ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ವಲಯವಾರು ಕೋವಿಡ್ ಕೇರ್ ಸೆಂಟರ್ ವಿವರ

|
Google Oneindia Kannada News

ಬೆಂಗಳೂರು, ಜನವರಿ 19; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ಮಂಗಳವಾರದ ಸಕ್ರಿಯ ಪ್ರಕರಣಗಳು 1,78,328. ಬಿಬಿಎಂಪಿ ಸೋಂಕು ಹರಡುವಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನಲೆಯಲ್ಲಿ ಬಿಬಿಎಂಪಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,387 ಹಾಸಿಗೆಗಳನ್ನು ಹೊಂದಿರುವ 16 ಕೋವಿಡ್ ಕೇರ್ ಸೆಂಟರ್‌ಗಳಿವೆ.

ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಿದೆ ಬಿಬಿಎಂಪಿ ಕೋವಿಡ್ ಕೇರ್ ಸೆಂಟರ್ ಮತ್ತೆ ತೆರೆಯಲಿದೆ ಬಿಬಿಎಂಪಿ

ಅಲ್ಲದೇ ಕೋವಿಡ್ ಸೋಂಕಿತರಿಗೆ ಸಹಾಯಕವಾಗಲು, ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಬಿಎಂಪಿ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ 1533.

ಕೋವಿಡ್ 3ನೇ ಅಲೆ ಎದುರಿಸಲು ನೈಋತ್ಯ ರೈಲ್ವೆ ಸಿದ್ಧತೆಗಳು ಕೋವಿಡ್ 3ನೇ ಅಲೆ ಎದುರಿಸಲು ನೈಋತ್ಯ ರೈಲ್ವೆ ಸಿದ್ಧತೆಗಳು

Covid Case Raise In Bengalru BBMP Set Up 16 Covid Care Centres

ಕೋವಿಡ್ ಕೇರ್ ಸೆಂಟರ್ ವಿವರ

ಪಶ್ಚಿಮ ವಿಭಾಗ; ಗಾಂಧಿ ನಗರ, ಮಹಾಲಕ್ಷ್ಮೀಪುರಂನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್ ಇದೆ. ಇವುಗಳಲ್ಲಿ ಸಾಮಾನ್ಯ ಬೆಡ್ 100, ಆಕ್ಸಿಜನ್ ಬೆಡ್ 100 ಸೇರಿದಂತೆ ಒಟ್ಟು 200 ಹಾಸಿಗೆಗಳ ವ್ಯವಸ್ಥೆ ಇದೆ.

 ಸ್ವಯಂ ಪರೀಕ್ಷಾ ಕೋವಿಡ್ ಕಿಟ್‌ ಬಳಕೆಗೆ ಕರ್ನಾಟಕ ಸರ್ಕಾರ ಲಗಾಮು ಸ್ವಯಂ ಪರೀಕ್ಷಾ ಕೋವಿಡ್ ಕಿಟ್‌ ಬಳಕೆಗೆ ಕರ್ನಾಟಕ ಸರ್ಕಾರ ಲಗಾಮು

ದಕ್ಷಿಣ ವಿಭಾಗ; ಜಯನಗರ (40 ಸಾಮಾನ್ಯ, 8 ಆಕ್ಸಿಜನ್ ಬೆಡ್), ಬಿಟಿಎಂ ಲೇಔಟ್ (4 ಸಾಮಾನ್ಯ, 20 ಆಕ್ಸಿಜನ್ ಬೆಡ್), ಚಿಕ್ಕಪೇಟೆ (4 ಸಾಮಾನ್ಯ, 20 ಆಕ್ಸಿಜನ್ ಬೆಡ್), ವಿಜಯನಗರ (38 ಆಕ್ಸಿಜನ್ ಬೆಡ್), ಬಸವನಗುಡಿ (5 ಸಾಮಾನ್ಯ, 5 ಆಕ್ಸಿಜನ್ ಬೆಡ್)ಗಳಿವೆ.

ಪೂರ್ವ ವಿಭಾಗದ ಸಿ. ವಿ. ರಾಮನ್ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಇದೆ, 30 ಆಕ್ಸಿಜನ್ ಬೆಡ್ ವ್ಯವಸ್ಥೆ ಇಲ್ಲಿದೆ. ಆರ್. ಆರ್. ನಗರ ವಿಭಾಗದಲ್ಲಿ ಯಶವಂತಪುರದಲ್ಲಿ 50 ಸಾಮಾನ್ಯ, 50 ಆಕ್ಸಿಜನ್ ಬೆಡ್ ವ್ಯವಸ್ಥೆ ಇದೆ.

ಬೊಮ್ಮನಹಳ್ಳಿ ವಿಭಾಗದಲ್ಲಿ ಬೊಮ್ಮನಹಳ್ಳಿಯಲ್ಲಿ 30 ಸಾಮಾನ್ಯ, 20 ಆಕ್ಸಿಜನ್ ಬೆಡ್ ಇದೆ. ಮಹದೇವಪುರ ವಿಭಾಗದಲ್ಲಿ ಮಹದೇವಪುರದಲ್ಲಿ 153 ಸಾಮಾನ್ಯ ಬೆಡ್ ಇದೆ. ಕೆ. ಆರ್. ಪುರಂನಲ್ಲಿ 88 ಸಾಮಾನ್ಯ, 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ.

ಯಲಹಂಕ ವಿಭಾಗದಲ್ಲಿ ಯಲಹಂಕದಲ್ಲಿ 60 ಸಾಮಾನ್ಯ, 40 ಆಕ್ಸಿಜನ್ ಬೆಡ್, ಬ್ಯಾಟರಾಯನಪುರದಲ್ಲಿ 280 ಸಾಮಾನ್ಯ, 100 ಆಕ್ಸಿಜನ್ ಬೆಡ ವ್ಯವಸ್ಥೆ ಇದೆ. ದಾಸರಹಳ್ಳಿ ವಿಭಾಗದಲ್ಲಿ 75 ಸಾಮಾನ್ಯ, 30 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಇದೆ.

ಕೋವಿಡ್ ಪ್ರಕರಣಗಳ ಏರಿಕೆ; ಬೆಂಗಳೂರು ನಗರದಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಮಂಗಳವಾರದ ಹೆಲ್ತ್ ಬುಲೆಟಿನ್ ಅನ್ವಯ ನಗರದಲ್ಲಿ 25,595 ಹೊಸ ಪ್ರಕರಣ ದಾಖಲಾಗಿದೆ. ನಗರದ ಸಕ್ರಿಯ ಪ್ರಕರಣಗಳ ಸಂಖ್ಯೆ 1,78,328ಕ್ಕೆ ಏರಿಕೆಯಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಕೋವಿಡ್ ಪರಿಸ್ಥಿತಿ ಅವಲೋಕನಾ ಸಭೆಯಲ್ಲಿ ಬೆಂಗಳೂರು ನಗರದಲ್ಲಿ ಮತ್ತೆ ಕೋವಿಡ್ ಕೇರ್ ಸೆಂಟರ್ ಆರಂಭಿಸುವ ಕುರಿತು ಸೂಚನೆ ನೀಡಲಾಗಿತ್ತು.

ಕೋವಿಡ್ 2ನೇ ಅಲೆ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೆಂಟರ್‌ಗಳಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಸಹ ಮಾಡಲಾಗಿತ್ತು.

ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಆಕ್ಸಿಜನ್ ಬೆಡ್‌ಗಳಿಗೆ ಸಹ ಬೇಡಿಕೆ ಬಂದಿಲ್ಲ. ಕೋವಿಡ್‌ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

ಆದರೆ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತೆ ಆರಂಭಿಸಲಾಗಿದೆ. ಅಲ್ಲಿ ಆಕ್ಸಿಜನ್ ಬೆಡ್‌ಗಳಿಗೆ ಸಹ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾದರೆ ಆಗ ಇದು ಸಹಾಯಕ್ಕೆ ಬರಲಿದೆ.

ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಾರದ ಅಂತ್ಯದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳು ಲಭ್ಯವಾಗಲಿವೆ.

Recommended Video

INS ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ,ಭಾರತೀಯ ನೌಕಾಪಡೆಯ 3 ಯೋಧರು ಹುತಾತ್ಮ | Oneindia Kannada

ಪ್ರಸ್ತುತ ನಗರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 1836 ಹಾಸಿಗೆಗಳಲ್ಲಿ 1667 ಹಾಸಿಗೆಗಳು ಖಾಲಿ ಇವೆ. 166 ಸೋಂಕಿತರು ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
After new Coronavirus case raised in Bengaluru city BBMP has set up 16 Covid Care Centres with 1387 beds. Helpline also set up for Covid patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X