ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಕರ್ನಾಟಕದಲ್ಲಿ ನಾಳೆಯಿಂದ ಪ್ಲಾಸ್ಮಾ ಥೆರಪಿ ಪ್ರಾರಂಭ

|
Google Oneindia Kannada News

ಬೆಂಗಳೂರು, ಏಪ್ರಿಲ್ 24: ಕರ್ನಾಟಕದಲ್ಲಿ ನಾಳೆಯಿಂದ (ಏಪ್ರಿಲ್ 24) ಪ್ಲಾಸ್ಮಾ ಥೆರಪಿ ಪ್ರಾರಂಭವಾಗಲಿದೆ. ಈ ಬಗ್ಗೆ ಆರೋಗ್ಯ ಸಚಿವ ಶ್ರೀ ರಾಮುಲು ಟ್ವೀಟ್ ಮಾಡಿದ್ದಾರೆ.

"ಕೋವಿಡ್ 19 ಸೋಂಕಿತರಿಗೆ ಕಾನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಯನ್ನು ಬಳಸುವ ಮೊದಲ ಹಂತದ ಪ್ರಯೋಗಗಳನ್ನು ಪ್ರಾರಂಭಿಸಲು ಕರ್ನಾಟಕ ಸಿದ್ದವಾಗಿದೆ. ಬಿಎಂಸಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಳೆ ಬೆಳಿಗ್ಗೆ 8 ಗಂಟೆಗೆ ಯೋಜನೆಗೆ ಮೊದಲ ಚಾಲನೆ ಸಿಕ್ಕಲಿದೆ" ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಪ್ಲಾಸ್ಮಾ ಥೆರಪಿ ಆಶಾದಾಯಕ ಫಲಿತಾಂಶ ನೀಡಿದೆ: ದೆಹಲಿ ಸಿಎಂ ಕೇಜ್ರಿವಾಲ್ಪ್ಲಾಸ್ಮಾ ಥೆರಪಿ ಆಶಾದಾಯಕ ಫಲಿತಾಂಶ ನೀಡಿದೆ: ದೆಹಲಿ ಸಿಎಂ ಕೇಜ್ರಿವಾಲ್

ಕೇಂದ್ರ ಸಚಿವರೊಂದಿಗೆ ಇಂದು ಶ್ರೀರಾಮುಲು ವಿಡಿಯೋ ಸಂದರ್ಶನದಲ್ಲಿ ಭಾಗಿಯಾಗಿದ್ದರು ಆ ನಂತರ ಪ್ಲಾಸ್ಮಾ ಥೆರಪಿ ಪ್ರಾರಂಭದ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

COVID-19: Plasma Therapy likely to begin from Apr 25 in Karnataka

''ಕಾನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿಗೆ ನಾವು ಈಗಾಗಲೇ ಅನುಮೋದನೆ ಪಡೆದಿದ್ದೇವೆ. ಇದಕ್ಕಾಗಿ ಯಾವುದೇ ವಿಶೇಷ ಅನುಮತಿಯ ಅಗತ್ಯವಿಲ್ಲ. ನಾನು ಬಿಎಂಸಿ (ಬೆಂಗಳೂರು ವೈದ್ಯಕೀಯ ಕಾಲೇಜು) ಮಾತನಾಡಿದ್ದೇನೆ. ನಾವು ಬಹುಶಃ ನಾಳೆಯಿಂದಲೇ ಮೊದಲ ರೋಗಿಗೆ ಇದನ್ನು ಪ್ರಾರಂಭಿಸಬಹುದು. ದಾನಿ ಕೂಡ ಒಪ್ಪಿದ್ದಾರೆ.'' ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ತಿಳಿಸಿದ್ದರು.

ಪ್ಲಾಸ್ಮಾ ಥೆರಪಿ ಎಂದರೇನು?

ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಅದನ್ನು ಕೊರೊನಾದಿಂದ ಬಳಲುತ್ತಿರುವ ರೋಗಿಯ ಅಥವಾ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವ ವ್ಯಕ್ತಿಯ ದೇಹಕ್ಕೆ ಸೇರಿಸುವುದು. ಈ ಹಿಂದೆ 1918ರಲ್ಲಿ ಕಾಣಿಸಿಕೊಂಡಿದ್ದ ಫ್ಲೂ, ಎಬೋಲಾ, ಸಾರ್ಸ್ ಮೊದಲಾದ ಸಾಂಕ್ರಾಮಿಕ ಪಡಿಗಿನ ವೇಳೆಯಲ್ಲೂ ಈ ಪ್ಲಾಸ್ಮಾ ಥೆರಪಿ ಬಳಸಲಾಗಿತ್ತು. ಒಂದು ವೇಳೆ ಪ್ಲಾಸ್ಮಾ ಥೆರಪಿಗೆ ರೋಗಿ ಸೂಕ್ತವಾಗಿ ಸ್ಪಂದಿಸಿದರೆ ಆತ ಕೊರೊನಾದಿಂದ ಕೇವಲ 3-7 ದಿನಗಳಲ್ಲಿ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

English summary
Karnataka is likely to start Convalescent Plasma Therapy for COVID-19 patients, who are critical, from tomorrow, Medical Education Minister K Sudhakar said here on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X