ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಸಕ್ರಿಯ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಕೆ

|
Google Oneindia Kannada News

ಬೆಂಗಳೂರು, ನವೆಂಬರ್ 02: ಬೆಂಗಳೂರು ನಗರದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಭಾನುವಾರ ನಗರದಲ್ಲಿ 2,167 ಹೊಸ ಪ್ರಕರಣ ದಾಖಲಾಗಿದ್ದು, ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 3,38,636ಕ್ಕೆ ಏರಿಕೆಯಾಗಿದೆ.

ಕರ್ನಾಟಕದಲ್ಲಿಯೇ ಅತಿ ಹೆಚ್ಚು ಕೋವಿಡ್ ಸೋಂಕಿತರು ಬೆಂಗಳೂರು ನಗರದಲ್ಲಿದ್ದಾರೆ. ಆದರೆ ಸಂತಸದ ವಿಚಾರವೊಂದಿದೆ. ಹೊಸ ಪ್ರಕರಣಗಳ ಜೊತೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ನಗರದಲ್ಲಿ ಇಳಿಮುಖವಾಗುತ್ತಿದೆ. ಪ್ರಸ್ತುತ ನಗರದಲ್ಲಿನ ಸಕ್ರಿಯ ಪ್ರಕರಣ 30,598.

ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರು ಟಾಪ್! ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಬೆಂಗಳೂರು ಟಾಪ್!

ಜುಲೈನಲ್ಲಿ ನಗರದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 33 ರಿಂದ 37 ಸಾವಿರ ಇತ್ತು. ಆದರೆ ಬಳಿಕ ಏರಿಕೆಯಾಗಿತ್ತು. ಆಗಸ್ಟ್‌ ಅಂತ್ಯದ ವೇಳೆಗೆ 37,760ರ ಗಡಿ ದಾಟಿತ್ತು. ಸೆಪ್ಟೆಂಬರ್‌ನಲ್ಲಿ 40 ಸಾವಿರದಿಂದ 65 ಸಾವಿರದ ತನಕ ಸಾಗಿತ್ತು. ಅಕ್ಟೋಬರ್ 16ರಂದು 65,664 ಸಕ್ರಿಯ ಪ್ರಕರಣ ನಗರದಲ್ಲಿ ದಾಖಲಾಗಿತ್ತು.

ಕೋವಿಡ್ ಸೋಂಕಿತರ ಸಂಖ್ಯೆ; ಕರ್ನಾಟಕಕ್ಕೆ 2ನೇ ಸ್ಥಾನ ಕೋವಿಡ್ ಸೋಂಕಿತರ ಸಂಖ್ಯೆ; ಕರ್ನಾಟಕಕ್ಕೆ 2ನೇ ಸ್ಥಾನ

COVID Active Cases Number Come Down In Bengaluru City

ಅಕ್ಟೋಬರ್ ತಿಂಗಳಿನಲ್ಲಿ ಕೆಲವು ದಿನ 5 ಸಾವಿರ ಹೊಸ ಪ್ರಕರಣಗಳು ಸಹ ನಗರದಲ್ಲಿ ದಾಖಲಾಗಿದ್ದವು. ಸಕ್ರಿಯ ಪ್ರಕರಣಗಳು ಹೆಚ್ಚಿರುವ ನಗರಗಳಲ್ಲಿ ಬೆಂಗಳೂರು ಟಾಪ್‌ನಲ್ಲಿತ್ತು. ಈಗ ಗುಣಮುಖ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಕ್ರಿಯ ಪ್ರಕರಣವೂ ಕಡಿಮೆಯಾಗುತ್ತಿದೆ.

ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್ ಕೊರೊನಾ ನಿಯಮ ಪಾಲಿಸದ 7 ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ನೋಟಿಸ್

ನವೆಂಬರ್ 1ರ ಭಾನುವಾರ ನಗರದಲ್ಲಿ 2,167 ಹೊಸ ಪ್ರಕರಣ ದಾಖಲಾಗಿದೆ. 6018 ಜನರು ಗುಣಮುಖರಾಗಿದ್ದಾರೆ. ಇದುವರೆಗೂ ನಗರದಲ್ಲಿ 304163 ಜನರು ಗುಣಮುಖರಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 3,874.

ಕರ್ನಾಟಕದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಅಂತೆಯೇ ಬೆಂಗಳೂರು ನಗರದಲ್ಲಿಯೂ ಕಡಿಮೆಯಾಗುತ್ತಿದೆ. ರಾಜ್ಯದಲ್ಲಿ ಭಾನುವಾರ 3,652 ಹೊಸ ಪ್ರಕರಣ ದಾಖಲಾಗಿದೆ. 8053 ಜನರು ಗುಣಮುಖರಾಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 50,592.

Recommended Video

ಒಬ್ಬರೇ ಬಸ್ stand ಅಲ್ಲಿ ಇದ್ರೆ ಹುಷಾರು !!! | Oneindia Kannada

English summary
Active COVID 19 cases come down in Bengaluru city. On November 1 city reported 2,167 new cases and active case number 30,598.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X