ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿ; ಮಹಾನಗರಗಳಲ್ಲಿ ಬೆಂಗಳೂರು ಸುರಕ್ಷಿತ!

|
Google Oneindia Kannada News

ಬೆಂಗಳೂರು, ಜುಲೈ 06 : "ನಾಳೆಯಿಂದ ಹೋಟೆಲ್ ಬಂದ್ ಸರ್, ಸುಮಾರು 1 ತಿಂಗಳು ಇರೋಲ್ಲ. ಹುಡುಗರು ಬೆಂಗಳೂರು ಬಿಟ್ ಹೋಗ್ತಿವಿ ಅಂತಿದಾರೆ. ಕೆಲಸಕ್ಕೆ ಜನ ಇಲ್ಲ. ನಾನು ಬೀಗ ಹಾಕಿ ಊರಿಗೆ ಹೊರಟೆ" ಸೋಮವಾರ ಬೆಳಗ್ಗೆ ಬೆಂಗಳೂರು ದಕ್ಷಿಣ ಭಾಗದ ಹೋಟೆಲ್‌ವೊಂದರ ಮಾಲೀಕರು ಹೇಳಿದ ಮಾತಿದು.

Recommended Video

Kushal Mendis arrested ಶ್ರೀಲಂಕಾ ಕ್ರಿಕೆಟಿಗರ್ ಕುಸಾಲ್ ಮೆಂಡಿಸ್ ಅರೆಸ್ಟ್ | Oneindia Kannada

"ನಾಗರಾಜ ಮನೆಗೆ ಬಂದು ಮೂರು ದಿನ ಆಯ್ತು ಬೆಂಗಳೂರಲ್ಲಿ ಕೊರೊನಾ ಹೆಚ್ಚಂತಲ್ಲ. ಅವನು ವಾಪಸ್ ಹೋಗಲ್ಲಂತೆ ಇಲ್ಲೇ ಏನಾದರೂ ಮಾಡ್ತಿನಿ ಅಂತಾನೆ" ತೀರ್ಥಹಳ್ಳಿಯಿಂದ ಫೋನ್ ಮಾಡಿದ್ದ ನಾರಾಯಣಪ್ಪ ಹೇಳಿದ್ದಿಷ್ಟು.

ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ ಬೆಂಗಳೂರು; ರಾತ್ರಿ 8ರ ಬಳಿಕ ಬಿಎಂಟಿಸಿ ಬಸ್ ಸಂಚಾರ ಸ್ಥಗಿತ

ಹೌದು, ಕಳೆದ ಒಂದು ವಾರದಿಂದ ಬೆಂಗಳೂರು ನಗರ ತೊರೆದು ಹೋಗುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಬೇರೆ ರಾಜ್ಯಗಳ ವಲಸೆ ಕಾರ್ಮಿಕರು ನಗರ ಬಿಟ್ಟು ಹೋಗಿದ್ದರು. ಈಗ ನಮ್ಮ ರಾಜ್ಯದ ಬೇರೆ-ಬೇರೆ ಜಿಲ್ಲೆಗಳ ಜನರು ಬೆಂಗಳೂರು ಬಿಟ್ಟು ಊರಿನತ್ತ ಮುಖ ಮಾಡಿದ್ದಾರೆ.

ಬೆಂಗಳೂರಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 1,514ಕ್ಕೇ ಏರಿಕೆ ಬೆಂಗಳೂರಲ್ಲಿ ಕಂಟೈನ್ಮೆಂಟ್ ಝೋನ್ ಸಂಖ್ಯೆ 1,514ಕ್ಕೇ ಏರಿಕೆ

Corona Outbreak Bengaluru Safe City For People

ಬೆಂಗಳೂರು ನಗರದ ಹೊರ ವಲಯದ ಟೋಲ್‌ ಗೇಟ್‌ಗಳಲ್ಲಿ ಮನೆಯ ಸಾಮಾನುಗಳನ್ನು ಹೇರಿಕೊಂಡು ಹೊರಟಿರುವ ಹಲವು ವಾಹನಗಳು ಕಾಣ ಸಿಗುತ್ತವೆ. ಯಾರಾನ್ನಾದರೂ ಕೇಳಿದರೆ ಒಂದೇ ಮಾತು ಬೆಂಗಳೂರು ಬೇಡ ಊರಿಗೆ ಹೋಗುತ್ತಿದ್ದೇವೆ.

ರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತರಸ್ತೆಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಕ್ಷಮೆ ಕೇಳಿದ ಬಿಬಿಎಂಪಿ ಆಯುಕ್ತ

ಲಕ್ಷಾಂತರ ಜನರಿಗೆ ಕೆಲಸ ನೀಡಿದ, ಬದುಕು ಕಟ್ಟಿಕೊಳ್ಳಲು ನೆರವಾದ ಬೆಂಗಳೂರು ಈಗ ಯಾರಿಗೂ ಬೇಡ. ಕೊರೊನಾ ವೈರಸ್ ಸೋಂಕು ಜಗತ್ತಿನಾದ್ಯಂತ ತಲ್ಲಣ ಸೃಷ್ಟಿ ಮಾಡಿದೆ. ಬೆಂಗಳೂರು ನಗರದಲ್ಲಿ ಕಳೆದ 1ವಾರದಿಂದ ದಿನಕ್ಕೆ 500ಕ್ಕೂ ಅಧಿಕ ಪ್ರಕರಣ ದಾಖಲಾಗುತ್ತಿದೆ. ಭಾನುವಾರ ಪತ್ತೆಯಾದ ಪ್ರಕರಣಗಳ ಸಂಖ್ಯೆ 1235.

Corona Outbreak Bengaluru Safe City For People

ಬೆಂಗಳೂರು ಬಿಟ್ಟು ತಮ್ಮ ಹಳ್ಳಿಗೆ ವಾಪಸ್ ಆದರೆ ಕೊರೊನಾ ವರೈಸ್ ಸೋಂಕು ಕಡಿಮೆಯಾಗುತ್ತದೆಯೇ?. ಲಾಕ್ ಡೌನ್ ಬಳಿಕ ಬೆಂಗಳೂರು ನಗರದಲ್ಲಿ ಜನರು ಕೊರೊನಾ ಭೀತಿಯ ನಡುವೆಯೇ ಬದುಕು ಕಟ್ಟಿಕೊಳ್ಳುತ್ತಿಲ್ಲವೇ?, ದಿನದ ಹೊತ್ತಿನ ಊಟಕ್ಕಾಗಿ ಈ ಕ್ಷಣದಲ್ಲಿಯೂ ಜನರು ಬೆವರು ಹರಿಸುತ್ತಿಲ್ಲವೇ?.

ದೇಶದ ಮಹಾನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ನಗರ ಈಗಲೂ ಸುರಕ್ಷಿತ. ಮುಂಬೈ (84,524), ಚೆನ್ನೈ (68,254), ಪುಣೆ (28,142), ಹೈದರಾಬಾದ್ (18,927) ನಗರಗಳಲ್ಲಿನ ಪ್ರಕರಣಗಳ ಸಂಖ್ಯೆಯನ್ನು ಒಮ್ಮೆ ನೋಡಬೇಕು.

ಭಾರತದ ವಿವಿಧ ರಾಜ್ಯಗಳ ಟಾಪ್ 10 ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು (9,580) ಮತ್ತು ಕೋಲ್ಕತ್ತಾ (7108) ಎರಡು ಸುರಕ್ಷಿತ ನಗರಗಳು. ಭಾನುವಾರದ ಲಾಕ್ ಡೌನ್, ರಾತ್ರಿ 8ಗಂಟೆ ಬಳಿಕ ಕರ್ಫ್ಯೂ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಬೆಂಗಳೂರು ನಗರದಲ್ಲಿಯೂ ಸೋಂಕು ಹರಡದಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಭಾರತ ಮಾತ್ರವಲ್ಲ ವಿದೇಶಗಳಲ್ಲಿಯೂ ಸಹ ಬೆಂಗಳೂರಿನಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಲಿದೆ ಎಂಬುದು ಗೊತ್ತಿದೆ. ಕೊರೊನಾ ನಿರ್ವಹಣೆ ವಿಚಾರದಲ್ಲಿ ನಗರ ಸ್ವಲ್ಪ ಹಿಂದುಳಿದೆ ಎಂದು ಅನ್ನಿಸಿದರೂ ನಗರ ಇಂದಿಗೂ ಸಹ ಸುರಕ್ಷಿತವಾಗಿದೆ.

ಬೆಂಗಳೂರು ಏಕೆ ಬೇಡ? : ಬೆಂಗಳೂರನ್ನು ಜನರು ಬಿಟ್ಟು ಹೋಗುತ್ತಿರುವುದು ಏಕೆ?, ಕೊರೊನಾ ವೈರಸ್ ಸೋಂಕಿನ ಭಯಕ್ಕೋ? ಅಥವ ಆಗಿರುವ ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೋ?. ಬೆಂಗಳೂರಿಗರೇ ಎಚ್ಚರ, ನಗರದಲ್ಲಿ ಕೊರೊನಾ ಸುನಾಮಿ, ನಗರದಲ್ಲಿ ಮರಣ ಮೃದಂಗ ಎಂಬ ಮಾಧ್ಯಮಗಳ ವರ್ಣರಂಜಿತ ವರದಿಗಳು ಹಳ್ಳಿಗಳಲ್ಲಿ ಭಯ ಹುಟ್ಟಿಸಿವೆ?.

ನಗರದಲ್ಲಿ ಉದ್ಯೋಗದಲ್ಲಿರುವ ಮಗ/ಮಗಳು ಮನೆಗೆ ಫೋನ್ ಮಾಡಿದರೆ ಮನೆಗೆ ವಾಪಸ್ ಬರ್ತಿಯಾ? ಎಂಬ ಪ್ರಶ್ನೆ ಸಹಜವಾಗಿ ಕೇಳಿ ಬರುತ್ತಿದೆ. ಲಾಕ್ ಡೌನ್ ಬಳಿಕ ಹಲವಾರು ಜನರು ಉದ್ಯಮ ಚೇತರಿಸಿಕೊಳ್ಳದೇ ಊರಿನ ದಾರಿ ಹಿಡಿದಿದ್ದಾರೆ. ಮತ್ತೆ ವಾಪಸ್ ಬರುವುದಿಲ್ಲ ಎಂದು ಹೇಳಿಯೇ ಹೋಗುತ್ತಿದ್ದಾರೆ.

ಬೆಂಗಳೂರು ನಗರದಿಂದ ವಲಸೆ ಹೋಗಲು ಆತಂಕ ಹುಟ್ಟಿಸಿರುವ ಅಂಶಗಳೇನು?, ಸರಿ ಬೆಂಗಳೂರು ಬಿಟ್ಟು ಊರು ಸೇರಿದರೆ ಮಾತ್ರ ಕೊರೊನಾದಿಂದ ತಪ್ಪಿಸಿಕೊಳ್ಳಬಹುದೇ?. ಬೆಂಗಳೂರು ನಗರದಲ್ಲಿದ್ದು ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಾಧ್ಯವಿಲ್ಲವೇ?.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಹಲವು ಸಚಿವರು ಈಗಾಗಲೇ ಜನರಿಗೆ ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಜನರ ವಲಸೆ ಮಾತ್ರ ಕಡಿಮೆಯಾಗುತ್ತಿಲ್ಲ.

English summary
Bengaluru city recorded total 9580 Coronavirus cases. Compare to other city's of various states Bengaluru safe for people in the time of Corona outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X