ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲೇ ದಿನಕ್ಕೆ 30ಕ್ಕೂ ಹೆಚ್ಚು ಸೋಂಕಿತರ ಸಾವು!

|
Google Oneindia Kannada News

ಬೆಂಗಳೂರು, ಮೇ. 01: ರಾಜ್ಯಕ್ಕೆ ಹೋಲಿಸಿದರೆ ರಾಜಧಾನಿ ಬೆಂಗಳೂರು ಕೊರೊನಾ ಸಾವುಗಳ ಸ್ಮಶಾನವಾಗಿ ಮಾರ್ಪಟ್ಟಿದೆ. ಸಾಲುಗಟ್ಟಿ ಸಾಮೂಹಿಕ ಚಿತೆಯಲ್ಲಿ ಬೆಂಕಿ ಇಟ್ಟು ಸುಡಲಾಗುತ್ತಿದೆ. ಸ್ಮಶಾನಗಳಲ್ಲಿ ಉರಿಯುತ್ತಿರುವ ಚಿತೆಗಳಿಗೂ ಸರ್ಕಾರದ ಸಾವಿನ ಲೆಕ್ಕಕ್ಕೂ ಭಾರೀ ವ್ಯತ್ಯಾಸ ಕಾಣುತ್ತಿದೆ. ಇದರ ನಡುವೆ ಬೆಂಗಳೂರಿನ ಬಹುದೊಡ್ಡ ಕೊರೊನಾ ಚಿಕಿತ್ಸಾ ಕೇಂದ್ರ ವಿಕ್ಟೋರಿಯಾ ಆಸ್ಪತ್ರೆಯ ಸಾವಿನ ಅಂಕಿ ಅಂಶಗಳು ಗಮನಿಸಿದಾಗ ಇಡೀ ಕೋವಿಡ್ ಸಾವಿನ ಬಗ್ಗೆ ದೊಡ್ಡ ಸಂಶಯ ಹುಟ್ಟುಹಾಕಿದೆ.

ವಿಕ್ಟೋರಿಯಾ ಆಸ್ಪತ್ರೆ ಸಾವಿನ ಸರದಿ: ರಾಜ್ಯದ ಹೃದಯ ಭಾಗದಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಮಾರು 700 ಹೆಚ್ಚು ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಹುತೇಕ ಬಡ ರೋಗಿಗಳೇ ಇರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಿನಕ್ಕೆ ಕನಿಷ್ಠ 30 ರಿಂದ 35 ಕೋವಿಡ್ ಸಾವುಗಳು ಸಂಭವಿಸುತ್ತಿವೆ. ಆದರೆ, RT PCR ಪರೀಕ್ಷೆಯಲ್ಲಿ ನೆಗಟಿವ್ ಬಂದು ಸಾವನ್ನಪ್ಪಿದವರನ್ನು ಪರೀಕ್ಷೆಗೆ ಒಳಪಡಿಸಿದಾಗಲೂ ಕೊವಿಡ್ ಇರುವುದು ದೃಢಪಟ್ಟಿದೆ. ಕಳೆದ ಹದಿನೈದು ದಿನಗಳಿಂದ ನಿರಂತರವಾಗಿ ದಿನಕ್ಕೆ 30ಕ್ಕೂ ಹೆಚ್ಚು ಸಾವುಗಳು ಒಂದೇ ಆಸ್ಪತ್ರೆಯಲ್ಲಿ ಸಂಭವಿಸುತ್ತಿವೆ.

Covid 19 deaths: Victoria Hospital covid death Count shocking information

ವಿಪರ್ಯಾಸವೆಂದರೆ ಮೃತ ದೇಹಗಳನ್ನು ವಿಲೇವಾರಿ ಮಾಡಲಾಗದಂತಹ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಸಹಜವಾಗಿ ಒಂದೆರಡು ಸಾವು ಸಂಭವಿಸುತ್ತಿದ್ದವು. ವಾಣಿವಿಲಾಸ, ವಿಕ್ಟೋರಿಯಾ, ಪಿಎಂಎಸ್ಎಸ್‌ವೈ ಆಸ್ಪತ್ರೆ ಮೂರರಲ್ಲಿ ಸಾವನ್ನಪಿದರೂ ದಿನಕ್ಕೆ ನಾಲ್ಕು ಮೀರುತ್ತಿರಲಿಲ್ಲ. ಆದರೆ ಕೋವಿಡ್‌ನಿಂದಾಗಿ ದಿನಕ್ಕೆ 30 ಕ್ಕೂ ಹೆಚ್ಚು ಕೊರೊನಾ ರೋಗಿಗಳು ಸಾವಿಗೀಡಾಗುತ್ತಿದ್ದಾರೆ ಎಂದು ವಿಕ್ಟೋರಿಯಾ ಶವಗಾರದ ಮೂಲಗಳು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿವೆ.

ಸರ್ಕಾರಿ ದಾಖಲೆಗಳ ಪ್ರಕಾರ ಬೆಂಗಳೂರಿನಲ್ಲಿ ದಿನಕ್ಕೆ ಸರಾಸರಿ 120 ರಿಂದ 130 ಸಾವು ವರದಿಯಾಗುತ್ತಿವೆ ಸರ್ಕಾರದ ಆರೋಗ್ಯ ಬುಲೆಟಿನ್ ಅಂಕಿ ಅಂಶ ಹೇಳುತ್ತಿದೆ. ಏ. 30 ರಂದು 124 ಮಂದಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂಬ ಅಂಕಿ ಅಂಶಗಳನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಆದರೆ, ಬೆಂಗಳೂರು ನಗರದಲ್ಲಿ ಸೃಷ್ಟಿಯಾಗಿರುವ ಸಾಮೂಹಿಕ ಸ್ಮಶಾನಗಳು ಹಾಗೂ ಆಸ್ಪತ್ರೆಗಳಲ್ಲಿ ವರದಿಯಾಗುತ್ತಿರುವ ಸಾವಿನ ಪ್ರಕರಣಗಳಿಗೆ ಹೋಲಿಸಿದರೆ ಸಾವಿನ ಸಂಖ್ಯೆ ಎರಡು ಮೂರು ಪಟ್ಟು ಹೆಜ್ಜಾಗಿರುವ ಅನುಮಾನ ಮೂಡಿಸುತ್ತದೆ. ವಿಕ್ಟೋರಿಯಾ ಆಸ್ಪತ್ರೆಯೊಂದರಲ್ಲೇ ಸರಾಸರಿ 30 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ ಎನ್ನುವುದಾದರೆ ಇನ್ನು ಬೌರಿಂಗ್, ಕೆ.ಸಿ.ಜನರಲ್, ಖಾಸಗಿ ಆಸ್ಪತ್ರೆಗಳ ಸಾವಿನ ಲೆಕ್ಕ ಪರಿಗಣಿಸಿದರೆ ಬಹುಶಃ ದಿನಕ್ಕೆ ಬೆಂಗಳೂರಿನಲ್ಲಿ ಕೊರೊನಾ ಸಾವಿನ ಅಂಕಿ ಅಂಶ 400 ಮೀರುತ್ತಿದೆಯಾ ಎಂಬ ಅನುಮಾನ ಮೂಡಿಸುತ್ತದೆ.

Covid 19 deaths: Victoria Hospital covid death Count shocking information

ಬೆರಗು ಮೂಡಿಸುವ ಟಿ.ಆರ್ ಮಿಲ್ ಸ್ಮಶಾನ: ಚಾಮರಾಜಪೇಟೆಯಲ್ಲಿರುವ ಟಿ.ಆರ್. ಮಿಲ್‌ವೊಂದರಲ್ಲಿ ದಿನಕ್ಕೆ ಕೊರೊನಾ ಸೋಂಕಿಗೆ ಬಲಿಯಾದ 30 ಕ್ಕೂ ಹೆಚ್ಚು ಮೃತ ದೇಹಗಳನ್ನು ಸುಡಲಾಗುತ್ತಿದೆ. ಇನ್ನು ಕೆಂಗೇರಿ, ಸುಮ್ಮನಹಳ್ಳಿ, ಟಿ.ಆರ್. ಮಿಲ್, ಕಲ್ಲಹಳ್ಳಿ, ಎಂ.ಎಸ್. ಪಾಳ್ಯ, ಹರಿಶ್ಚಂದ್ರಘಾಟ್, ವಿಲ್ಸನ್ ಗಾರ್ಡನ್, ಗುಡ್ಡದಹಳ್ಳಿ, ಕೂಡ್ಲು, ಹೆಬ್ಬಾಳ, ಪಣತೂರು ಚಿತಾಗಾರಗಳಲ್ಲಿ ಸರಾಸರಿ 20 ಮೃತ ದೇಹಗಳು ಸಾವನ್ನಪ್ಪಿದರೂ ಕೋವಿಡ್ ಸಾವಿನ ಸಂಖ್ಯೆ 250 ಗಡಿ ದಾಟುತ್ತದೆ. ಇನ್ನು ತಾತ್ಕಾಲಿಕವಾಗಿ ನಿರ್ಮಿಸಿರುವ ತಾವರೆಕೆರೆ ಗಿಡ್ಡನಹಳ್ಳಿ ಚಿತಾಗಾರ, ಎಲಚಿಕೊಪ್ಪೆ, ಸೇರಿದಂತೆ ಐದಕ್ಕೂ ಹೆಚ್ಚು ಕಡೆ ತಲಾ 16 ರಿಂದ 25 ಕೋವಿಡ್ ಮೃತ ದೇಹಗಳಿಗೆ ಕೊಳ್ಳಿ ಇಡಲಾಗುತ್ತಿದೆ. ಎಲ್ಲವನ್ನು ಪರಿಗಣಿಸಿ ಹೇಳುವುದಾದರೆ ಬೆಂಗಳೂರಿನಲ್ಲಿ ದಿನಕ್ಕೆ ಸಾವಿನ ಸಂಖ್ಯೆ 500 ಗಡಿ ದಾಟುತ್ತಿದೆಯೇ ಎಂಬ ಅನುಮಾನ ಮೂಡಿಸುತ್ತದೆ.

Covid 19 deaths: Victoria Hospital covid death Count shocking information


19 ಸಾವಿರಕ್ಕೆ ಎಷ್ಟು ಸಾವು ?: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 700 ರೋಗಿಗಳ ಪೈಕಿ ದಿನಕ್ಕೆ 25 ರಿಂದ 30 ಸಾವುಗಳು ವರದಿಯಾಗುತ್ತಿದ್ದರೆ, ಇನ್ನು ಬೆಂಗಳೂರಿನಲ್ಲಿ ದಿನಕ್ಕೆ 19 ಸಾವಿರ ಪ್ರಕರಣಗಳು ವರದಿಯಾಗಿವೆ. ಅದರ ಪ್ರಕಾರ ಬೆಂಗಳೂರಿನಲ್ಲಿ ಎಷ್ಟು ಸಾವುಗಳು ಸಂಭವಿಸುತ್ತಿರಬಹುದು ಎಂಬುದು ಜನರ ಊಹೆಗೆ ಬಿಟ್ಟಿದ್ದು. ಕೋವಿಡ್ ನಿಯಂತ್ರಣ ಮಾಡದೇ ಜನರ ಆಕ್ರೋಶಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರ ಮತ್ತು ಆರೋಗ್ಯ ಇಲಾಖೆ ಸತ್ಯವನ್ನು ಮರೆ ಮಾಚುತ್ತಿದೆಯೇ ? ಎಂಬ ಸಂಶಯ ಹುಟ್ಟು ಹಾಕಿದೆ. ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿರುವ ರಾಜ್ಯ ಸರ್ಕಾರ ಕೋವಿಡ್ ರೋಗಿಗಳಿಗೆ ಚಿಕಿತ್ಸೆಗಿಂತಲೂ ಹೆಚ್ಚಾಗಿ ಸಾಮೂಹಿಕ ಸ್ಮಶಾನ ನಿರ್ಮಾಣ ಕಾರ್ಯದಲ್ಲಿ ತೊಡಗಿರುವುದು ಈ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತದೆ.

Covid 19 deaths: Victoria Hospital covid death Count shocking information

ವಿಕ್ಟೋರಿಯಾ ಸಿಬ್ಬಂದಿಗೂ ಕರೊನಾ : ಮತ್ತೊಂದು ಆಘಾತಕಾರಿ ಸಂಗತಿಯೆಂದರೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಕೊಡುತ್ತಿರುವ ವೈದ್ಯರಿಗೆ, ನರ್ಸ್‌ಗಳು ಸೇರಿದಂತೆ ಸುಮಾರು 60 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಕೇವಲ ಮೂರು ದಿನಗಳ ಕಾಲ ರಜೆ ನೀಡಲಾಗಿತ್ತು. ಇದಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ. ಹೀಗಾಗಿ ಕೊರೊನಾ ಸೋಂಕಿನಿಂದ ನರಳುತ್ತಿದ್ದರೂ ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಕೊರೊನಾ ಪೀಡಿತರಿಗೆ ಚಿಕತ್ಸೆ ಮಾಡುವಲ್ಲಿ ನಿರತರಾಗಿದ್ದಾರೆ. ನಮಗೂ ಜೀವದ ಮೇಲೆ ಆಸೆಯಿದೆ. ಆದರೆ ಚಿಕಿತ್ಸೆ ನೀಡದೇ ವಿಧಿಯಿಲ್ಲ. ಇಲ್ಲಿನ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವಷ್ಟು ಸಿಬ್ಬಂದಿ ಇಲ್ಲ. ಮೊದಲೇ ಸಿಬ್ಬಂದಿ ಕೊರತೆ ಎದುರಿಸುತ್ತಿತ್ತು. ಈಗ ಒಂದು ಹಾಸಿಗೆ ಖಾಲಿಯಿಲ್ಲ. ಹೀಗಾಗಿ ಕೊರೊನಾ ಸೋಂಕಿನ ನಡುವೆಯೂ ವಿಕ್ಟೋರಿಯ ಆಸ್ಪತ್ರೆ ಸಿಬ್ಬಂದಿ ರೋಗಿಗಳ ಸೇವೆ ಮಾಡುತ್ತಿದ್ದಾರೆ.

English summary
Bengaluru biggest covid center Victoria hospital shocking death count report know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X