ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾವೈರಸ್ ಭಯದಿಂದ ಮನೆಯಲ್ಲಿ ಇದ್ದುಕೊಂಡೇ ಪ್ರಾಣ ಬಿಟ್ಟವರು 910 ಮಂದಿ!

|
Google Oneindia Kannada News

ಬೆಂಗಳೂರು, ಮೇ 24: ಕೊರೊನಾವೈರಸ್ ಸೋಂಕಿನ ಲಕ್ಷಣಗಳೇ ಇಲ್ಲ. ಮನೆಯಲ್ಲಿ ಇದ್ದುಕೊಂಡೇ ನಾವು ಗುಣಮುಖರಾಗುತ್ತೇವೆ. ಕೊವಿಡ್-19 ಸೋಂಕಿನ ಸೌಮ್ಯ ಲಕ್ಷಣಗಳಿವೆ. ಗೃಹ ದಿಗ್ಬಂಧನದಲ್ಲಿ ಇದ್ದವರಿಗೆ ಸಾವಿನ ಅಪಾಯವಿಲ್ಲ ಎಂದು ನೆಚ್ಚಿಕೊಳ್ಳುವಂತಿಲ್ಲ.

ಬೆಂಗಳೂರಿನಲ್ಲಿ ಹೋಮ್ ಐಸೋಲೇಟ್ ಆಗಿದ್ದ 910 ಕೊವಿಡ್-19 ಸೋಂಕಿತರು ಸಾವಿನ ಮನೆ ಸೇರಿದ್ದಾರೆ. ಕಳೆದ ಮಾರ್ಚ್ 1 ರಿಂದ ಜೂನ್ 15ರವರೆಗೂ ಎಷ್ಟು ಜನರು ಗೃಹ ದಿಗ್ಬಂಧನದಲ್ಲಿ ಇದ್ದರು, ಈ ಪೈಕಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬ ಅಂಕಿ-ಅಂಶಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಲೆಕ್ಕ ಪರಿಶೋಧನಾ ಸಮಿತಿಯು ಬಹಿರಂಗಪಡಿಸಿದೆ.

 ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 4,436 ಹೊಸ ಪ್ರಕರಣ ದಾಖಲು ಕರ್ನಾಟಕದಲ್ಲಿ ಕಳೆದ 24 ಗಂಟೆಯಲ್ಲಿ 4,436 ಹೊಸ ಪ್ರಕರಣ ದಾಖಲು

ಕಳೆದ 46 ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೋಮ್ ಐಸೋಲೇಟ್ ಆಗಿದ್ದ 910 ಕೊರೊನಾವೈರಸ್ ಸೋಂಕಿತರು ಪ್ರಾಣ ಬಿಟ್ಟಿದ್ದಾರೆ. ಆಶ್ಚರ್ಯ ಎಂದರೆ ಈ ಪೈಕಿ 410 ಮಂದಿಯಲ್ಲಿ ಯಾವುದೇ ರೋಗದ ಲಕ್ಷಣಗಳು ಇರಲಿಲ್ಲ ಹಾಗೂ ಬೇರೆ ಯಾವುದೇ ರೋಗಗಳೂ ಇರಲಿಲ್ಲ ಎಂದು ತಿಳಿದು ಬಂದಿದೆ.

ಬೆಂಗಳೂರಿನ ಎಂಟು ವಲಯಗಳಲ್ಲಿ ಕೊವಿಡ್-19 ಸೋಂಕಿನಿಂದ ಹೋಮ್ ಐಸೋಲೇಷನ್ ಆಗಿದ್ದವರು ಎಷ್ಟು ಜನ, ಈ ಪೈಕಿ ಮೃತಪಟ್ಟವರು ಎಷ್ಟು, ಯಾವ ವಯಸ್ಸಿನ ಎಷ್ಟು ಮಂದಿ ಮೃತಪಟ್ಟಿದ್ದಾರೆ, ಮೃತಪಟ್ಟವರಲ್ಲಿ ಆರೋಗ್ಯ ಸಮಸ್ಯೆ ಹೊಂದಿದ್ದವರು ಎಷ್ಟು ಆರೋಗ್ಯ ಸಮಸ್ಯೆ ಹೊಂದಿಲ್ಲದವರು ಎಷ್ಟು ಹೀಗೆ ಎಲ್ಲ ರೀತಿ ಪ್ರಶ್ನೆಗಳಿಗೆ ಇದೊಂದೇ ವರದಿಯಲ್ಲಿ ಅಂಕಿ-ಅಂಷಗಳ ಸಹಿತ ಉತ್ತರ ಸಿಗಲಿದೆ.

ಯಾವ ಎಂಟು ವಲಯಗಳ ಕೊವಿಡ್-19 ಅಂಕಿ-ಅಂಶ?

ಯಾವ ಎಂಟು ವಲಯಗಳ ಕೊವಿಡ್-19 ಅಂಕಿ-ಅಂಶ?

ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿನ ನಿರ್ವಹಣೆಗಾಗಿ ಎಂಟು ವಲಯಗಳಾಗಿ ವಿಂಗಡಣೆ ಮಾಡಿಕೊಳ್ಳಲಾಗಿದೆ. ರಾಜರಾಜೇಶ್ವರಿ ನಗರ ವಲಯ, ಮಹದೇವಪುರ ವಲಯ, ಪಶ್ಚಿಮ ವಲಯ, ದಕ್ಷಿಣ ವಲಯ, ಯಲಹಂಕ ವಲಯ, ಪೂರ್ವ ವಲಯ, ಬೊಮ್ಮನಹಳ್ಳಿ ವಲಯ, ದಾಸರಹಳ್ಳಿ ವಲಯಗಳಾಗಿವೆ. ಈ ಎಂಟು ವಲಯಗಳಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣ, ಐಸೋಲೇಶನ್ ಹಾಗೂ ಸಾವಿನ ಪ್ರಕರಣಗಳ ಬಗ್ಗೆ ಅಂಕಿ ಅಂಶಗಳನ್ನು ನೀಡಲಾಗಿದೆ.

ಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣ ಪತ್ತೆಬೆಂಗಳೂರಿನಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣ ಪತ್ತೆ

ಹೋಮ್ ಐಸೋಲೇಷನ್ ಆದ 910 ಮಂದಿ ಸಾವು

ಹೋಮ್ ಐಸೋಲೇಷನ್ ಆದ 910 ಮಂದಿ ಸಾವು

ಬೆಂಗಳೂರಿನ ಎಂಟು ವಲಯಗಳಲ್ಲಿ 5,66,127 ಕೊರೊನಾವೈರಸ್ ಸೋಂಕಿತರು ಹೋಮ್ ಐಸೋಲೇಷನ್ ಆಗಿದ್ದರು. ಈ ಪೈಕಿ 910 ಮಂದಿ ಗೃಹ ದಿಗ್ಬಂಧನದಲ್ಲಿ ಇದ್ದುಕೊಂಡು ಪ್ರಾಣ ಬಿಟ್ಟಿದ್ದಾರೆ. ವಲಯವಾರು ಐಸೋಲೇಷನ್ ಆಗಿರುವವರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯನ್ನು ಕೆಳಗಿನ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ವಲಯ ಐಸೋಲೇಷನ್ ಆದ ಸೋಂಕಿತರ ಸಂಖ್ಯೆ ಮೃತರ ಸಂಖ್ಯೆ
ರಾಜರಾಜೇಶ್ವರಿ ನಗರ ವಲಯ 1,06,800 251
ಮಹದೇವಪುರ ವಲಯ 1,03,799 244
ಪಶ್ಚಿಮ ವಲಯ 92,948 73
ದಕ್ಷಿಣ ವಲಯ 50,427 119
ಯಲಹಂಕ ವಲಯ 9,895 38
ಪೂರ್ವ ವಲಯ 65,227 107
ಬೊಮ್ಮನಹಳ್ಳಿ ವಲಯ 87,967 8
ದಾಸರಹಳ್ಳಿ ವಲಯದ 47,259 70
ವಲಯವಾರು ಮಹಿಳೆ ಪುರುಷರ ಸಾವಿನ ಸಂಖ್ಯೆ

ವಲಯವಾರು ಮಹಿಳೆ ಪುರುಷರ ಸಾವಿನ ಸಂಖ್ಯೆ

ಬೆಂಗಳೂರಿನ ಎಂಟು ವಲಯಗಳಲ್ಲಿ ಹೋಮ್ ಐಸೋಲೇಷನ್ ಆಗಿದ್ದ 910 ಮಂದಿ ಪ್ರಾಣ ಬಿಟ್ಟಿರುವ ಬಗ್ಗೆ ಗೊತ್ತಾಗಿದೆ. ಯಾವ ವಲಯದಲ್ಲಿ ಎಷ್ಟು ಮಂದಿ ಗೃಹ ದಿಗ್ಬಂಧನದಲ್ಲಿ ಇರುವಾಗಲೇ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ. ಇದೀಗ ಯಾವ ವಲಯದಲ್ಲಿ ಎಷ್ಟು ಮಂದಿ ಪುರುಷರು ಹಾಗೂ ಎಷ್ಟು ಮಂದಿ ಮಹಿಳೆಯರು ಮೃತಪಟ್ಟಿದ್ದಾರೆ ಎಂಬ ಅಂ-ಅಂಶಗಳು ಇಲ್ಲಿದೆ.

ವಲಯ ಪುರುಷರು ಮಹಿಳೆಯರು
ರಾಜರಾಜೇಶ್ವರಿ ನಗರ ವಲಯ 77 42
ಮಹದೇವಪುರ ವಲಯ 185 59
ಪಶ್ಚಿಮ ವಲಯ 69 38
ದಕ್ಷಿಣ ವಲಯ 49 24
ಯಲಹಂಕ ವಲಯ 47 23
ಪೂರ್ವ ವಲಯ 147 104
ಬೊಮ್ಮನಹಳ್ಳಿ ವಲಯ 6 2
ದಾಸರಹಳ್ಳಿ ವಲಯ 22 16
ಯಾವ ವಲಯದಲ್ಲಿ ಯಾವ ವಯಸ್ಸಿನ ಎಷ್ಟು ಮಂದಿ ಬಲಿ?

ಯಾವ ವಲಯದಲ್ಲಿ ಯಾವ ವಯಸ್ಸಿನ ಎಷ್ಟು ಮಂದಿ ಬಲಿ?

ಸಿಲಿಕಾನ್ ನಿಟಿಯಲ್ಲಿ ಹೋಮ್ ಐಸೋಲೇಷನ್ ಆದವರ ಪೈಕಿ 20ಕ್ಕಿಂ ಕಡಿಮೆ ವಯಸ್ಸಿನ ಒಬ್ಬರೇ ಒಬ್ಬರು ಸೋಂಕಿನಿಂದ ಪ್ರಾಣ ಬಿಟ್ಟಿಲ್ಲ. ಅದರ ಬದಲಿಗೆ 21 ವರ್ಷದಿಂದ ಮೇಲ್ಪಟ್ಟವರು ಹೋಮ್ ಐಸೋಲೇನ್ ನಲ್ಲಿದ್ದರು ಕೊವಿಡ್-19 ಸೋಂಕಿಗೆ ಬಲಿಯಾಗಿದ್ದಾರೆ. ಯಾವ ವಯಸ್ಸಿನ, ಎಷ್ಟು ಜನರು ಕೊರೊನಾಗೆ ಬಲಿಯಾಗಿದ್ದಾರೆ ಎಂಬ ಪಟ್ಟಿ ಮುಂದಿದೆ ನೋಡಿ.

ವಲಯ 21 ರಿಂದ 40 41 ರಿಂದ 60 60 ರಿಂದ 80 80ಕ್ಕಿಂತ ಹೆಚ್ಚು
ರಾಜರಾಜೇಶ್ವರಿ ನಗರ ವಲಯ 13 39 49 18
ಮಹದೇವಪುರ ವಲಯ 47 89 108 00
ಪಶ್ಚಿಮ ವಲಯ 3 31 73 00
ದಕ್ಷಿಣ ವಲಯ 8 26 28 10
ಯಲಹಂಕ ವಲಯ 5 18 47 00
ಪೂರ್ವ ವಲಯ 17 55 179 00
ಬೊಮ್ಮನಹಳ್ಳಿ ವಲಯ 1 3 4 00
ದಾಸರಹಳ್ಳಿ ವಲಯ 4 10 18 5
ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಸತ್ತವರೆಷ್ಟು?

ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೇ ಸತ್ತವರೆಷ್ಟು?

ಕೊರೊನಾವೈರಸ್ ಸೋಂಕಿನ ಸೌಮ್ಯ ಲಕ್ಷಣಗಳ ಹೊರತಾಗಿ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿರದ 410 ಮಂದಿ ಹೋಮ್ ಐಸೋಲೇಷನ್ ನಲ್ಲಿ ಮೃತಪಟ್ಟಿದ್ದಾರೆ. 500 ಜನ ಕೊವಿಡ್-19 ಸೋಂಕಿನ ಜೊತೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಗೊತ್ತಾಗಿದೆ. ವಲಯವಾರು ಆರೋಗ್ಯ ಸಮಸ್ಯೆ ಉಳ್ಳವರು ಮತ್ತು ಇಲ್ಲದೇ ಸೋಂಕಿಗೆ ಬಲಿಯಾದವರೆಷ್ಟು ಎಂಬ ಮಾಹಿತಿ ಇಲ್ಲಿದೆ.

ವಲಯ ಆರೋಗ್ಯ ಸಮಸ್ಯೆ ಉಳ್ಳವರು ಆರೋಗ್ಯ ಸಮಸ್ಯೆ ಇಲ್ಲದವರು
ರಾಜರಾಜೇಶ್ವರಿ ನಗರ ವಲಯ 46 73
ಮಹದೇವಪುರ ವಲಯ 159 85
ಪಶ್ಚಿಮ ವಲಯ 66 41
ಪಶ್ಚಿಮ ವಲಯ 30 43
ಯಲಹಂಕ ವಲಯ 9 61
ಪೂರ್ವ ವಲಯ 189 62
ಬೊಮ್ಮನಹಳ್ಳಿ ವಲಯ 1 1
ಬೊಮ್ಮನಹಳ್ಳಿ ವಲಯ 0 36
ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣಕ್ಕೆ ಬಂದ ಕೊವಿಡ್-19

ಸಿಲಿಕಾನ್ ಸಿಟಿಯಲ್ಲಿ ನಿಯಂತ್ರಣಕ್ಕೆ ಬಂದ ಕೊವಿಡ್-19

ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಹಿಂದಿನ ಅಂಕಿ-ಅಂಶಗಳನ್ನು ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 1008 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,08,104ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಮಹಾಮಾರಿಗೆ 24 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 15,523ಕ್ಕೆ ಏರಿಕೆಯಾಗಿದೆ. 69,257 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ.

English summary
Statistics From BBMP Death Audit Committee Shows 910 Covid-19 Patients In Home Isolation Succumbed To The Virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X