ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಅಂಬ್ಯುಲೆನ್ಸ್ ಹತ್ತಿದ ಯುವತಿ ದೆಹಲಿಯಲ್ಲಿ ಪತ್ತೆ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 10: ಕೋವಿಡ್ ಸೋಂಕಿತ ಯುವತಿಯೊಬ್ಬಳು ಬೆಂಗಳೂರಿನಲ್ಲಿ ಅಂಬ್ಯಲೆನ್ಸ್ ಹತ್ತಿದ ಮೇಲೆ ನಾಪತ್ತೆಯಾಗಿದ್ದಳು. ಆಕೆ ದೆಹಲಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿಯ 28 ವರ್ಷದ ಯುವತಿಗೆ ಸೆಪ್ಟೆಂಬರ್ 3ರಂದು ಕೋವಿಡ್ ಸೋಂಕು ತಗುಲಿತ್ತು. ಕೋವಿಡ್ ಕರ್ತವ್ಯದಲ್ಲಿರುವ ಅಂಬ್ಯುಲೆನ್ಸ್‌ ಎಂದು ಸ್ಟಿಕ್ಕರ್ ಹಾಕಿದ್ದ ಅಂಬ್ಯುಲೆನ್ಸ್‌ನಲ್ಲಿ ಯುವತಿಯನ್ನು ಕರೆದುಕೊಂಡು ಹೋಗಲಾಗಿತ್ತು.

ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ! ಚೆನ್ನೈ ಅಂಬ್ಯುಲೆನ್ಸ್ ಚಾಲಕರಿಗೆ ಸೆಲ್ಯೂಟ್ ಎಂದ ಮಿಜೋರಾಂ ಸರ್ಕಾರ!

ಆದರೆ, ಸಮೀಪದ ಖಾಸಗಿ ಆಸ್ಪತ್ರೆಗೆ ಹೋದ ಕುಟುಂಬದವರಿಗೆ ಆಘಾತ ಕಾದಿತ್ತು. ಯುವತಿ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಿಸಿದರೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು. ಕುಟುಂಬದವರು ಪೊಲೀಸರ ಮೊರೆ ಹೋದರು.

7 ಸಾವಿರ ಪಡೆದು ಜನರನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ವಶಕ್ಕೆ 7 ಸಾವಿರ ಪಡೆದು ಜನರನ್ನು ಸಾಗಿಸುತ್ತಿದ್ದ ಅಂಬ್ಯುಲೆನ್ಸ್ ವಶಕ್ಕೆ

COVID 19 Women Patient Disappear In Bengaluru Found In Delhi

ಬಿಬಿಎಂಪಿ ಹೇಳುವುದೇನು?: ಕೋವಿಡ್ ಖಚಿತವಾದ ರೋಗಿಗೆ ನಾವು ಮೊದಲು ಎಸ್‌ಎಂಎಸ್ ಕಳಿಸುತ್ತೇವೆ. ಅವರನ್ನು ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ಬರುವ ಒಂದು ಗಂಟೆ ಮೊದಲು ಅಂಬ್ಯುಲೆನ್ಸ್ ಚಾಲಕನ ಹೆಸರು, ನಂಬರ್ ಕಳಿಸಲಾಗುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್ ಬೆಂಗಳೂರಲ್ಲಿ ಕೊರೊನಾ ಸೋಂಕಿತರ ತುರ್ತು ಸೇವೆಗೆ ಏರ್ ಆಂಬ್ಯುಲೆನ್ಸ್

ಯುವತಿ ಕುಟುಂದವರ ಪ್ರಕಾರ ಆಕೆಯ ಮೊಬೈಲ್‌ಗೆ ಯಾವುದೇ ಎಸ್‌ಎಂಎಸ್ ಬಂದಿಲ್ಲ. ಆದರೆ, ಪಿಪಿಇ ಕಿಟ್ ಧರಿಸಿದ್ದ ಇಬ್ಬರು ಆಕೆಯನ್ನು ಬಂದು ಕರೆದುಕೊಂಡು ಹೋಗಿದ್ದಾರೆ. ಕೆಲವು ಜೊತೆ ಬಟ್ಟೆ, 400 ರೂ. ಜೊತೆ ಆಕೆ ಅಂಬ್ಯುಲೆನ್ಸ್ ಹತ್ತಿದ್ದಾಳೆ.

ದೆಹಲಿಯಲ್ಲಿ ಯುವತಿ ಪತ್ತೆ: ಆಗ್ನೇಯ ವಿಭಾಗದ ಡಿಸಿಪಿ ಜೋಶಿ ಶ್ರೀನಾಥ್ ಮಹಾದೇವ್ ಈ ಪ್ರಕರಣದ ಕುರಿತು ಹೇಳಿಕೆ ನೀಡಿದ್ದಾರೆ. "ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ. ಬಲವಂತದಿಂದ ಯಾರೂ ಕರೆದುಕೊಂಡು ಬಂದಿಲ್ಲ ಎಂದು ಹೇಳಿಕೆ ನೀಡಿದ್ದಾಳೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ" ಎಂದು ಹೇಳಿದ್ದಾರೆ.

Recommended Video

China ವಿರುದ್ಧ ಒಂದಾಗಿ ನಿಂತ 3 ದೇಶಗಳು | Oneindia Kannada

English summary
28-year-old woman from Bommanahalli Bengaluru tested positive for COVID 19. She was disappear after taken away by a ambulance. Now she found in New Delhi. Police probing the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X