ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿಯೇ ಲಸಿಕೆ ಉತ್ಪದನಾ ಘಟಕ ಸ್ಥಾಪನೆ?

|
Google Oneindia Kannada News

ಬೆಂಗಳೂರು, ಮೇ 13; ಕರ್ನಾಟಕದಲ್ಲಿ ಕೋವಿಡ್ ಸೋಂಕಿನ ವಿರುದ್ಧದ ಲಸಿಕೆಯ ಕೊರತೆ ಕಾಡುತ್ತಿದೆ. ಮೇ 14 ರಿಂದ 18-44 ವರ್ಷದವರಿಗೆ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲು ಸರ್ಕಾರ ಆದೇಶ ನೀಡಿದೆ.

ರಾಜ್ಯಕ್ಕೆ ಬೇಕಾಗಿರುವ ಲಸಿಕೆಯನ್ನು ಇಲ್ಲೇ ಉತ್ಪಾದಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಂಗಳೂರಿನ ಹೆಬ್ಬಾಳದಲ್ಲಿರುವ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆ (ಐಎಎಚ್‌ವಿಬಿ)ಯಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗುವ ನಿರೀಕ್ಷೆ ಇದೆ.

ಕರ್ನಾಟಕ; 18-44 ಲಸಿಕೆ ಹಾಕುವ ಕಾರ್ಯ ಸ್ಥಗಿತ ಕರ್ನಾಟಕ; 18-44 ಲಸಿಕೆ ಹಾಕುವ ಕಾರ್ಯ ಸ್ಥಗಿತ

ವರ್ಷಕ್ಕೆ 30 ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ಉತ್ಪಾದಿಸುವ ಗುರಿ ಹೊಂದಲಾಗಿದೆ. ಕೊವ್ಯಾಕ್ಸಿನ್ ಅಥವ ಸ್ಪುಟ್ನಿಕ್ ಲಸಿಕೆ ಉತ್ಪಾದನಾ ಘಟಕ ಸ್ಥಾಪನೆಯಾಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಲಸಿಕೆ ಕೊರತೆ; ಮುಖ್ಯ ಕಾರ್ಯದರ್ಶಿಗಳು ಹೇಳಿದ್ದೇನು? ಕರ್ನಾಟಕದಲ್ಲಿ ಲಸಿಕೆ ಕೊರತೆ; ಮುಖ್ಯ ಕಾರ್ಯದರ್ಶಿಗಳು ಹೇಳಿದ್ದೇನು?

Covid 19 Vaccine Production In Bengaluru

ಐಎಎಚ್‌ವಿಬಿ ನಿರ್ದೇಶಕರ ಎಸ್. ಎಂ. ಬೈರೇಗೌಡ ಈ ಕುರಿತು ಮಾತನಾಡಿದ್ದಾರೆ. "ಕೋವಿಡ್ ಟಾಸ್ಕ್ ಫೋರ್ಸ್‌ಗೆ ನಾವು ಈ ಕುರಿತು ವಿವರಗಳನ್ನು ನೀಡಿದ್ದೇವೆ" ಎಂದು ಹೇಳಿದ್ದಾರೆ.

ಲಸಿಕೆ ಕೊರತೆ; ಸರ್ಕಾರದ ಗಮನ ಸೆಳೆದ ಕೃಷ್ಣ ಬೈರೇಗೌಡ ಲಸಿಕೆ ಕೊರತೆ; ಸರ್ಕಾರದ ಗಮನ ಸೆಳೆದ ಕೃಷ್ಣ ಬೈರೇಗೌಡ

ಲಸಿಕೆ ತಯಾರಿಕಾ ಕಂಪನಿಗಳು ತಯಾರಿಯ ಕ್ರಮವನ್ನು ಹಂಚಿಕೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದ, ಅವರೇ ಘಟಕವನ್ನು ಇಲ್ಲಿ ಸ್ಥಾಪನೆ ಮಾಡಲು ಸರ್ಕಾರ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ.

ಐಎಎಚ್‌ವಿಬಿಯಲ್ಲಿ ಈಗಾಗಲೇ ಕೆಎಫ್‌ಡಿ, ರೇಬಿಸ್ ಸೇರಿದಂತೆ ವಿವಿಧ ಲಸಿಕೆಯನ್ನು ತಯಾರು ಮಾಡಲಾಗುತ್ತಿದೆ. ಕೋವಿಡ್ ವಿರುದ್ಧದ ಲಸಿಕೆಯನ್ನು ಇಲ್ಲೇ ತಯಾರಿಸಲು ಒಪ್ಪಿಗೆ ಸಿಗಲಿದೆಯೇ? ಕಾದು ನೋಡಬೇಕು.

Recommended Video

ರೇಣುಕಾಚಾರ್ಯ ಸಮಯ ಪ್ರಜ್ಞೆಯಿಂದ ಉಳಿಯಿತು 20 ಜನರ ಜೀವ | Oneindia Kannada

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕುರಿತು ಮಾತನಾಡಿದ್ದಾರೆ. "ಕೊವ್ಯಾಕ್ಸಿನ್ ತಯಾರಿಕಾ ಘಟಕ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ 65 ಕೋಟಿ ಹಣಕಾಸಿನ ನೆರವು ನೀಡಲಿದೆ" ಎಂದು ಹೇಳಿದ್ದಾರೆ.

English summary
Karnataka government thinking over the possibility of production of Covid-19 vaccine in a state-run facility in Bengaluru. Govt has sought details form IAHVB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X