ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

500 ಕೋಟಿ ಅಕ್ರಮದ ಆರೋಪಕ್ಕೆ ಸಚಿವರ ಉತ್ತರ ಏನು?

|
Google Oneindia Kannada News

ಬೆಂಗಳೂರು, ಜುಲೈ.24: ನೊವೆಲ್ ಕೊರೊನಾವೈರಸ್ ನಿರ್ವಹಣೆಗಾಗಿ ಉಪಕರಣ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಪಕ್ಷ ಕಾಂಗ್ರೆಸ್ ಗೆ ಉತ್ತರ ನೀಡಿದ್ದಾರೆ.

Recommended Video

The Indian Premier League (IPL) 2020 is all set to kick-off | Oneindia Kannada

ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಆರಂಭಿಸಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕೊವಿಡ್ ಉಪಕರಣಗಳ ಖರೀದಿಯಲ್ಲೂ ಸರ್ಕಾರವು ಜೇಬು ತುಂಬಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಉಭಯ ನಾಯಕರು ಕಿಡಿ ಕಾರಿದ್ದರು.

ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?ಬಿಜೆಪಿ ಸರ್ಕಾರದಿಂದ ಭ್ರಷ್ಟಾಚಾರ: ಹೇಗಿದೆ ಸಿದ್ದರಾಮಯ್ಯ ಲೆಕ್ಕಾಚಾರ?

ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಯಾವುದೇ ರೀತಿ ಉಪಕರಣಗಳನ್ನು ಖರೀದಿ ಮಾಡಿಲ್ಲ ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯನವರು ಮಾಡಿದ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಪರಿಕರ ಖರೀದಿಸಿಲ್ಲ

ಸಮಾಜ ಕಲ್ಯಾಣ ಇಲಾಖೆ ಪರಿಕರ ಖರೀದಿಸಿಲ್ಲ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದಂತೆ ಸಮಾಜ ಕಲ್ಯಾಣ ಇಲಾಖೆಯು ಕೊವಿಡ್ ಪರಿಕರ ಖರೀದಿಗಾಗಿ 500 ಕೋಟಿ ರೂಪಾಯಿ ಖರ್ಚು ಮಾಡಿಲ್ಲ. ಇಲಾಖೆಯ ವತಿಯಿಂದ ಯಾವುದೇ ರೀತಿ ಪರಿಕರಗಳನ್ನು ಖರೀದಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲಾಧಿಕಾರಿಗಳಿಂದ ಕೊವಿಡ್-19 ಪರಿಕರ ಖರೀದಿ

ಜಿಲ್ಲಾಧಿಕಾರಿಗಳಿಂದ ಕೊವಿಡ್-19 ಪರಿಕರ ಖರೀದಿ

ರಾಜ್ಯದಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳಿಗೆ ಅಗತ್ಯ ಪರಿಕರಗಳನ್ನು ಖರೀದಿಸುವಂತೆ ಇಲಾಖೆಯು ಸೂಚನೆ ನೀಡಿತ್ತು. ಅದರಂತೆ ಜಿಲ್ಲಾಡಳಿತವೇ ಉಪಕರಣಗಳನ್ನು ಖರೀದಿಸಿದೆ. ಅದಕ್ಕಾಗಿ 30 ಜಿಲ್ಲೆಗಳಿಗೆ 124 ಲಕ್ಷ ರೂಪಾಯಿ ಹಣವನ್ನು ಮಾತ್ರ ನೀಡಿದ್ದೇವೆ.

55,000 ರೂ. ಮೌಲ್ಯದಲ್ಲಿ ಸ್ಯಾನಿಟೈಸರ್ ಖರೀದಿ

55,000 ರೂ. ಮೌಲ್ಯದಲ್ಲಿ ಸ್ಯಾನಿಟೈಸರ್ ಖರೀದಿ

ರಾಜ್ಯಾದ್ಯಂತ ಸ್ಯಾನಿಟೈಸರ್ ಖರೀದಿಸಲು ಕೇವಲ 55 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ. ಕಾಂಗ್ರೆಸ್ ಆರೋಪಿಸಿದಂತೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಿಲ್ಲ ಎಂದು ಗೋವಿಂದ್ ಕಾರಜೋಳ ತಿಳಿಸಿದ್ದಾರೆ. ಈ ಹಿಂದೆ ಸ್ಯಾನಿಟೈಸರ್ ಖರೀದಿಯಲ್ಲಿ ಸರ್ಕಾರವು ಭಾರಿ ಅವ್ಯವಹಾರ ನಡೆಸಿರುವ ಬಗ್ಗೆ ಕಾಂಗ್ರೆಸ್ ಆರೋಪಿಸಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 500ಎಂಎಲ್ ಸ್ಯಾನಿಟೈಸರ್ ಬೆಲೆ 80 ರಿಂದ 1000 ರೂಪಾಯಿ ಆಗಿರುತ್ತದೆ. ಸರ್ಕಾರವು 250 ರೂಪಾಯಿ ನೀಡಿ 500ಎಂಎಲ್ ಸ್ಯಾನಿಟೈಸರ್ ಖರೀದಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಂತೂ 500 ಎಂಎಲ್ ಸ್ಯಾನಿಟೈಸರ್ ಗೆ ಬರೋಬ್ಬರಿ 600 ರೂಪಾಯಿ ಪಾವತಿಸಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಾಸ್ಕ್, ಥರ್ಮಲ್ ಸ್ಕ್ಯಾನರ್ ಖರೀದಿಯಲ್ಲಿ ಅಕ್ರಮ ಆರೋಪ

ಮಾಸ್ಕ್, ಥರ್ಮಲ್ ಸ್ಕ್ಯಾನರ್ ಖರೀದಿಯಲ್ಲಿ ಅಕ್ರಮ ಆರೋಪ

ಕೊರೊನಾ ವಾರಿಯರ್ಸ್ ಗಾಗಿ ಖರೀದಿಸಿದ ಮಾಸ್ಕ್ ಗಳಿಗೆ ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 50 ರಿಂದ 60 ರೂಪಾಯಿದೆ. ಆದರೆ ಅದೇ ಮಾಸ್ಕ್ ಗಳಿಗೆ ಸರ್ಕಾರವು 126 ರಿಂದ 150 ರೂಪಾಯಿವರೆಗೂ ಹಣ ಪಾವತಿ ಮಾಡಿದೆ. ಇನ್ನು, 2 ರಿಂದ 3 ಸಾವಿರ ರೂಪಾಯಿ ಥರ್ಮಲ್ ಸ್ಕ್ಯಾನರ್ ಗೆ ರಾಜ್ಯ ಸರ್ಕಾರ 5945 ರೂಪಾಯಿ ಪಾವತಿ ಮಾಡಿದೆ. ಅದೇ ಥರ್ಮಲ್ ಸ್ಕ್ಯಾನರ್ ಗಳಿಗೆ ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂಪಾಯಿ ನೀಡಿ ಖರೀದಿಸಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸುತ್ತಿದೆ ಎಂದು ಕಾಂಗ್ರೆಸ್ ದೂಷಿಸಿತ್ತು.

English summary
Covid-19 Equipment Scam: Dcm Govind Karajola Reacted To Congress Allegation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X