ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಿಂದ ಕೊವಿಡ್19 ಸೋಂಕಿತ ಮಹಿಳೆ ಎಸ್ಕೇಪ್!

|
Google Oneindia Kannada News

ಬೆಂಗಳೂರು, ಆಗಸ್ಟ್.11: ಸಿಲಿಕಾನ್ ಸಿಟಿಯ ಕೆಂಪೇಗೌಡ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(ಕಿಮ್ಸ್) ಆಸ್ಪತ್ರೆಯಿಂದ 43 ವರ್ಷದ ಕೊರೊನಾವೈರಸ್ ಸೋಂಕಿತ ಮಹಿಳೆಯರು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.

Recommended Video

KRS Mandya, ಆತಂಕದಲ್ಲಿ ಮಂಡ್ಯದ ಜನತೆ | Oneindia Kannada

ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ರಚಿಸಿದ್ದ ಬಿ ಬ್ಲಾಕ್ ನಿಂದ ಸೋಂಕಿತ ಮಹಿಳೆಯು ಶುಕ್ರವಾರವೇ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಸೋಂಕಿತ ಮಹಿಳೆಯು ಬೆಂಗಳೂರು ದೊಡ್ಡಬಸ್ತಿ ರಸ್ತೆಯ ನಿವಾಸಿ ಎಂದು ತಿಳಿದು ಬಂದಿದೆ.

ಕಂಟೇನ್ಮೆಂಟ್ ಝೋನ್ ಗಳಲ್ಲೇ ಬಂಧಿಯಾಗುತ್ತಿದೆಯಾ ಬೆಂಗಳೂರು?ಕಂಟೇನ್ಮೆಂಟ್ ಝೋನ್ ಗಳಲ್ಲೇ ಬಂಧಿಯಾಗುತ್ತಿದೆಯಾ ಬೆಂಗಳೂರು?

ಕಳೆದ ಜುಲೈ.25ರಂದು ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿತ್ತು. ಕೊವಿಡ್-19 ಚಿಕಿತ್ಸಾ ಕೇಂದ್ರದಲ್ಲಿ ದಾಖಲಾಗಿದ್ದ ಮಹಿಳೆಯು ಇತ್ತೀಚಿಗೆ ನಾಪತ್ತೆಯಾಗಿದ್ದು, ಸೋಂಕಿತ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಕೊರೊನಾವೈರಸ್ ಸೋಂಕಿತ ಮಹಿಳೆ ವಿರುದ್ಧ ಕಂಪ್ಲೆಂಟ್

ಕೊರೊನಾವೈರಸ್ ಸೋಂಕಿತ ಮಹಿಳೆ ವಿರುದ್ಧ ಕಂಪ್ಲೆಂಟ್

ಕಿಮ್ಸ್ ಬಿ ಬ್ಲಾಕ್ ನಿಂದ ನಾಪತ್ತೆಯಾದ ಕೊರೊನಾವೈರಸ್ ಸೋಂಕಿತ ಮಹಿಳೆಯ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್ 269 ( ಜೀವಕ್ಕೆ ಅಪಾಯವನ್ನು ತಂದೊಡ್ಡುವ ಅಪಾಯಕಾರಿ ಸೋಂಕು ಹರಡುವಿಕೆಯಲ್ಲಿ ನಿರ್ಲಕ್ಷ್ಯ) ಮತ್ತು ಸೆಕ್ಷನ್ 270 ( ಮಾರಕವಾಗಿರುವ ಜೀವಕ್ಕೆ ಕುತ್ತು ಉಂಟು ಮಾಡುವ ಅಪಾಯಕಾರಿ ಸೋಂಕು ಹರಡುವಿಕೆ) ಅಡಿಯಲ್ಲಿ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಕಿಮ್ಸ್ ಆಸ್ಪತ್ರೆಯಲ್ಲಿ ಮೊದಲ ಬಾರಿ ಇಂಥ ಪ್ರಕರಣ

ಕಿಮ್ಸ್ ಆಸ್ಪತ್ರೆಯಲ್ಲಿ ಮೊದಲ ಬಾರಿ ಇಂಥ ಪ್ರಕರಣ

ಕೊರೊನಾವೈರಸ್ ಸೋಂಕಿತ ಮಹಿಳೆಯೊಬ್ಬರು ಕಿಮ್ಸ್ ಆಸ್ಪತ್ರೆಯಿಂದ ಓಡಿ ಹೋಗಿರುವುದು ಇದೇ ಮೊದಲ ಪ್ರಕರಣ ಎಂದು ಟಿಎನ್ಎಂ ಡಾ.ಸಮರ್ಥ್ ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿತರಲ್ಲಿ ಹಲವು ರೀತಿಯ ಜನರನ್ನು ನಾವು ನೋಡುತ್ತೇವೆ. ಕೆಲವರಿಗೆ ಕೊವಿಡ್-19 ಸೋಂಕಿನ ಬಗ್ಗೆ ಬಹಳಷ್ಟು ಭಯವಿದೆ. ಇನ್ನು ಕೆಲವು ಸೋಂಕಿತರಿಗೆ ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ವೈದ್ಯರ ಬಳಿಯಲ್ಲಿ ಹೇಳಿಕೊಳ್ಳುವುದಕ್ಕೂ ಹಿಂದು-ಮುಂದು ನೋಡುತ್ತಿದ್ದಾರೆ ಎಂದು ಡಾ. ಸಮರ್ಥ್ ತಿಳಿಸಿದ್ದಾರೆ.

ಪರಾರಿಯಾದ ಸೋಂಕಿತ ಮಹಿಳೆಗೆ ವೈದ್ಯರಿಂದ ದೂರವಾಣಿ ಕರೆ

ಪರಾರಿಯಾದ ಸೋಂಕಿತ ಮಹಿಳೆಗೆ ವೈದ್ಯರಿಂದ ದೂರವಾಣಿ ಕರೆ

ಕೊರೊನಾವೈರಸ್ ಸೋಂಕಿತ ಮಹಿಳೆಯು ಕಿಮ್ಸ್ ಆಸ್ಪತ್ರೆಯಿಂದ ನಾಪತ್ತೆಯಾಗುತ್ತಿದ್ದಂತೆ ವೈದ್ಯರು ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಸೋಂಕಿತ ಮಹಿಳೆಯು ನೀಡಿದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದರೂ ಮಹಿಳೆಯರು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಪೊಲೀಸರಿಗೆ ದೂರು ನೀಡಿದೆವು ಎಂದು ಡಾ. ಸಮರ್ಥ್ ತಿಳಿಸಿದ್ದಾರೆ.

10 ರಿಂದ 15 ದಿನಗಳ ಚಿಕಿತ್ಸೆಗೆ 65 ಸಾವಿರ ರೂಪಾಯಿ

10 ರಿಂದ 15 ದಿನಗಳ ಚಿಕಿತ್ಸೆಗೆ 65 ಸಾವಿರ ರೂಪಾಯಿ

ಕೊರೊನಾವೈರಸ್ ಸೋಂಕಿತ ಮಹಿಳೆಯು ಅದು ಹೇಗೆ ಕಿಮ್ಸ್ ಆಸ್ಪತ್ರೆಯಿಂದ ಪರಾರಿಯಾದರು ಎನ್ನುವುದು ಸಿಬ್ಬಂದಿಗೆ ಗೊತ್ತೇ ಆಗಿಲ್ಲ. ಸೋಂಕಿತರಿಗೆ ಕಿಮ್ಸ್ ಚಿಕಿತ್ಸಾ ವೆಚ್ಚ ಮತ್ತು ವೈದ್ಯಕೀಯ ವಿಮೆಯ ಬಗ್ಗೆ ಭೀತಿ ಎದುರಾಗಿದ್ದು, ಆಸ್ಪತ್ರೆಯಿಂದ ಓಡಿ ಹೋಗಿರಬಹುದು ಎಂದು ಡಾ. ಸಮರ್ಥ್ ತಿಳಿಸಿದರು. ಕಿಮ್ಸ್ ನಲ್ಲಿ ಔಷಧಿಯನ್ನು ಹೊರತುಪಡಿಸಿದಂತೆ 10 ರಿಂದ 15 ದಿನಗಳವರೆಗೂ ಚಿಕಿತ್ಸೆಗೆ 65,000 ರೂಪಾಯಿ ನಿಗದಿಗೊಳಿಸಲಾಗಿದೆ.

English summary
COVID-19 Patient Flees Bengaluru's KIMS Hospital, Police Begin Search.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X