ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19 ಲಾಕ್ ಡೌನ್: ಅಪರಾಧ ಕೃತ್ಯಗಳಿಗೆ ರಜೆ ಘೋಷಣೆ ಮಾಡಿದ ಕ್ರಿಮಿನಲ್‌ಗಳು!

|
Google Oneindia Kannada News

ಬೆಂಗಳೂರು, ಜೂ. 08: ಕೋವಿಡ್ 19 ಲಾಕ್ ಡೌನ್ ಜಾರಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕಳ್ಳರು, ದರೋಡೆಕೋರರು ಕೂಡ ತಮ್ಮ ಕೆಲಸಗಳಿಗೆ ರಜೆ ಘೋಷಣೆ ಮಾಡಿಕೊಂಡಿದ್ದಾರೆ! ಹೌದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿವೆ. ತಿಂಗಳಿಗೆ ಸುಮಾರು ಆರು ಸಾವಿರ ಅಪರಾಧ ಪ್ರಕರಣ ದಾಖಲಾಗುತ್ತಿದ್ದ ಬೆಂಗಳೂರಿನಲ್ಲಿ ಇದೀಗ ಎರಡು ಪಟ್ಟು ಅಪರಾಧ ಪ್ರಕರಣ ಕಡಿಮೆಯಗಿವೆ. ಮೇ ತಿಂಗಳಲ್ಲಿ ಕೇವಲ 1966 ಅಪರಾಧ ಪ್ರಕರಣ ದಾಖಲಾಗಿವೆ.

ಕಳೆದ ಒಂದು ತಿಂಗಳಿನಿಂದ ಬೆಂಗಳೂರಿನಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ. ಪೊಲೀಸರು ಬಂದೋ ಬಸ್ತ್ ನಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಳ್ಳರು, ದರೋಡೆಕೋರರು ಕೊರೊನಾ ಭಯಕ್ಕೆ ಹೊರಗೆ ಬಂದಂತೆ ಕಾಣುತ್ತಿಲ್ಲ. ಬೆಂಗಳೂರಿನಲ್ಲಿ ಮಾಸಿಕ ಸರಾಸರಿ 6 ರಿಂದ 8 ಸಾವಿರ ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದವು.

Covid 19 lock down: Crime cases in Bengaluru have declined significantly


ಕಳೆದ ಜನವರಿಯಲ್ಲಿ 6526 ಪ್ರಕರಣ ವರದಿಯಾಗಿದ್ದವು. ಫೆಬ್ರವರಿ ತಿಂಗಳಲ್ಲಿ ಕೂಡ 5642 ಪ್ರಕರಣ ದಾಖಲಾಗಿದ್ದವು. ಪೂರ್ಣ ಲಾಕ್ ಡೌನ್ ನಿಯಮ ಜಾರಿಯಲ್ಲಿರುವ ಮೇ. ತಿಂಗಳಲ್ಲಿ ಬೆಂಗಳೂರಿನಲ್ಲಿ ಕೇವಲ 1966 ಅಪರಾಧ ಪ್ರಕರಣ ದಾಖಲಾಗಿವೆ.

ಅದರಲ್ಲಿ ಬಹುತೇಕ ಪ್ರಕರಣಗಳು ಆನ್‌ಲೈನ್ ವಂಚನೆಗೆ ಸಂಬಂಧ ಪಟ್ಟವು. ಉಳಿದಂತೆ, ಕಳ್ಳತನ, ಸುಲಿಗೆ, ದರೋಡೆ ಪ್ರಕರಣಗಳು ಗಣನೀಯವಾಗಿ ಇಳಿಕೆ ಕಂಡಿರುವುದು ಪೊಲೀಸ್ ಇಲಾಖೆಯ ದಾಖಲೆಗಳಲ್ಲಿ ಬಹಿರಂಗವಾಗಿದೆ.

  • ಜನವರಿಯಲ್ಲಿ ದಾಖಲಾದ ಕೇಸ್ 6526
  • ಫೆಬ್ರವರಿ ತಿಂಗಳಲ್ಲಿ ದಾಖಲಾಗಿದ್ದ ಪ್ರಕರಣ 5642
  • ಮಾರ್ಚ್ ತಿಂಗಳಲ್ಲಿ ದಾಖಲಾದ ಕೇಸ್ ಕೇವಲ 3358
  • ಏಪ್ರಿಲ್ ತಿಂಗಳಲ್ಲಿ ದಾಖಲಾದ ಕೇಸ್ 2028
  • ಮೇ ತಿಂಗಳಲ್ಲಿ ದಾಖಲಾದ ಪ್ರಕರಣ 1966

English summary
Covid 19 lock down: Crime cases in Bengaluru have declined significantly due of covid 19 lockdown effect know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X