ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೋನಾ ನಕಲಿ ಪರೀಕ್ಷೆಗಳಿಂದ ನಗರದಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆಯಾ?

|
Google Oneindia Kannada News

ಬೆಂಗಳೂರು ಜೂ. 16: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ಮೊದ ಮೊದಲು ಸರ್ಕಾರ ಹೆಚ್ಚಿಸುತ್ತಿರುವ ಕೊರೋನಾ ಪರೀಕ್ಷೆಗಳು ಎಂದು ಹೇಳಲಾಗಿತ್ತು. ಆದರೆ ಈಗ ನಕಲಿ ಕೋವಿಡ್ ಪರೀಕ್ಷೆಗಳೆ ಇದಕ್ಕೆ ಕಾರಣ ಎಂಬ ಅನುಮಾನ ಮೂಡುವಂತಾಗಿದೆ.

ನೆರೆ ರಾಜ್ಯಗಳಲ್ಲಿ ಕೋವಿಡ್ ಆರ್ಭಟ ಹೆಚ್ಚಾಗುತ್ತಿದ್ದಂತೆ ಹಾಗೂ ಕೋವಿಡ್ ಅಲೆ ಎದುರಾಗುತ್ತದೆ ಎಂಬ ತಜ್ಞರು ಸಲಹೆ ಮೇರೆಗೆ ಸರ್ಕಾರ ಮುಂಜಾಗೃತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುತ್ತದೆ. ಅದೇ ರೀತಿ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ತಪಾಸಣೆಗೆ ಮಾಡುತ್ತಿರುವುದರಿಂದ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಹೇಳಲಾಗಿತ್ತು. ಆದರೆ ಕೊರೋನಾ ತಪಾಸಣೆಗೆ ಒಳಗಾಗದ ವ್ಯಕ್ತಿಯೊಬ್ಬರು ಕೋವಿಡ್ ತಪಾಸಣೆ ಕುರಿತ ಸಂದೇಶ ಸ್ವೀಕರಿಸಿದ್ದಾರೆ. ಹೀಗಾಗಿ ಕೊರೋನಾ ನಕಲಿ ತಪಾಸಣೆ ನಡೆಯುತ್ತಿರುವುದರಿಂದ ನಗರದಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಅನುಮಾನ ಹುಟ್ಟಿವೆ.

ಬೆಂಗಳೂರಲ್ಲಿ ಪಾಸಿಟಿವಿಟಿ ದರ; ಕೊರೊನಾ ವೈರಸ್ ಅಂಕಿ-ಸಂಖ್ಯೆಬೆಂಗಳೂರಲ್ಲಿ ಪಾಸಿಟಿವಿಟಿ ದರ; ಕೊರೊನಾ ವೈರಸ್ ಅಂಕಿ-ಸಂಖ್ಯೆ

ಅನುಮಾನಕ್ಕೆ ಕಾರಣ

ಥಣಿಸಂದ್ರದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕೋವಿಡ್ ತಪಾಸಣೆಗೆ ಒಳಗಾಗಿಲ್ಲ. ಹೀಗಿದ್ದರು, ಕೋವಿಡ್ ತಪಾಸಣೆಗಾಗಿ ನೀವು ನೀಡಿದ ಗಂಟಲಿನ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ ಎಂಬ ಸಂದೇಶ ಆ ವ್ಯಕ್ತಿ ಮೊಬೈಲ್ ಗೆ ಬಂದಿದೆ. ನಾನಾಗಲಿ, ನಮ್ಮ ಕುಟುಂಬ ಸದಸ್ಯರಾಗಿ ಇತ್ತೀಚೆಗೆ ಕೊರೋನಾ ತಪಾಸಣೆಗೇ ಒಳಗಾಗಿಲ್ಲ. ಆದರೂ ನನಗೆ ಸಂದೇಶ ಬಂದಿದೆ. ಇದರಿಂದ ಬೇಸರಗೊಂಡ ಅವರು, ಜನರ ವೈಯಕ್ತಿಕ ಮಾಹಿತಿ ಸರ್ಕಾರದ ಬಳಿ ಎಷ್ಟು ಸುರಕ್ಷಿತ ಎಂದು ಪ್ರಶ್ನಿಸಿದ್ದಾರೆ.

Covid Fake Test Reports Confuse Bengalureans Again

ತನಿಖೆ ನಡೆಸುವ ಭರವಸೆ ನೀಡಿದ ಪಾಲಿಕೆ

ನಕಲಿ ಸಂದೇಶ ಸ್ವೀಕರಿಸಿದ ಥಣಿಸಂದ್ರದ ವ್ಯಕ್ತಿ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೋವಿಡ್ ಒಟಿಪಿ ಗಾಗಿ ಮೊಬೈಲ್ ನಂಬರ್ ಅಥವಾ ಒಟಿಪಿಯನ್ನು ಯಾರಿಗಾದರೂ ನೀಡಿದ್ದೀರಾ? ಎಂದು ಕೇಳಿದರು. ಯಾರಿಗೂ ನೀಡಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ನಕಲಿ ಸಂದೇಶ ಬಂದಿರುವ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದರು ಎಂದು ಅವರು ಮಾಹಿತಿ ನೀಡಿದರು.

Covid Fake Test Reports Confuse Bengalureans Again

ಎರಡನೇ ಕೋವಿಡ್ ಅಲೆಯ ವೇಳೆಯಲ್ಲೂ ಈ ರೀತಿಯ ನಕಲಿ ಕೋವಿಡ್ ಪರೀಕ್ಷಾ ವರದಿಗಳು ಜನರನ್ನು ಗೊಂದಲಕ್ಕೆ ಮತ್ತು ಅತಂಕಕ್ಕೆ ದೂಡಿದ್ದವು.

(ಒನ್ಇಂಡಿಯಾ ಸುದ್ದಿ)

Recommended Video

CM Bommai: ʼ777 ಚಾರ್ಲಿʼ ಚಿತ್ರ ವೀಕ್ಷಿಸಿದ ಸಿಎಂ ಬೊಮ್ಮಾಯಿ | OneIndia Kannada

English summary
Fake corona tests come to the fore in Bengaluru amid increasing positive cases. A resident of Thanisandra has complained to theBBMP officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X