ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊವಿಡ್ ರೋಗಿಗಳ ದಾಖಲಾತಿಯಲ್ಲಿ ಶೇ.40ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ದಾಖಲಾತಿಯಲ್ಲಿ ಶೇ.40 ರಷ್ಟು ಕುಸಿತ ಕಂಡಿದೆ.

ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದಂತೆ ಯಾವ ಆಸ್ಪತ್ರೆಯಲ್ಲಿ ಕೇಳಿದರೂ ಹಾಸಿಗೆ ಖಾಲಿ ಇಲ್ಲ ಎಂಬ ಮಾತೇ ಕೇಳಿಬರುತ್ತಿತ್ತು. ಆದರೆ ಇದೀಗ ಕೊರೊನಾ ಸೋಂಕಿತರ ದಾಖಲಾತಿಯಲ್ಲಿ ಶೇ.40 ಕುಸಿತ ಕಂಡಿದೆ ಎನ್ನುವುದು ಸಂತಸದ ವಿಚಾರವಾಗಿದೆ.

ಪ್ಲಾಸ್ಮಾ ಚಿಕಿತ್ಸೆ ವಿಫಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರಪ್ಲಾಸ್ಮಾ ಚಿಕಿತ್ಸೆ ವಿಫಲ: ಕೋವಿಡ್ ಮಾರ್ಗಸೂಚಿಯಿಂದ ಕೈಬಿಡಲು ನಿರ್ಧಾರ

ಅಕ್ಟೋಬರ್ 13ರಿಂದ ಕೊವಿಡ್ ಚಿಕಿತ್ಸೆಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣದಲ್ಲಿ ಶೇ.40ರಷ್ಟು ಕುಸಿತ ಕಂಡುಬಂದಿದೆ.

ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಪ್ರಮಾಣ ತಗ್ಗಿದೆ. ಇದು ಉತ್ತಮ ಸಂಗತಿಯಾಗಿದ್ದು, ವೈದ್ಯರ ಮೇಲಿನ ಒತ್ತಡ ಕೊಂಚ ತಗ್ಗಿದಂತಾಗಿದೆ.

ಹಗಲು-ರಾತ್ರಿ ಕಷ್ಟ ಪಡುತ್ತಿರುವ ವೈದ್ಯರು

ಹಗಲು-ರಾತ್ರಿ ಕಷ್ಟ ಪಡುತ್ತಿರುವ ವೈದ್ಯರು

ಕೋವಿಡ್ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಸಿಬ್ಬಂದಿಗಳು ಪರಿಸ್ಥಿತಿ ನಿಯಂತ್ರಣಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಇದರಿಂದ ನಮ್ಮ ಮೇಲೆ ಸಾಕಷ್ಟು ಒತ್ತಡವಿತ್ತು. ಆದರೀಗ ಸೋಂಕಿನ ಲಕ್ಷಣಗಳು ಕಡಿಮೆ ಇರುವ ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯಲು ಬಯಸುತ್ತಿದ್ದಾರೆ.

ಎಲ್ಲಾ ಆಸ್ಪತ್ರೆಗಳಲ್ಲೂ ರೋಗಿಗಳ ಪ್ರಮಾಣ ಕುಸಿದಿದೆ

ಎಲ್ಲಾ ಆಸ್ಪತ್ರೆಗಳಲ್ಲೂ ರೋಗಿಗಳ ಪ್ರಮಾಣ ಕುಸಿದಿದೆ

ಕೇವಲ ವಿಕ್ಟೋರಿಯಾ ಮಾತ್ರವಲ್ಲದೇ ಕೋವಿಡ್ ಚಿಕಿತ್ಸೆಗಾಗಿ ಮೀಸಲಿರಿಸಲಾಗಿರುವ ಲೇಡಿ ಕರ್ಜನ್ ಮತ್ತು ಬೌರಿಂಗ್ ಆಸ್ಪತ್ರೆಗಳಲ್ಲಿಯೂ ಸೋಂಕಿತರ ದಾಖಲಾತಿ ಪ್ರಮಾಣ ಶೇ.40 ರಿಂದ 50ರಷ್ಟು ಕುಸಿದಿದೆ. ಈ ಬಗ್ಗೆ ಸ್ವತಃ ಆಸ್ಪತ್ರೆಯ ನಿರ್ದೇಶಕ ಮನೋಜ್ ಕುಮಾರ್ ಅವರು, ಕಳೆದ ಮಂಗಳವಾರ ಆಸ್ಪತ್ರೆಯ ಎಲ್ಲ ಬೆಡ್ ಗಳು ಭರ್ತಿಯಾಗಿದ್ದವು. ಆದರೆ ಇಂದು ಆಸ್ಪತ್ರೆಯಲ್ಲಿ 30 ಬೆಡ್ ಗಳು ಖಾಲಿಯಾಗಿವೆ. ಅಂತೆಯೇ ಚರಕ ಆಸ್ಪತ್ರೆಯಲ್ಲೂ 35 ಬೆಡ್ ಗಳು ಖಾಲಿ ಇವೆ ಎಂದು ಹೇಳಿದ್ದಾರೆ.

ಒಂದು ವಾರದಲ್ಲಿ ಇಳಿಕೆಯಾದ ಪ್ರಕರಣಗಳು

ಒಂದು ವಾರದಲ್ಲಿ ಇಳಿಕೆಯಾದ ಪ್ರಕರಣಗಳು

ಕಳೆದೊಂದು ವಾರದಲ್ಲಿ, ಆಸ್ಪತ್ರೆಗೆ ದಾಖಲಾಗು ಸೋಂಕಿತರ ಪ್ರಮಾಣದಲ್ಲಿ ಶೇ.40ರಷ್ಟು ಕುಸಿತ ಕಂಡುಬಂದಿದೆ. ಆದರೆ ಹಬ್ಬದ ಸೀಸನ್ ಆರಂಭವಾಗುತ್ತಿದ್ದು, ಈ ವೇಳೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ ಇದು ಆಗಬಾರದು ಎಂದು ಪ್ರಾರ್ಥಿಸುತ್ತಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

Recommended Video

ಮೋದಿ ಕೊಟ್ರು ವಿಶೇಷ ಸಲಹೆ | Oneindia Kannada
ಗಂಭೀರ ಸ್ಥಿತಿಯಲ್ಲಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲು

ಗಂಭೀರ ಸ್ಥಿತಿಯಲ್ಲಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲು

ಕೇವಲ ಗಂಭೀರ ಪರಿಸ್ಥಿತಿಯಲ್ಲಿ ಮಾತ್ರ ಸೋಂಕಿತರು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಇದು ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ ಎಂದು ಹೇಳಿದರು.

English summary
Since October 13, doctors working in designated Covid-19 hospitals in Bengaluru have been letting out a small sigh of relief every day, looking at the dip in the number of patients coming for admission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X