ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬೈನಿಂದ ಬಂದ 6 ಕನ್ನಡಿಗರಲ್ಲಿ ಕೊರೊನಾ ರೋಗ ಲಕ್ಷಣ ಪತ್ತೆ

|
Google Oneindia Kannada News

ಬೆಂಗಳೂರು, ಮಾರ್ಚ್ 22: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿದೆ. ಇದು ಸಹಜವಾಗಿ ರಾಜ್ಯದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಕೊರೊನಾ ತಡೆಯಲು ಈಗಾಗಲೇ ರಾಜ್ಯ ಸರ್ಕಾರ ಎಲ್ಲ ರೀತಿಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಸೋಂಕಿತರ ಸಂಖ್ಯೆ ಅಧಿಕವಾಗುತ್ತಲೆ ಇದೆ.

ಇದೀಗ, ದುಬೈನಿಂದ ಬಂದ 6 ಜನ ಕನ್ನಡಿಗರಲ್ಲಿ ಕೊರೊನಾ ರೋಗದ ಲಕ್ಷಣ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ದುಬೈನಿಂದ ಬಂದ ಕನ್ನಡಿಗರ ಮೇಲೆ ನಿಗಾವಹಿಸಲಾಗಿದೆ ಎಂದಿದ್ದಾರೆ.

ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?ದೇಶದ ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ವೈರಸ್ ತಪಾಸಣೆಗೆಷ್ಟು ಹಣ?

'ಇಂದು ದುಬೈನಲ್ಲಿದ್ದ 195 ಕನ್ನಡಿಗರನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಇವರಲ್ಲಿ 6 ಜನರಿಗೆ #Covid19 ಲಕ್ಷಣಗಳಿದ್ದರಿಂದ, ಇವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಎದೆ ರೋಗಗಳ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ' ಎಂದು ತಿಳಿಸಿದ್ದಾರೆ.

Covid 19 Symptoms Detected In 6 People Who Came From Dubai To Bangalore

ಇನ್ನು ಇವರ ಜೊತೆ ಪ್ರಯಾಣ ಮಾಡಿದವರ ಬಗ್ಗೆಯೂ ಅನುಮಾನ ವ್ಯಕ್ತವಾಗಿದ್ದು, ಅವರ ಮೇಲೆ ಕೂಡ ನಿಗಾವಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ. 'ಉಳಿದ ಪ್ರಯಾಣಿಕರನ್ನು, ಬೆಂಗಳೂರಿನ ಆಕಾಶ್ ವೈದ್ಯಕೀಯ ಸಂಸ್ಥೆಯ ಪ್ರತ್ಯೇಕಿಸಲ್ಪಟ್ಟ ವಾರ್ಡಿನಲ್ಲಿ ಸೇರಿಸಿ ನಿಗಾವಹಿಸಲಾಗಿದೆ' ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಭಾರತದಲ್ಲಿ 7ನೇ ಸಾವು, ಕತಾರ್‌ನಿಂದ ಬಂದ 38 ವರ್ಷದ ವ್ಯಕ್ತಿಭಾರತದಲ್ಲಿ 7ನೇ ಸಾವು, ಕತಾರ್‌ನಿಂದ ಬಂದ 38 ವರ್ಷದ ವ್ಯಕ್ತಿ

ಸದ್ಯ, ಬೆಂಗಳೂರು ಮತ್ತು ಮಂಗಳೂರು ಏರ್‌ಪೋರ್ಟ್‌ನಲ್ಲಿ ಯಾವುದೇ ಅಂತರರಾಷ್ಟ್ರೀಯ ವಿಮಾನಗಳಿಗೆ ಲ್ಯಾಂಡಿಂಗ್ ಇಲ್ಲ ಎಂದು ಸರ್ಕಾರ ಸೂಚಿಸಿದೆ. ಈ ನಡುವೆ ಸ್ಥಳೀಯ ವಿಮಾನಗಳ ಮೇಲೂ ನಿಗಾವಹಿಸಲಾಗಿದೆ.

English summary
Covid 19 symptoms detected in 6 people who came from Dubai to Bangalore. total 195 people came to Bangalore from Dubai, now Six are admitted to Rajiv Gandhi Hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X