ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂದೋ ಮಾಡಿದ್ದ ಸೇವೆ ಸ್ಮರಿಸಿ ಇಂದು ಆಂಬ್ಯುಲೆನ್ಸ್ ಉಡುಗೊರೆ ಕೊಟ್ಟ ಮಹಾತಾಯಿ!

|
Google Oneindia Kannada News

ಬೆಂಗಳೂರು, ಜೂ. 07: ಎಷ್ಟೋ ವರ್ಷಗಳ ಹಿಂದೆ ತನ್ನ ಪತಿಯ ತಂದೆ ತೋರಿಕೊಂಡಿದ್ದರು. ಆಗ ನೂರಾರು ಮಂದಿ ಮುಂದೆ ನಿಂತು ನಮ್ಮವರಂತೆ ಸರ್ವ ಕಾರ್ಯವನ್ನು ಮಾಡಿ ಸೇವೆ ಸಲ್ಲಿಸಿದ್ದು ಬೆಂಗಳೂರಿನ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂ. ಆ ಸೇವೆಯನ್ನು ಮರೆಯದ ವಕೀಲ, ಸಮಾಜ ಸೇವಕರಾದ ದಿ. ರಾಮಚಂದ್ರ ಅವರ ಪತ್ನಿ ಸುಶೀಲಾದೇವಿ ಕೊರೊನಾ ಸೋಂಕಿತರ ಸೇವೆಗಾಗಿ ಲಕ್ಷಾಂತರ ಮೌಲ್ಯದ ಹೊಸ ಆಂಬ್ಯುಲೆನ್ಸ್ ಉಡುಗೊರೆ ನೀಡಿದ್ದಾರೆ.

ಕೆ.ಆರ್. ಪುರಂ ವೆಂಕಟೇಶ್ವರ ಚಿತ್ರಮಂದಿರ ಮಾಲೀಕರಾದ ದಿ. ರಾಮಚಂದ್ರ ಅವರು ಸಮಾಜ ಸೇವೆ ಮೂಲಕವೇ ಪರಿಚಿತರು. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ತೀರಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂಗೆ ಉಚಿತ ಆಂಬ್ಯುಲೆನ್ಸ್ ನ್ನು ಉಡುಗೊರೆ ನೀಡುವ ಮೂಲಕ ಸುಶೀಲಾದೇವಿ ರಾಮಚಂದ್ರ ಸೇವಾ ಕಾರ್ಯವನ್ನು ಮುಂದುವರೆಸಿದ್ದಾರೆ.

Covid -19 donation: Sushiladevi Ramachandra donated Ambulance to Kerala Samajam

ಫೋರ್ಸ್ ಕಂಪನಿಗೆ ಸೇರಿದ ಆಂಬ್ಯುಲೆನ್ಸ್ ಕೀಗಳನ್ನು ಶಾಸಕ ಭೈರತಿ ಬಸವರಾಜು ಅವರ ಮೂಲಕ ಕೇರಳಾ ಸಮಾಜಂಗೆ ಅರ್ಪಿಸಿದರು. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿರುವ ಸುಶೀಲಾದೇವಿ ರಾಮಚಂದ್ರ ಅವರು, ಕೆ.ಆರ್. ಪುರಂನಲ್ಲಿ ರಾಯರ ಮಠಕ್ಕೆ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಯನ್ನು ಬಿಟ್ಟುಕೊಟ್ಟಿದ್ದರು. ಅಲ್ಲಿಯ ರಾಯರ ದೇಗುಲ ಜತೆಗೆ ಗುರುಕುಲಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಇನ್ನೂ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಿ. ರಾಮಚಂದ್ರ ಅಪಾರ ಕೊಡುಗೆ ನೀಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.

Covid -19 donation: Sushiladevi Ramachandra donated Ambulance to Kerala Samajam

Recommended Video

ಸೇನೆಯಿಂದ ಗೋಲ್ಡ್ ಮೆಡಲ್ ಪಡೆದ ಪ್ರಪಂಚದ ಏಕೈಕ ಇಲ್ಲಿ ಮಗಾವ | Oneindia Kannada

ಬದುಕು ಯಾರಿಗೂ ಶಾಶ್ವತವಲ್ಲ. ಜೀವಗಳು ಅಮೂಲ್ಯ. ಹೀಗಾಗಿ ಕೊರೊನಾ ಸೋಂಕಿನಿಂದ ಆಂಬ್ಯುಲೆನ್ಸ್ ಸಿಗದೇ ಎಷ್ಟೊ ಮಂದಿ ಪರದಾಡಿದ್ದು ನೋಡಿದರೆ ಕಣ್ಣೀರು ಬರುತ್ತದೆ. ದೇವರು ಕೊಟ್ಟಿರುವ ಶಕ್ತಿಯಲ್ಲಿ ಸಮಾಜಕ್ಕೆ ಏನಾದರೂ ಮಾಡುತ್ತಿರಬೇಕು ಎಂಬ ಮಾತಲ್ಲಿ ನಂಬಿಕೆ ಇಟ್ಟು ನನ್ನ ಪತ್ನಿ ಜೀವನ ಪರ್ಯಂತ ಸಮಾಜಕ್ಕೆ ಏನಾದರೂ ಕೊಡುತ್ತಿದ್ದರು. ಅದನ್ನೇ ನಂಬಿದ ನಾನು ಕೂಡ ದೂರವಾಣಿ ನಗರದಲ್ಲಿರುವ ಕೇರಳಾ ಸಮಾಜಂಗೆ ಆಂಬ್ಯುಲೆನ್ಸ್ ನೀಡಿದ್ದೇನೆ. ಇದರಿಂದ ನಾಲ್ಕು ಮಂದಿಗೆ ಸಹಾಯ ಆದರೆ ಸಾಕು ಅದರಿಂದ ಸಿಗುವ ಸಂತೋಷವೇ ನನಗೆ ಶ್ರೇಷ್ಠ. ಏನೋ ನಿರೀಕ್ಷೆ ಇಟ್ಟುಕೊಂಡು ಯಾವತ್ತು ಸೇವೆ ಮಾಡಬಾರದು. ಕಳೆದ 25 ವರ್ಷದಿಂದ ಕೇರಳಾ ಸಮಾಜಂ ಮಾಡುತ್ತಿರುವ ಸೇವೆ ನೋಡುತ್ತಿದ್ದೇನೆ. ಯಾರಿಗೆ ತೊಂದರೆ ಆದರೂ ತಮ್ಮ ಮನೆಯವರಂತೆ ಹಾರೈಕೆ ಮಾಡುತ್ತಾರೆ. ಆ ಸಮಾಜದಲ್ಲಿ ಎರಡು ಸಾವಿರ ಮಂದಿ ನೋಂದಣಿ ಮಾಡಿದ್ದಾರೆ. ಹೀಗಾಗಿ ಬಡವರ ಸೇವೆ ಮಾಡುವ ಜವಾಬ್ಧಾರಿ ನೀಡಿ ಆಂಬ್ಯೂಲೆನ್ಸ್ ನ್ನು ದಿವಂಗತ ರಾಮಚಂದ್ರ ಅವರ ಸ್ಮರಣಾರ್ಥ ಕೇರಳಾ ಸಮಾಜಂಗೆ ನೀಡಿದ್ದೇನೆ ಎಂದರು.

English summary
Covid 19 donation: Social worker Sushiladevi Ramachandra donated a new ambulance to the Kerala Samajam in Dooravani Nagara
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X