ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂಭಮೇಳದಿಂದ ಹಿಂದಿರುಗಿದ ಒಬ್ಬ ಮಹಿಳೆಯಿಂದ 33 ಜನರಿಗೆ ಕೊರೊನಾ ಸೋಂಕು!

|
Google Oneindia Kannada News

ಬೆಂಗಳೂರು, ಮೇ 13: ಉತ್ತರಾಖಂಡದ ಕುಂಭಮೇಳದಿಂದ ಹಿಂದಿರುಗಿದ 67 ವರ್ಷದ ಮಹಿಳೆಗೆ ಏಪ್ರಿಲ್ ಮೊದಲ ವಾರದಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದರಿಂದ, ಬೆಂಗಳೂರಿನ ಸ್ಪಂದನಾ ಹೆಲ್ತ್‌ಕೇರ್‌ನ 13 ಮನೋರೋಗಿಗಳು ಸೇರಿದಂತೆ 33 ಜನರಿಗೆ ಕೊರೊನಾ ಸೋಂಕು ತಗುಲಿದೆ.

67 ವರ್ಷದ ಸೋಂಕಿತ ಮಹಿಳೆಯ 40 ವರ್ಷದ ಸೊಸೆ ಕೂಡ ಮನೋವೈದ್ಯಯಾಗಿ ಪಶ್ಚಿಮ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿನ ಹೆಲ್ತ್‌ಕೇರ್‌ನಲ್ಲಿದ್ದು, ಈ ಮೊದಲು ಯಾವುದೇ ಕೊರೊನಾ ಲಕ್ಷಣಗಳಿಲ್ಲದೆ 13 ಮನೋರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಯಾವಾಗ ಅತ್ತೆ-ಮಾವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ಒಂದೆರಡು ದಿನಗಳ ನಂತರ ಸೊಸೆಗೂ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ.

ನಂತರ ಆಸ್ಪತ್ರೆಯ ಅವಳ ಎಲ್ಲಾ ಪ್ರಾಥಮಿಕ ಸಂಪರ್ಕಿತರನ್ನು ಪರೀಕ್ಷಿಸಿದಾಗ 13 ರೋಗಿಗಳು ಮತ್ತು ಇಬ್ಬರು ಸಿಬ್ಬಂದಿಗಳಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಇದು ಕ್ಲಸ್ಟರ್ ಪ್ರಕರಣವಾದ್ದರಿಂದ ನಂದಿನಿ ಲೇಔಟ್‌ನ ಬಿಬಿಎಂಪಿ ಅಧಿಕಾರಿಗಳು ತಪಾಸಣೆಗಾಗಿ ಆಸ್ಪತ್ರೆಗೆ ಧಾವಿಸಿದರು. ಇದಲ್ಲದೆ ಕುಂಭದಿಂದ ಮರಳಿದ ಮಹಿಳೆಯಿಂದಾಗಿ 18 ಕುಟುಂಬ ಸದಸ್ಯರೂ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.

Bengaluru: Covid-19 Tests Positive For 33 People From A Woman Who Returned From Kumbha Mela

ರೋಗಿಗಳಿಗೆ ತೀವ್ರವಾದ ಲಕ್ಷಣಗಳು ಇಲ್ಲ

ಮಹಿಳೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಗೆ ಮಧ್ಯಮ ಸೋಂಕು ಇದ್ದುದರಿಂದ ಅವಳು ಚೇತರಿಸಿಕೊಂಡಿದ್ದಾಳೆ. ಇನ್ನುಳಿದ "ಸೋಂಕಿತರಲ್ಲಿ ಯಾರೊಬ್ಬರಿಗೂ ತೀವ್ರವಾದ ರೋಗಲಕ್ಷಣಗಳಿಲ್ಲ ಮತ್ತು ಅವರ ಸೌಲಭ್ಯದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ನಾವು ಮತ್ತಷ್ಟು ಪತ್ತೆಹಚ್ಚಿದಂತೆ, ಸೋಮಕಿನ ಮೂಲವು ಮನೋವೈದ್ಯರ ಕುಟುಂಬದಲ್ಲಿ ಕುಂಭದಿಂದ ಮರಳಿದವರು ಕಾರಣ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ವೈದ್ಯರು ತಿಳಿಸಿದರು.

ಸ್ಪಂದನಾ ಮುಖ್ಯಸ್ಥ ಡಾ.ಮಹೇಶ್ ಆರ್. ಗೌಡ ಅವರು ಮಾತನಾಡಿ, ನಮ್ಮ ಆಸ್ಪತ್ರೆಯಲ್ಲಿ 13 ರೋಗಿಗಳು ಕೊರೊನಾ ಪಾಸಿಟಿವ್ ಹೊಂದಿದ್ದು, ಈಗ ಇದು ಕೋವಿಡ್ ಆಸ್ಪತ್ರೆಯಾಗಿದೆ. ಆಸ್ಪತ್ರೆಯಲ್ಲಿ ಈಗ ಹೊರಗಿನಿಂದ 31 ಸೋಂಕಿತರಿದ್ದಾರೆ ಎಂದರು.

ಸ್ಪಂದನಾದ ಎಲ್ಲಾ ಸೋಂಕಿತರು ಚೇತರಿಸಿಕೊಂಡಿದ್ದಾರೆ ಮತ್ತು ಸಮಯಕ್ಕೆ ಸರಿಯಾಗಿ ಪ್ರತ್ಯೇಕಿಸಲ್ಪಟ್ಟಿದ್ದರಿಂದ ಅವರು ವೈರಸ್ ಹರಡುವುದನ್ನು ಕೊನೆಗೊಳಿಸಿದ್ದಾರೆ. "ಆದರೆ, 18 ಕುಟುಂಬ ಸದಸ್ಯರು ವೈರಸ್ ಅನ್ನು ಇತರರಿಗೆ ಹರಡುತ್ತಾರೆಯೇ ಎಂದು ನಮಗೆ ತಿಳಿದಿಲ್ಲ' ಎಂದು ಡಾ.ಗೌಡ ಹೇಳಿದರು.

ಈ ಮೊದಲು ಮನೋವೈದ್ಯರು ಕೊರೊನಾ ರೋಗ ಲಕ್ಷಣ ರಹಿತರಾಗಿದ್ದರು, ಆನಂತರ ಕೋವಿಡ್‌ನ ರೋಗಲಕ್ಷಣಗಳನ್ನು ಹೊಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಬೇಕಾಯಿತು. ನಮ್ಮ ಸಹೋದ್ಯೋಗಿಯ ಅತ್ತೆಗೆ ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಆಸ್ಪತ್ರೆಗೆ ಬರುವುದನ್ನು ನಿಲ್ಲಿಸಿದ್ದಾರೆ ಎಂದು ಡಾ.ಗೌಡ ತಿಳಿಸಿದರು.

Recommended Video

ಸೈಕ್ಲೋನ್‌ ಇಫೆಕ್ಸ್‌: ಮೇ.16 ರಂದು ರಾಜ್ಯದ ಹಲವೆಡೆ ಭಾರಿ ಮಳೆ ಸಾಧ್ಯತೆ | Oneindia Kannada

ರಾಜ್ಯದಿಂದ ಎಷ್ಟು ಮಂದಿ ಕುಂಭಮೇಳಕ್ಕೆ ಹಾಜರಾಗಿದ್ದರು ಮತ್ತು ಅವರು ಹಿಂದಿರುಗಿದ ನಂತರ ಅವರನ್ನು ಪರೀಕ್ಷಿಸಿದ ಯಾವುದೇ ವಿವರಗಳಿಲ್ಲ. ಕುಂಭದಿಂದ ಮರಳಿದವರನ್ನು ಪತ್ತೆಹಚ್ಚಲು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದರು.

English summary
The 67-year-old woman who returned from Kumbha Mela was tested to Covid-19 Positive in the first week of April, which will infect 33 people, including 13 psychiatrists at spandana Healthcare in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X