 policemen were involved in the operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X