ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೋವಿಡ್; ಹೊಸ ಕೇಸ್‌ಗಿಂತ ಗುಣಮುಖ ಸಂಖ್ಯೆ ಹೆಚ್ಚು

|
Google Oneindia Kannada News

ಬೆಂಗಳೂರು, ಆಗಸ್ಟ್ 19: ಕರ್ನಾಟಕದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ಜಿಲ್ಲೆ ಬೆಂಗಳೂರು. ಬೆಂಗಳೂರು ನಗರದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 94,106ಕ್ಕೆ ಏರಿಕೆಯಾಗಿದೆ.

Recommended Video

ಹೇಳಿದ ಕೆಲಸವನ್ನು ಮೊದಲು ಮಾಡಿ ಎಂದ್ರು ಸುಧಾಕರ್ | Oneindia Kannada

ಬೆಂಗಳೂರು ನಗರದ ಜನರಿಗೆ ಶುಭ ಸುದ್ದಿಯೊಂದಿದೆ. ನಗರದಲ್ಲಿ ಕೋವಿಡ್ ಹೊಸ ಪ್ರಕರಣಕ್ಕಿಂತ ಗುಣಮುಖರಾದವರ ಸಂಖ್ಯೆಯೇ ಅಧಿಕವಾಗಿದೆ. ನಗರದಲ್ಲಿ ಮಂಗಳವಾರ 2242 ಹೊಸ ಪ್ರಕರಣಗಳು ದಾಖಲಾಗಿವೆ.

ಕರ್ನಾಟಕ; ಒಂದೇ ದಿನ ಕೋವಿಡ್ ಗೆದ್ದ 8387 ಜನರುಕರ್ನಾಟಕ; ಒಂದೇ ದಿನ ಕೋವಿಡ್ ಗೆದ್ದ 8387 ಜನರು

ಮಂಗಳವಾರ ನಗರದಲ್ಲಿ ವರದಿಯಾದ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ 2242. ಕೋವಿಡ್‌ನಿಂದ ಗುಣಮುಖಗೊಂಡು ಬಿಡುಗಡೆಗೊಂಡವರ ಸಂಖ್ಯೆ 3520.

ಕೋವಿಡ್ ಪರೀಕ್ಷೆಯ ವರದಿ ಆನ್‌ಲೈನ್‌ನಲ್ಲೇ ಲಭ್ಯ ಕೋವಿಡ್ ಪರೀಕ್ಷೆಯ ವರದಿ ಆನ್‌ಲೈನ್‌ನಲ್ಲೇ ಲಭ್ಯ

COVID Recovery Rate is More Than Fresh Cases In Bengaluru

ನಗರದಲ್ಲಿ ಇದುವರೆಗೂ ಒಟ್ಟು 59,492 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 33,081. 1532 ಜನರು ಇದುವರೆಗೂ ನಗರದಲ್ಲಿ ಮೃತಪಟ್ಟಿದ್ದಾರೆ.

ಭಾರತದಲ್ಲಿ 24 ಗಂಟೆಯಲ್ಲಿ 64,531 ಕೋವಿಡ್ ಪ್ರಕರಣ ಭಾರತದಲ್ಲಿ 24 ಗಂಟೆಯಲ್ಲಿ 64,531 ಕೋವಿಡ್ ಪ್ರಕರಣ

ಕರ್ನಾಟಕದಲ್ಲಿ ಕೋವಿಡ್ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಮಂಗಳವಾರ ಒಂದೇ ದಿನ 59,088 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. 28,867 antigen ಪರೀಕ್ಷೆ ಮಾಡಲಾಗಿದೆ.

ಕರ್ನಾಟಕದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2,40,948. ಬಳ್ಳಾರಿಯಲ್ಲಿ 15,180, ಬಾಗಲಕೋಟೆಯಲ್ಲಿ 4,485, ಬೆಳಗಾವಿಯಲ್ಲಿ 8360, ಚಿಕ್ಕಬಳ್ಳಾಪುರದಲ್ಲಿ 3019 ಮತ್ತು ಮೈಸೂರಿನಲ್ಲಿ 11,489 ಪ್ರಕರಣಗಳು ದಾಖಲಾಗಿವೆ.

ರಾಜ್ಯದಲ್ಲೂ ದಾಖಲೆ : ಮಂಗಳವಾರ ಕರ್ನಾಟಕ ರಾಜ್ಯದಲ್ಲಿಯೂ ಹೊಸ ದಾಖಲೆ ನಿರ್ಮಾಣವಾಗಿದೆ. ಹೊಸ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯೇ ಅಧಿಕವಾಗಿದೆ. ರಾಜ್ಯದಲ್ಲಿ 7665 ಹೊಸ ಪ್ರಕರಣ ದಾಖಲಾಗಿದೆ. ಗುಣಮುಖಗೊಂಡವರ ಸಂಖ್ಯೆ 8387.

English summary
COVID recovery rate is more than fresh cases in Bengaluru city. On Augst 18th 2242 new cases reported in city and 3520 people discharged from hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X