ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಯು ನಂಬರ್ ಹೆಸರಿನಲ್ಲಿ ಬಡವರ ಸಮಾಧಿ ಮಾಡ್ತಿದೆಯಾ ಸರ್ಕಾರ ?

|
Google Oneindia Kannada News

ಬೆಂಗಳೂರು, ಏಪ್ರಿಲ್ 29: ಆರ್‌ಟಿ- ಪಿಸಿಆರ್ ಟೆಸ್ಟ್ ಅಥವಾ ಆಂಟಿಜನ್ ಟೆಸ್ಟ್‌ನಲ್ಲಿ ಪಾಸಿಟಿವ್ ಬಂದರೆ ಮಾತ್ರ ಬಿಯು ನಂಬರ್ ಕ್ರಿಯೇಟ್ ಆಗುತ್ತೆ ! ಈ ಎರಡೂ ಟೆಸ್ಟ್‌ನಲ್ಲಿ ನೆಗಟಿವ್ ಬಂದು ಸಿಟಿ ಸ್ಕ್ಯಾನ್‌ನಲ್ಲಿ ಪಾಸಿಟಿವ್ ಬಂದರೆ ಬಿಯು ನಂಬರ್ ಜನರೇಟ್ ಆಗಲ್ಲ ! ಬಿಯು ನಂಬರ್ ಇಲ್ಲ ಅಂದ್ರೆ ಸರ್ಕಾರದಿಂದ ಕೊರೊನಾ ಸೋಂಕಿತರಿಗೆ ಬೆಡ್ ಸಿಗಲ್ಲ! ಕೊರೊನಾ ಸೋಂಕಿತರಿಗೆ ಬೆಡ್ ಕೊಡಲು ರಾಜ್ಯ ಸರ್ಕಾರ ರೂಪಿಸಿರುವ ಮಹತ್ವಾಕ್ಷಾಂಕ್ಷಿ ಯೋಜನೆ. ಈ ಲಡಾಸ್ ಸ್ಕೀಮ್‌ನ ಎಡವಟ್ಟಿನಿಂದ ಬಡವರು ಹಾಸಿಗೆ ಸಿಗದೇ ನಡು ರಸ್ತೆಯಲ್ಲಿಯೇ ಒದ್ದಾಡಿ ಜೀವ ಬಿಡುತ್ತಿದ್ದಾರೆ.

ಬುಧವಾರ ರಾತ್ರಿ ಈ ಸಮಸ್ಯೆಯಿಂದ ಮೂವರು ಕೊರೊನಾ ಸೋಂಕಿತರು ಬಿಯು ನಂಬರ್ ಇಲ್ಲದೇ ಹಾಸಿಗೆ ಸಿಗದೇ ಪರದಾಡಿದ್ದಾರೆ. ವಿಕ್ಟೋರಿಯಾದಲ್ಲಿ ಬೆಡ್ ಇದ್ದರೂ ಬಿಯು ನಂಬರ್ ಜನರೇಟ್ ಆಗದೇ ಮೂವರು ಸೋಂಕಿತರು ಬುಧವಾರ ಅಲೆದು ಹೈರಾಣ ಆಗಿದ್ದಾರೆ. ಮೂವರದ್ದೂ ಒಂದೇ ಸಮಸ್ಯೆ. ಆಂಟಿಜನ್ ಮತ್ತು ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದಿದೆ. ಆದರೆ, ಮೂವರದ್ದು ಸಿಟಿ ಸ್ಕ್ಯಾನ್ ಮಾಡಿಸಿದಾಗ ಪಾಸಿಟಿವ್ ಬಂದಿದೆ.

2ನೇ ಡೋಸ್ ಕೊರೊನಾ ಲಸಿಕೆ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ 2ನೇ ಡೋಸ್ ಕೊರೊನಾ ಲಸಿಕೆ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ

ಈ ದಾಖಲೆಗಳನ್ನು ಇಟ್ಟುಕೊಂಡು ಬಿಯು ನಂಬರ್ ಕ್ರಿಯೇಟ್ ಮಾಡೋಕೆ ಸಾಧ್ಯವಾಗಿಲ್ಲ. ಹೀಗಾಗಿ ಸರ್ಕಾರದ ಕೋಟಾದಡಿ ಇರುವ ಕೋವಿಡ್ ಐಸಿಯು ಪಡೆಯಲಾಗದೇ ಮೂವರು ರೋಗಿಗಳು ಈಗಲೂ ನರಳುತ್ತಲೇ ಇದ್ದಾರೆ. ರಾಜಕುಮಾರ್ ರಸ್ತೆಯಲ್ಲಿರುವ ಸುಗುಣ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದಾಗ ಈ ಸಂಗತಿ ಹೊರ ಬಿದ್ದಿದೆ. ಇದೇ ರೀತಿ ಸಾವಿರಾರು ಮಂದಿ ಹಾಸಿಗೆ ಸಿಗದೇ ಕಂಗಾಲಾಗಿದ್ದಾರೆ.

Covid 19: Negative in RT-PCR Test: Positive in CT Scan

ಲಕ್ಷ್ಮೀ ಎಂಬುವರು ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿರುವ ಬಿಬಿಎಂಪಿ ಕೋವಿಡ್ ಪರೀಕ್ಷಾ ಕೇಂದ್ರದಲ್ಲಿ ಆರ್ ಟಿ - ಪಿಸಿಆರ್ ಟೆಸ್ಟ್ ಮಾಡಿಸಿದ್ದರು. ಏ. 27 ರಂದು ನೆಗಟಿವ್ ಎಂದು ಫಲಿತಾಂಶ ಬಂದಿದೆ. ಇಷ್ಟಾಗಿಯೂ ಎದೆ ನೋವು ಕಾಣಿಸಿಕೊಂಡಿದ್ದ ಲಕ್ಷ್ಮೀ ಅವರನ್ನು ಸಿಟಿ ಸ್ಕ್ಯಾನ್ ಮಾಡಿಸಿದಾಗ ಪಾಸಿಟಿವ್ ಇರುವುದು ಗೊತ್ತಾಗಿದೆ. ಮಾತ್ರವಲ್ಲ ಶೇ. 90 ರಷ್ಟು ಶ್ವಾಸಕೋಶ ಸೋಂಕು ಪೀಡಿತವಾಗಿರುವುದು ಗೊತ್ತಾಗಿದೆ. ಕೂಡಲೇ ಅವರು ಆಸ್ಪತ್ರೆಗೆ ಸೇರಲು ಪರದಾಡಿದ್ದಾರೆ.

ಕೋವಿಡ್ ರೋಗಿಗಳಿಗೆ ಸಂಜೀವಿನಿಯಾದ ಬಿಡದಿಯ ಬೆನ್ಟ್ಲೇ ಇಂಡಿಯಾ ಆಕ್ಸಿಜನ್ ಘಟಕ ಕೋವಿಡ್ ರೋಗಿಗಳಿಗೆ ಸಂಜೀವಿನಿಯಾದ ಬಿಡದಿಯ ಬೆನ್ಟ್ಲೇ ಇಂಡಿಯಾ ಆಕ್ಸಿಜನ್ ಘಟಕ

ಆರ್‌ಟಿ -ಪಿಸಿಆರ್ ಪರೀಕ್ಷೆಯಲ್ಲಿ ನೆಗಟಿವ್ ಬಂದಿರುವ ಕಾರಣ ಅವರಿಗೆ ಬಿಯು ನಂಬರ್ ಜನರೇಟ್ ಆಗಿಲ್ಲ. ಹೀಗಾಗಿ ಅವರಿಗೆ ಹಾಸಿಗೆ ಸಿಗದೇ ಪರದಾಡಿದ್ದಾರೆ. ಭಾಗ್ಯಮ್ಮ ಎಂಬ ಮಹಿಳೆಯದ್ದು ಇದೇ ರೀತಿಯ ಸಮಸ್ಯೆಗೆ ಒಳಗಾಗಿ ಕೋವಿಡ್ ಬೆಡ್ ಸಿಗದೇ ಹೈರಾಣ ಆಗಿದ್ದಾರೆ. ಸರ್ಕಾರದ ಲಡಾಸು ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Covid 19: Negative in RT-PCR Test: Positive in CT Scan

ಬಿಬಿಎಂಪಿ ಮಹಾ ಎಡವಟ್ಟು ಮಾಡುತ್ತಿದೆ. ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ಕೊರೊನಾ ಇದ್ದವರಿಗೂ ನೆಗಟಿವ್ ಎಂದು ಫಲಿತಾಂಶ ಬರುತ್ತಿದೆ. ಕೊರೊನಾ ಇಲ್ಲದವರಿಗೆ ಪಾಸಿಟಿವ್ ತೋರಿಸುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದರಿಂದ ರಾಜಧಾನಿಯಲ್ಲಿರುವ ಡಯೋಗ್ನೋಸ್ಟಿಕ್ ಲ್ಯಾಬ್‌ಗಳಲ್ಲಿ ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಸಿಟಿ ಸ್ಕ್ಯಾನ್‌ಗೆ ಆರು ಸಾವಿರ ರೂಪಾಯಿ ತಗಲುತ್ತಿದ್ದು ಬಡವರು ಇದನ್ನು ಭರಿಸಲಾಗದೇ ಒಂದೆಡೆ ಕಂಗಾಲಾಗಿದ್ದಾರೆ. ಕೊರೊನಾ ಸೋಂಕು ಕಾಣಿಸಿಕೊಂಡ ಕೂಡಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಇದೀಗ ಜನ ಆರ್‌ಟಿ- ಪಿಸಿಆರ್ ಪರೀಕ್ಷೆ ಬಿಟ್ಟು ಸಿಟಿ ಸ್ಕ್ಯಾನ್ ಮೊರೆ ಹೋಗಿದ್ದಾರೆ. ಈ ಎಲ್ಲಾ ಅವ್ಯವಸ್ಥೆಯ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

Recommended Video

ಕೊರೋನಾ ರೋಗಿಗೆ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಆದ CT ಸ್ಕ್ಯಾನ್ ಅನುಭವ!! | Oneindia Kannada

English summary
It is a pathetic story of bu number creation and bed allotment for corona patents know more .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X