ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್‌ ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಲು ಸೈಕಲ್‌ ರ‍್ಯಾಲಿ

|
Google Oneindia Kannada News

ಬೆಂಗಳೂರು ಆಗಸ್ಟ್‌ 13: ಕೊರೊನಾವೈರಸ್ ಸಾಂಕ್ರಾಮಿಕದ ವಿರುದ್ದ ಹೋರಾಟದ ಪ್ರಮುಖ ಅಸ್ತ್ರವಾಗಿರುವ ಲಸಿಕಾಕರಣದ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಶನಿವಾರದಂದು (ಆಗಸ್ಟ್‌ 14) ಬೆಳಗ್ಗೆ 6 ಗಂಟೆಗೆ ಜಯನಗರದ ಯುನೈಟೆಡ್‌ ಆಸ್ಪತ್ರೆಯ ಸಹಯೋಗದಲ್ಲಿ ರೋಟರ‍್ಯಾಕ್ಟ್‌ ಬೆಂಗಳೂರು ಸೌತ್‌ ಸೈಕಲ್‌ ರ‍್ಯಾಲಿಯನ್ನು ಆಯೋಜಿಸಿದೆ.

ಬಸವನಗುಡಿಯ ವಾಸವಿ ವಿದ್ಯಾನಿಕೇತನ ಶಾಲೆಯಿಂದ ಪ್ರಾರಂಭವಾಗಲಿರುವ ಈ ಸೈಕಲ್‌ ರ‍್ಯಾಲಿ 6 ಕಿಲೋಮೀಟರ್‌ಗಳಷ್ಟು ಸಂಚರಿಸಲಿದ್ದು ಸಾರ್ವಜನಿಕರಲ್ಲಿ ಲಸಿಕೆಯನ್ನು ಪಡೆಯುವುದರ ಬಗ್ಗೆ ಜಾಗೃತಿಯನ್ನು ಮೂಡಿಸಲಿದೆ. ಈ ಕಾರ್ಯಕ್ರಮಕ್ಕೆ ಬಸವನಗುಡಿ ಶಾಸಕರಾದ ರವಿಸುಬ್ರಮಣ್ಯ, ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರಾದ ಡಾ. ವಿಕ್ರಮ್‌ಸಿದ್ದಾರೆಡ್ಡಿ, 3190 ರೋಟರಿ ಡಿಸ್ಟ್ರಿಕ್ಟ್‌ ಗವರ್ನರ್‌ ಫಜಲ್‌, ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ ಶಾಂತಕುಮಾರ್‌ ಮುರಡಾ ಚಾಲನೆ ನೀಡಲಿದ್ದಾರೆ.

ಜಯನಗರದ ಯುನೈಟೆಡ್‌ ಹಾಸ್ಪಿಟಲ್‌ನಲ್ಲಿ ಸ್ಪುಟ್ನಿಕ್‌-ವಿ ಲಸಿಕೆಜಯನಗರದ ಯುನೈಟೆಡ್‌ ಹಾಸ್ಪಿಟಲ್‌ನಲ್ಲಿ ಸ್ಪುಟ್ನಿಕ್‌-ವಿ ಲಸಿಕೆ

ಕೊರೊನಾವೈರಸ್ ಸಾಂಕ್ರಾಮಿಕವನ್ನು ತಡೆಗಟ್ಟುವುದಕ್ಕೆ ಇರುವ ಪ್ರಮುಖ ಅಸ್ತ್ರ ಎಂದರೆ ಲಸಿಕೆಯನ್ನು ಪಡೆದುಕೊಳ್ಳುವುದು. ಹಲವಾರು ಕಾರಣಗಳಿಂದ ಕೆಲವು ಜನರು ಲಸಿಕೆಯನ್ನು ಪಡೆದುಕೊಂಡಿರುವುದಿಲ್ಲ. ಅವರಲ್ಲಿ ಲಸಿಕೆ ಪಡೆದುಕೊಳ್ಳುವುದರಿಂದ ಆಗುವ ಅನುಕೂಲಗಳ ಬಗ್ಗೆ ಜಾಗೃತಿಯನ್ನು ಮೂಡಿಸುವುದು ನಮ್ಮ ಉದ್ದೇಶವಾಗಿದೆ ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕ ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

Covid 19 awareness campaign Cycle rally United Hospital, Jayanagar

ಸಾಮಾಜಿಕ ಕಾಳಜಿ ಹಾಗೂ ಕೊರೊನಾ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದ್ದಾರೆ

"ಇನ್ನುಳಿದ 15 ಸಾವಿರ ಡೋಸ್‌ ಲಸಿಕೆಗಳನ್ನು ನಮ್ಮ 15 ಸಹಯೋಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದ್ದು, ಸರ್ಕಾರ ನಿಗದಿಪಡಿಸಿರುವ 1410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1200 ರೂಪಾಯಿ ದರದಲ್ಲಿ ನೀಡಲು ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್‌ ಕೋವ್ಯಾಕ್ಸಿನ್‌ ದೊರೆಯದೇ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆ ರೂಪಿಸಿದ್ದೇವೆ" ಎಂದು ಡಾ ವಿಕ್ರಮ್‌ ವಿವರಿಸಿದರು. ಜಯನಗರದ ಯುನೈಟೆಡ್‌ ಆಸ್ಪತ್ರೆಯನ್ನು ಕೋವಿಡ್‌ ಲಸಿಕೆ ನೀಡುವ ಸಲುವಾಗಿ ಕಾಯ್ದಿರಿಸಲಾಗಿದೆ. ಇದನ್ನು ಲಸಿಕೆ ನೀಡುವ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ.

ಯುನೈಟೆಡ್‌ ಆಸ್ಪತ್ರೆ - ಬ್ರಾಹ್ಮಣ ಮಹಾಸಭಾ ಹೆಲ್ತ್‌ ಕಾರ್ಡ್‌ ಬಿಡುಗಡೆಯುನೈಟೆಡ್‌ ಆಸ್ಪತ್ರೆ - ಬ್ರಾಹ್ಮಣ ಮಹಾಸಭಾ ಹೆಲ್ತ್‌ ಕಾರ್ಡ್‌ ಬಿಡುಗಡೆ

"ಐಸಿಎಂಆರ್‌ ಸಂಸ್ಥೆ ವತಿಯಿಂದ ನಡೆಸಲಾದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ರೂಪಾಂತರದ ವಿರುದ್ಧ ಪರಿಣಾಮಕಾರಿ ಎನ್ನಲಾಗಿದೆ. ನಮ್ಮ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ನಮ್ಮ ಉದ್ದೇಶ. ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಈ ಲಸಿಕೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಹಯೋಗಿ ಆಸ್ಪತ್ರೆಗಳ ಮೂಲಕವೂ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕಿಸಿಕೊಡಲಿದ್ದೇವೆ" ಎಂದು ವಿವರಿಸಿದರು ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರುಡಾ.

Covid 19 awareness campaign Cycle rally United Hospital, Jayanagar

''ಯುನೈಟೆಡ್‌ ಆಸ್ಪತ್ರೆ ಜಯನಗರ, ಅತ್ಯಾಧುನಿಕ ಆಪರೇಷನ್‌ ಥಿಯೇಟರ್‌, ಐ.ಸಿ.ಯು ಸೌಲಭ್ಯ, ಡಯಾಗ್ನೋಸ್ಟಿಕ್ಸ್‌ ಹಾಗೂ ವೆಲ್‌ನೆಸ್‌ ಸೌಲಭ್ಯ ಹೊಂದಿರುವ ನವನಿರ್ಮಿತ ಆಸ್ಪತ್ರೆಯಾಗಿದೆ. ಶೀಘ್ರದಲ್ಲೇ ಇದರ ಉದ್ಘಾಟನೆಯ ಬಗ್ಗೆ ವಿಸ್ತೃತ ಮಾಹಿತಿ ಮಾಹಿತಿಗಳನ್ನು ನೀಡಲಾಗುವುದು,'' ಎಂದು ಯುನೈಟೆಡ್‌ ಆಸ್ಪತ್ರೆಯ ಸಂಸ್ಥಾಪಕರಾದ ಡಾ ವಿಕ್ರಮ್‌ ಸಿದ್ದಾರೆಡ್ಡಿ ಹೇಳಿದರು.

Recommended Video

ಸಹಾಯಕ್ಕಾಗಿ ಕಣ್ಣೀರು ಹಾಕುತ್ತಿರುವ ಆಫ್ಘಾನಿಗರು! | Oneindia Kannada

ಆಸ್ಪತ್ರೆ ವತಿಯಿಂದ ಕಡಿಮೆ ದರದಲ್ಲಿ ಸದಸ್ಯತ್ವ ಕಾರ್ಡನ್ನು ಪಡೆದುಕೊಳ್ಳುವ ಮೂಲಕ ಎರಡನೇ ಡೋಸ್‌ ಕೋವ್ಯಾಕ್ಸಿನ್ ಲಸಿಕೆಯನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಆಸ್ಪತ್ರೆಯ ವತಿಯಿಂದ 4 ಸಾವಿರಕ್ಕೂ ಹೆಚ್ಚು ಸ್ಪುಟ್ನಿಕ್‌-ವಿ ಲಸಿಕೆ ನೀಡಲಾಗಿದ್ದು, ಇನ್ನೂ 12 ಸಾವಿರ ಡೋಸ್‌ಗೆ ಆರ್ಡರ್‌ ನೀಡಿದ್ದೇವೆ ಎಂದು ಹೇಳಿದರು. ಬೆಂಗಳೂರಿನ ಜಯನಗರದ ಮಾಧವ ಪಾರ್ಕ್‌ನಲ್ಲಿರುವ ಯುನೈಟೆಡ್‌ ಆಸ್ಪತ್ರೆಯಲ್ಲಿ ಈ ಲಸಿಕೆ ಪಡೆದುಕೊಳ್ಳಬಹುದಾಗಿದೆ. ವಾಟ್ಸಾಪ್‌ ಮೂಲಕ ಸುಲಭವಾಗಿ ಸ್ಲಾಟ್‌ ಬುಕ್‌ ಮಾಡುವ ಸೌಲಭ್ಯವಿದೆ.

English summary
Covid 19 awareness campaign Cycle rally by Rotaract bengaluru south and United Hospital, Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X