ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಗರ್ ವಾಲ್ ಸಮಾಜದಿಂದ ಮಂಗಳಮುಖಿಯರಿಗೆ ಪಡಿತರ ಕಿಟ್ ವಿತರಣೆ

|
Google Oneindia Kannada News

ಕೋವಿಡ್-19 ಸಂಕಷ್ಟದಲ್ಲಿರುವ 150ಕ್ಕೂ ಹೆಚ್ಚು ಮಂಗಳಮುಖಿಯರಿಗೆ ದಿನಸಿ ಸಾಮಾಗ್ರಿಗಳು ಹಾಗೂ ಮೆಡಿಕಲ್ ಕಿಟ್‌ಗಳನ್ನು ಅಗರವಾಲ್ ಸಮಾಜ (ಕರ್ನಾಟಕ)ದ ಅಧ್ಯಕ್ಷರಾದ ಅಧ್ಯಕ್ಷ ಸಂಜಯ್ ಗರ್ಗ್ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ವಿತರಿಸಿದರು.

ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಆಫ್ ಬೆಂಗಳೂರು ಮತ್ತು ಅಗರವಾಲ್ ಸಮಾಜ (ಕರ್ನಾಟಕ) ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಜಯ್ ಗರ್ಗ್ ಮಂಗಳಮುಖಿಯರಿಗೆ ಪಡಿತರ ಕಿಟ್ ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾಜದಿಂದ ನಿರ್ಲಕ್ಷ್ಯಕ್ಕೆ ಒಳಗಾಗದ ಈ ವರ್ಗದವರ ಬಗ್ಗೆ ಕಾಳಜಿ ಇಟ್ಟುಕೊಂಡು ಈ ಕೆಲಸವನ್ನು ಬೆಂಗಳೂರು ಫೋಟೋಗ್ರಾಫರ್ಸ್ ಅಸೋಸಿಯೇಶನ್ ಪದಾಧಿಕಾರಿಗಳನ್ನು ಪ್ರಶಂಸಿಸಿದರು.

ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಅಧ್ಯಕ್ಷ ಬಿ.ಎನ್ ಮೋಹನ್ ಕುಮಾರ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಅಗರವಾಲ್ ಸಮಾಜ ಹೆಚ್ಚು ಹೆಚ್ಚು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ. ನಮ್ಮ ಸಂಘದ ಜೊತೆ ಕೈಜೋಡಿಸಿ ಮಂಗಳಮುಖಿಯರಿಗೆ ಪಡಿತರ ಕಿಟ್ ನೀಡುತ್ತಿರುವುದು ಅಗರವಾಲ್ ಸಮಾಜದ ದೊಡ್ಡಗುಣವೆಂದು ಶ್ಲಾಘಿಸಿದರು.

Covid-19 Lockdown: Agrawal Samaj Karnataka Distributed Ration Kits To Transgenders In Bengaluru

Recommended Video

ಯಡಿಯೂರಪ್ಪ ಚಾಣಾಕ್ಷ ನಡೆಗೆ ಬಿಲ ಸೇರಿಕೊಂಡ BJP ಅತೃಪ್ತರು | Oneindia Kannada

ಅಗರವಾಲ್ ಸಮಾಜ (ಕರ್ನಾಟಕ) ಕಾರ್ಯದರ್ಶಿ ವಿಜಯ್ ಸರಫ್, ಜಂಟಿ ಕಾರ್ಯದರ್ಶಿ ಸಂಜಯ್ ಮೊಹತ್, ಫೋಟೋ ಜರ್ನಲಿಸ್ಟ್ ಅಸೋಸಿಯೇಷಯನ್ ಉಪಾಧ್ಯಕ್ಷ ಶೈಲೆಂದ್ರ ಭೋಜಕ್, ಕಾರ್ಯದರ್ಶಿ ಗಣೇಶ್ ಕೆ.ಎಸ್, ಹಿರಿಯ ಫೋಟೋಗ್ರಾಫರ್ ಕೆ.ವೆಂಕಟೇಶ್ ಉಪಸ್ಥಿತರಿದ್ದರು.

English summary
Agrawal Samaj Karnataka President Sanjay Garg, President of Agarawal Society (Karnataka), distributed the groceries and medical kits to more than 150 Transgenders at the Bengaluru Press Club premises.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X