ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮರಣ ಪ್ರಮಾಣ 2.08% ರಷ್ಟಿದೆ, ಆತಂಕ ಬೇಡ: ಸುಧಾಕರ್

|
Google Oneindia Kannada News

ಬೆಂಗಳೂರು, ಜುಲೈ 20: ವೈದ್ಯರ ತಿಂಗಳ ವೇತನ ಏರಿಕೆ, ಆಶಾ ಕಾರ್ಯಕರ್ತರ ಸಂಬಳ ಏರಿಕೆ, ಕರ್ನಾಟಕದಲ್ಲಿ ಮರಣ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸುದ್ದಿಗೋಷ್ಠಿ ನಡೆಸಿ, ವಿವರಿಸಿದರು.

Recommended Video

Elephant : ಈ ಆನೆಯ ಕೋಪ ನೋಡಿದ್ರೆ ಭಯ ಆಗುತ್ತೆ | Angry Elephant found in Bandipur National Park | Oneindia Kannada

ದೇಶದಲ್ಲಿ ಕೊರೋನ ಇನ್ನೂ ಸಮುದಾಯ ಹಂತಕ್ಕೆ ತಲುಪಿಲ್ಲ. ಕಳೆದ 15 ದಿನಗಳಿಂದ ಮಾತ್ರವೇ ರಾಜ್ಯದಲ್ಲಿ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇತರೆ ರಾಜ್ಯಗಳಲ್ಲಿ 2 ತಿಂಗಳು ಮುಂಚಿತವಾಗಿಯೇ ಈ ಮಟ್ಟದಲ್ಲಿ ಹರಡಿತ್ತು. ರಾಜ್ಯದಲ್ಲಿ ಇದುವರೆಗೆ 10,57,303 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಮರಣ ಪ್ರಮಾಣ 2.08% ರಷ್ಟಿದೆ ಎಂದರು.

Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್ ಜೋನ್ ನಲ್ಲಿದೆ?Infographics:ಕೊವಿಡ್ 19 ಸಾವು-ನೋವು, ಯಾವ ಜಿಲ್ಲೆ ಡೇಂಜರ್ ಜೋನ್ ನಲ್ಲಿದೆ?

ಡಾ.ಕೆ.ಸುಧಾಕರ್ ಸುದ್ದಿಗೋಷ್ಠಿ ಮುಖ್ಯಾಂಶಗಳು:

* ರಾಷ್ಟ್ರೀಯ ಆರೋಗ್ಯ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ 45 ರಿಂದ 48 ಸಾವಿರದವರೆಗೆ ತಿಂಗಳ ವೇತನ ಸರ್ಕಾರವೇ ಭರಿಸಲಿದೆ. ಮುಂದಿನ 6 ತಿಂಗಳವರೆಗೆ ಅನುಷ್ಠಾನ.

Covid 19 Mortality Rate In Karnataka Is Low, Dont Panic: Sudhakar

* ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಕುರಿತಂತೆ ಶೀಘ್ರದಲ್ಲೇ ನಿರ್ಧಾರ. ಮುಖ್ಯಮಂತ್ರಿಗಳೊಂದಿಗೆ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ

* ಬೆಂಗಳೂರಿನ ವಲಯವಾರು ಕೋವಿಡ್ ಉಸ್ತುವಾರಿ ಸಚಿವರುಗಳ ಜೊತೆ ಸಿಎಂ ಮಹತ್ವದ ಸಭೆ. ಬೂತ್ ಮಟ್ಟದ ಕಾರ್ಯಪಡೆಗಳು ಸೋಂಕಿತರ, ಸಂಪರ್ಕಿತರ ಮತ್ತು ILI ಮತ್ತು SARI ಲಕ್ಷಣವುಳ್ಳ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆ ಹಚ್ಚಿ ಪರೀಕ್ಷೆ ಮಾಡಿಸಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದರು.

Covid 19 Mortality Rate In Karnataka Is Low, Dont Panic: Sudhakar

* ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆ ಡ್ಯಾಶ್ ಬೋರ್ಡ್ ನಲ್ಲಿ ಈಗ ಲಭ್ಯ. ರಿಯಲ್ ಟೈಮ್ ಮಾಹಿತಿಯಿಂದ ಹಾಸಿಗೆ ಲಭ್ಯತೆ ಕಂಡುಹಿಡಿಯುವುದು ಈಗ ಸರಳ.

Covid 19 Mortality Rate In Karnataka Is Low, Dont Panic: Sudhakar

* ವಿಕ್ಟೋರಿಯ ಆಸ್ಪತ್ರೆಯಲ್ಲಿ ಮೇ ಯಿಂದ ಇದುವರೆಗೆ 118 ಕೋವಿಡ್ ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಲಾಗಿದ್ದು ಎಲ್ಲ ತಾಯಂದಿರು ಹಾಗೂ ನವಜಾತ ಶಿಶುಗಳು ಆರೋಗ್ಯದಿಂದಿದ್ದಾರೆ. ಯಾವ ಮಗುವಿಗೂ ಸೋಂಕು ತಗುಲಿಲ್ಲ. ಖಾಸಗಿ ಆಸ್ಪತ್ರೆಯ ವೈದ್ಯರೂ ಕೂಡ ಧೃತಿಗೆಡದೆ ಕೋವಿಡ್ ಸೋಂಕಿತರ ಹೆರಿಗೆಗೆ ಮುಂದಾಗಬೇಕು. ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ನೆರವಾಗಬೇಕು ಎಂದು ಸಚಿವ ಡಾ.ಸುಧಾಕರ್ ಕರೆ ನೀಡಿದರು.

English summary
NHM Doctor's salary hiked to Rs.45,000 per month; state government to bear the cost, Karnataka's Covid 19 Mortality rate is low, Don t Panic Highlights of Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X