ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆಯಿಂದ ಮನೆ ಕಟ್ಟಡ ದುರಸ್ತಿ, ಪಿಡಿಲೈಟ್ ನಿಂದ ತರಬೇತಿ

|
Google Oneindia Kannada News

ಬೆಂಗಳೂರು, ಜೂನ್ 14: ಕೋವಿಡ್-19 ಪಿಡುಗಿನ ಪರಿಸ್ಥಿತಿಯನ್ನು ಎದುರಿಸಲು ಜಾರಿಗೊಳಿಸಿರುವ ಲಾಕ್‍ಡೌನ್ ಅವಧಿಯಲ್ಲಿ ದೇಶವನ್ನು ಮುಂಗಾರು ಪ್ರವೇಶಿಸುತ್ತಿದೆ. ಮಳೆಯಿಂದ ಮನೆ, ಕಟ್ಟಡದಲ್ಲಿ ಸೋರಿಕೆ ಸಮಸ್ಯೆ ಆತಂಕವನ್ನು ಮೂಡಿಸುತ್ತಿದೆ. ಇದನ್ನು ತಡೆಯಲು ಮುಂಜಾಗ್ರತೆಯಾಗಿ ವಾಟರ್ ಫ್ರೂಪಿಂಗ್ ಕಾರ್ಯ ಕೈಗೊಳ್ಳುವ ಅಗತ್ಯವಿದೆ.

ಒಂದು ಅಂದಾಜಿನ ಪ್ರಕಾರ, ಶೇ 6 ರಿಂದ 8ರಷ್ಟು ಕಟ್ಟಡಗಳು, ನಿರ್ಮಾಣಗಳು ಪೂರ್ವಮುಂಗಾರಿನಲ್ಲಿ ದುರಸ್ತಿ ಕಾರ್ಯಗಳಿಗೆ ಒಳಗೊಳ್ಳುವ ಅಗತ್ಯವಿದೆ. ಈ ವಾಟರ್ ಫ್ರೂಪಿಂಗ್ ಗುತ್ತಿಗೆದಾರರು ಇಂಥ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದಾರೆ.

ವಾರಾಂತ್ಯದಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆವಾರಾಂತ್ಯದಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆ

ಆದರೆ, ಈ ವರ್ಷ ಕೊವಿಡ್ 19 ನಿಂದಾಗಿ ಗ್ರಾಹಕರು ಆರೋಗ್ಯ ಮತ್ತು ಸುರಕ್ಷತೆ ಕಾಳಜಿಗಳಿಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಕಾರ್ಮಿಕರು ದುರಸ್ತಿ ಕಾರ್ಯಗಳಿಗೆ ಅವರ ಮನೆಯನ್ನು ಪ್ರವೇಶಿಸುವ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಹಕರ ಈ ಆತಂಕವನ್ನು ದೂರಾಗದಿದ್ದಲ್ಲಿ, ಇದು ರಿಪೇರಿ, ಸೋರಿಕೆ ತಡೆ ಕಾಮಗಾರಿಗಳು ಕಡಿಮೆ ಆಗಲಿದ್ದು, ಆದಾಯದ ಮೇಲೂ ಪರಿಣಾಮ ಬೀರುವ ಸಂಭವ ಇರುತ್ತದೆ.

COVID-19: Dr. Fixit pre-monsoon waterproofing buildings training

ಈ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಪಿಡಿಲೈಟ್ ಇಂಡಸ್ಟ್ರೀಸ್ ಲಿಮಿಟೆಡ್‍ನ ನಿರ್ಮಾಣ ಕಾರ್ಯ ಮತ್ತು ವಾಟರ್ ಫ್ರೂಪಿಂಗ್ ಕ್ಷೇತ್ರದ ಪರಿಣತರಾದ ಡಾ.ಫಿಕ್ಸಿಟ್, ಈಗ ವಾಟರ್ ಫ್ರೂಫಿಂಗ್ ಕಾಮಗಾರಿಯಲ್ಲಿ ತೊಡಗಿರುವ ಸಾವಿರಾರು ಮಂದಿ ಕಾರ್ಮಿಕರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿದೆ. ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಬೆಂಗಳೂರು, ಇಂದೋರ್, ಅಹಮದಾಬಾದ್, ಸೂರತ್, ಕೋಲ್ಕತ್ತ ಮತ್ತು ನಾಗಪುರ ನಗರಗಳಲ್ಲಿ ಈ ಕಾರ್ಯಕ್ರಮ ಜಾರಿಗೊಳಿಸಿದೆ.

ಪಿಡಿಲೈಟ್ ಇಂಡಸ್ಟ್ರೀಸ್ ಲಿಮಿಟೆಡ್‍ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಕನ್ಸಸ್ಟ್ರಕ್ಷನ್ ಕೆಮಿಕಲ್ಸ್ (ರಿಟೇಲ್) ನಿಲೇಶ್ ಮಜುಂದಾರ್, ''ವಾಟರ್ ಪ್ರೂಫಿಂಗ್ ಗುತ್ತಿಗೆದಾರರು ಮುಖ್ಯರಾಗಿದ್ದು, ಅವರು ನಮ್ಮ ಕಟ್ಟಡಗಳು ಮತ್ತು ಮನೆಗಳನ್ನು ಸುರಕ್ಷಿತವಾಗಿ ಇಡಲು ನೆರವಾಗುತ್ತಾರೆ. ಈ ಕಾರ್ಯಕ್ರಮಗಳು ಅವರು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸನ್ನದ್ಧರಾಗಲುಹಾಗೂ ಗ್ರಾಹಕರಿಗೂ ಸುರಕ್ಷತೆಯ ಭರವಸೆಯನ್ನು ನೀಡಲು ಈ ಮೂಲಕ ಪರಿಣಾಮಕಾರಿಯಾಗಿ, ಗಉಣಮಟ್ಟಕ್ಕೆ ಒತ್ತು ನೀಡಲು ಒತ್ತು ನೀಡಲಿದೆ'' ಎಂದರು.

ಪಿಡಿಲೈಟ್: ಪಿಡಿಲೈಟ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಪ್ರಮುಖವಾದ, ಅಡ್ಡೆಸ್ಸಿವ್, ಸೀಲಂಟ್ಸ್, ನಿರ್ಮಾಣ ರಾಸಾಯನಿಕಗಳು, ಕರಕುಶಲ ಉತ್ಪನ್ನಗಳು, ಡಿಐವೈ (ಡೂ ಇಟ್ ಯುವರ್‍ಸೆಲ್ಫ್) ಉತ್ಪನ್ನಗಳು ಮತ್ತು ಪಾಲಿಮರ್ ಎಮುಲ್‍ಸನ್ಸ್ ಅನ್ನು ಭಾರತದಲ್ಲಿ ಉತ್ಪಾದಿಸುವ ಸಂಸ್ಥೆಯಾಗಿದೆ. ಪಿಡಿಲೈಟ್ ಬ್ರಾಂಡ್ ಫೆವಿಕಾಲ್ ಅಸಂಖ್ಯ ಭಾರತೀಯರಲ್ಲಿ ಹೆಸರುವಾಸಿಯಾಗಿದೆ. ಇತರೆ ಕೆಲವು ಪ್ರಮುಖ ಬ್ರಾಂಡ್‍ಗಳಲ್ಲಿ ಎಂ-ಸೀಲ್, ಫೆವಿಕ್ವಿಕ್, ಫೆವಿಸ್ಟಿಕ್, ರಾಫ್, ಡಾ.ಫಿಕ್ಸಿಟ್, ಫೆವಿಕ್ರೈ ಸೇರಿದೆ.

English summary
COVID-19 pandemic and monsoon precaution: Dr. Fixit, the construction and waterproofing expert from the house of Pidilite Industries Ltd, has rolled out a training program as per the guidelines of MHA and WHO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X