ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್ ಚೇತರಿಕೆ ಪ್ರಮಾಣ ಶೇ 95ರಷ್ಟು

|
Google Oneindia Kannada News

ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಆಗಸ್ಟ್‌ ತಿಂಗಳಿನಲ್ಲಿ ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 40,563 ಆಗಿತ್ತು, ಈಗ ಕೇವಲ 2.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್ ಈ ಕುರಿತು ಮಾಹಿತಿ ನೀಡಿದ್ದಾರೆ. ನಗರದಲ್ಲಿನ ಗುಣಮುಖ ಪ್ರಮಾಣ ಶೇ 95ರಷ್ಟಿದ್ದು, ಉದ್ಯಾನ ನಗರಿ ಜನರಿಗೆ ನೆಮ್ಮದಿ ತಂದಿದೆ.

ಕಾಲೇಜು ಆರಂಭ; 168 ಕೋವಿಡ್ ಪ್ರಕರಣ ಪತ್ತೆಕಾಲೇಜು ಆರಂಭ; 168 ಕೋವಿಡ್ ಪ್ರಕರಣ ಪತ್ತೆ

ನವೆಂಬರ್ 23ರ ತನಕ ಬೆಂಗಳೂರು ನಗರದಲ್ಲಿ 3,65,317 ಕೋವಿಡ್ ಪ್ರಕರಣಗಳು ದಾಖಲಾಗಿವೆ. 3,43,169 ಜನರು ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 4091. ಸದ್ಯ ಮರಣ ಪ್ರಮಾಣ ಶೇ 1.1ಆಗಿದೆ.

ಕಾಲೇಜಲ್ಲಿ ಕೋವಿಡ್ ಪರೀಕ್ಷೆ; ಬೆಂಗಳೂರಲ್ಲಿ ಎಷ್ಟು ಪ್ರಕರಣ ಪತ್ತೆ? ಕಾಲೇಜಲ್ಲಿ ಕೋವಿಡ್ ಪರೀಕ್ಷೆ; ಬೆಂಗಳೂರಲ್ಲಿ ಎಷ್ಟು ಪ್ರಕರಣ ಪತ್ತೆ?

COVID Recovery Rate Is Over 95 Per Cent

ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ನಗರದಲ್ಲಿ ಹೆಚ್ಚಿತ್ತು. ದೇಶದ ಇತರ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರವೇ ಮೊದಲ ಸ್ಥಾನದಲ್ಲಿತ್ತು. ಕರ್ನಾಟಕದಲ್ಲಿ ಅತಿ ಹೆಚ್ಚು ಸೋಂಕಿತರು ಇರುವ ಪಟ್ಟಿಯಲ್ಲಿ ಬೆಂಗಳೂರು ಈಗಲೂ ಟಾಪ್.

ಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳುಜಗತ್ತಿನಾದ್ಯಂತ ಸಿದ್ಧವಾಗುತ್ತಿವೆ 200ಕ್ಕೂ ಹೆಚ್ಚು ಕೋವಿಡ್ ಲಸಿಕೆಗಳು

ನವೆಂಬರ್ 26ರಂದು ಬೆಂಗಳೂರು ನಗರದಲ್ಲಿ 844 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 3,67,077. ಸಕ್ರಿಯ ಪ್ರಕರಣಗಳು 18,830. ಒಟ್ಟು ಮೃತಪಟ್ಟವರು 4108.

English summary
Good news for Bengaluru. City COVID recovery rate is over 95 per cent. City has only two active containment zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X