ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2ನೇ ಡೋಸ್ ಲಸಿಕೆ ಪಡೆಯಲು ಕೋವಿಡ್ ಪರೀಕ್ಷೆ; ಏನಿದು ವಿವಾದ?

|
Google Oneindia Kannada News

ಬೆಂಗಳೂರು, ಆಗಸ್ಟ್ 26; ಬೆಂಗಳೂರು ನಗರದಲ್ಲಿ ಕೋವಿಡ್ 2ನೇ ಡೋಸ್ ಲಸಿಕೆ ಪಡೆಯಲು ಹೋದ ಜನರಿಗೆ ಬಲವಂತದಿಂದ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಗರದಲ್ಲಿ ಪ್ರತಿದಿನ 52 ರಿಂದ 63 ಸಾವಿರದ ತನಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.

ನಗರದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆಯಲು ಆಗಮಿಸಿದ ವ್ಯಕ್ತಿಗಳ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತಿದೆ. ಇದರಿಂದಾಗಿಯೇ ನಗರದಲ್ಲಿ ಹೆಚ್ಚು ಸಂಖ್ಯೆಯ ಪರೀಕ್ಷೆಗಳನ್ನು ತೋರಿಸಲಾಗುತ್ತಿದೆ ಎಂಬುದು ದೂರು.

ಕೆ.ಆರ್. ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆ ಚುರುಕುಗೊಳಿಸಲು ಬಿಬಿಎಂಪಿ ಸೂಚನೆಕೆ.ಆರ್. ಮಾರುಕಟ್ಟೆ ವ್ಯಾಪ್ತಿಯಲ್ಲಿ ಕೊರೊನಾ ಪರೀಕ್ಷೆ ಚುರುಕುಗೊಳಿಸಲು ಬಿಬಿಎಂಪಿ ಸೂಚನೆ

ಬಿಬಿಎಂಪಿ ಪೂರ್ವ ವಲಯದಲ್ಲಿ ಕೋವಿಡ್ ಪರೀಕ್ಷೆಗೆ ಒಳಪಡುವ 10 ಜನರಲ್ಲಿ ಮೂವರು ಲಸಿಕೆ ಪಡೆಯಲು ಬಂದವರು. ಶಾಂತಿನಗರದ ಪಿಎಚ್‌ಸಿಯಲ್ಲಿ ಲಸಿಕೆ ಪಡೆಯಲು ಹೋಗಿದ್ದ ಐವರು ಸದಸ್ಯರ ಕುಟುಂಬವೂ ಈ ಕುರಿತು ತಮ್ಮ ಅನುಭವ ಹಂಚಿಕೊಂಡಿದೆ.

ಬೆಂಗಳೂರಿಗೆ ಸದ್ಯಕ್ಕಿಲ್ಲ ಕೋವಿಡ್ 3ನೇ ಅಲೆಯ ಭೀತಿ ಬೆಂಗಳೂರಿಗೆ ಸದ್ಯಕ್ಕಿಲ್ಲ ಕೋವಿಡ್ 3ನೇ ಅಲೆಯ ಭೀತಿ

Covid Test For People Who Come To Vaccine What Is The Row

ಕೋವಿಡ್ ಸೋಂಕು ಇದ್ದರೆ ಅಂತಹ ವ್ಯಕ್ತಿಗೆ ಲಸಿಕೆ ನೀಡಬಾರದು. ಆದರೆ ಕೆಲವು ಪಿಎಚ್‌ಸಿಗಳಲ್ಲಿ ಸ್ವ್ಯಾಬ್ ಸಂಗ್ರಹ ಮಾಡಿ ಅದರ ವರದಿ ಬರುವುದಕ್ಕೂ ಕಾಯದೇ ಲಸಿಕೆ ನೀಡಲಾಗುತ್ತಿದೆ. ಇದರಿಂದ ಆಗುವ ಉಪಯೋಗವೇನು? ಎಂದು ಜನರು ಪ್ರಶ್ನಿಸಿದ್ದಾರೆ.

ಕೋವಿಡ್ 19: ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ದರ 1.55%ಗೆ ಕುಸಿತ ಕೋವಿಡ್ 19: ಭಾರತದಲ್ಲಿ ದೈನಂದಿನ ಪಾಸಿಟಿವಿಟಿ ದರ 1.55%ಗೆ ಕುಸಿತ

ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಕೋವಿಡ್ ಸೋಂಕು ತಗುಲಿದ ವ್ಯಕ್ತಿ 3 ತಿಂಗಳ ತನಕ ಕೋವಿಡ್ ಲಸಿಕೆ ಪಡೆಯುವಂತಿಲ್ಲ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ತಂಡಗಳು ಈ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪ ಮಾಡಲಾಗುತ್ತಿದೆ.

ಬೆಂಗಳೂರು ನಗರದ ಮಾತ್ರವಲ್ಲ ಬೆಂಗಳೂರು ಹೊರವಲಯದ ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಹ ಲಸಿಕೆ ಪಡೆಯಲು ಹೋದರೆ ಸ್ವ್ಯಾಬ್ ಸಂಗ್ರಹ ಮಾಡುತ್ತಾರೆ ಎಂದು ಜನರು ದೂರಿದ್ದಾರೆ. ಲಸಿಕೆ ಪಡೆಯಲು ಹೋದ ಜನರಿಗೆ ಕೋವಿಡ್ ಪರೀಕ್ಷೆ ಮಾಡಬೇಕೆಂಬ ನಿಯಮ ಇದೆಯೇ? ಎಂಬ ಬಗ್ಗೆ ಜನರು ಗೊಂದಲಕ್ಕೆ ಒಳಗಾಗಿದ್ದಾರೆ.

ಪ್ರತಿದಿನದ ಟಾರ್ಗೆಟ್ ತಲುಪಲು ಪಿಎಚ್‌ಸಿಗಳಲ್ಲಿ ಲಸಿಕೆ ಪಡೆಯಲು ಬಂದ ಜನರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ಬಿಬಿಎಂಪಿ ಅಧಿಕಾರಿಗಳು ತಳ್ಳಿಹಾಕಿದ್ದಾರೆ. ಒಂದು ವೇಳೆ ಸೋಂಕಿನ ಲಕ್ಷಣಗಳು ಕಂಡುಬಂದರೆ ಪರೀಕ್ಷೆ ನಡೆಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಆಯುಕ್ತ (ಆರೋಗ್ಯ) ಡಿ. ರಂದೀಪ್ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ, "ಒಂದು ವೇಳೆ ಲಸಿಕೆ ಪಡೆಯಲು ಹೋದಾಗ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಕೇಳಿದರೆ ಜನರು ನಿರಾಕರಿಸಬಹುದು" ಎಂದು ಸ್ಪಷ್ಟಪಡಿಸಿದ್ದಾರೆ.

ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ ಸಹ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ಈ ವಿಚಾರದ ಕುರಿತು ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಚ್ಚರಿಕೆ ರವಾನೆ ಮಾಡಲಾಗುತ್ತದೆ. ಸಿಬ್ಬಂದಿಗಳಿಗೆ ಈ ಕುರಿತು ಮಾಹಿತಿ ನೀಡಲಾಗುತ್ತದೆ" ಎಂದು ಹೇಳಿದರು.

ಆರೋಗ್ಯ ಇಲಾಖೆಯ ಮಾಹಿತಿ ಅನ್ವಯ ಕರ್ನಾಟಕದಲ್ಲಿ ಇದುವರೆಗೂ 3,84,24,131 ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಬುಧವಾರ 4,98,885 ಜನರು ಲಸಿಕೆ ಪಡೆದಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ಪಡೆದವರು 96,131.

ಬೆಂಗಳೂರು ನಗರದಲ್ಲಿ ಶೇ 75ರಷ್ಟು ಜನರು ಒಂದು ಡೋಸ್ ಲಸಿಕೆ ಪಡೆದಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಜನರು ಲಸಿಕೆ ಪಡೆದ ಜಿಲ್ಲೆಗಳಲ್ಲಿ ಪಟ್ಟಿಯಲ್ಲಿ ಬೆಂಗಳೂರು ನಗರವೇ ಮೊದಲ ಸ್ಥಾನದಲ್ಲಿದೆ. ವಿಜಯಪುರ, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಶೇ 50ರಷ್ಟು ಜನರು ಸಹ ಇನ್ನೂ ಲಸಿಕೆ ಪಡೆದಿಲ್ಲ.

Recommended Video

ಎಂಥಾ ಸ್ಥಿತಿ!!ಆಫ್ಘಾನಿಸ್ತಾನದ ಮಾಜಿ ಸಚಿವ ಜರ್ಮನಿಯಲ್ಲಿ ಈಗ ಡೆಲಿವರಿ ಬಾಯ್ | Oneindia Kannada

ಬುಧವಾರ ಹೆಲ್ತ್ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 309 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. 3 ಜನರು ಮೃತಪಟ್ಟಿದ್ದಾರೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 7231 ಆಗಿದೆ.

English summary
Primary health centre staffers forcibly testing people who come to get vaccinated at some of the government centres at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X