ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 2.8 ಕೋಟಿ ರೂ ಮೌಲ್ಯದ 200 ಐಫೋನ್‌ಗಳು ವಶಕ್ಕೆ

|
Google Oneindia Kannada News

ಬೆಂಗಳೂರು,ಮಾರ್ಚ್ 1: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2.8 ಕೋಟಿ ರೂ. ಮೌಲ್ಯದ 200 ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಸ್ಟಮ್ ಅಧಿಕಾರಿಗಳು ದಂಪತಿಯಿಂದ ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.ದಂಪತಿ ಭಾರತ ಮೂಲದವರಾಗಿದ್ದು,ಅವರು ಅಮೆರಿಕ ಪಾಸ್‌ಪೋರ್ಟ್ ಹೊಂದಿದ್ದಾರೆ. ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ.

ಅವರು ಫೆಬ್ರವರಿ 13 ರಂದು ಮುಂಬೈನಿಂದ ಫ್ರಾನ್ಸ್‌ಗೆ ತೆರಳಿದ್ದರು, ಭಾನುವಾರ ಕೆಂಪೇಗೌಡ ಏರ್‌ಪೋರ್ಟ್‌ ಬಂದಿಳಿದಿದ್ದರು.

ಅವರನ್ನು ಮಾರ್ಚ್ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಅವರು ಬೆಂಗಳೂರಲ್ಲಿ ನಡೆಯುತ್ತಿರುವ ಹಲವು ಕಳ್ಳಸಾಗಣೆ ದಂಧೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರ ಬಳಿ 37 ಡೆಬಿಟ್ ಕಾರ್ಡ್‌ಗಳಿದ್ದವು. ಐಫೋನ್ 12 ಪ್ರೊ,ಪ್ರೊ ಮ್ಯಾಕ್ಸ್ ಸೇರಿದಂತೆ ಸುಮಾರು 2,74,19,400 ಬೆಲೆ ಬಾಳುವ ಮೊಬೈಲ್‌ಗಳಿದ್ದವು.

Bengaluru: Couple Lands At Bengaluru Airport With IPhones Worth Rs.2.8 Crores: Held

Recommended Video

ಶೀಘ್ರವೇ ಬರಲಿದೆ ಸ್ವದೇಶಿ ನಿರ್ಮಿತ ಗೇಮಿಂಗ್‌ ಅಪ್ಲಿಕೇಶನ್ಸ್‌- ಸಚಿವ ಪ್ರಕಾಶ್ ಜಾವಡೇಕರ್ | Oneindia Kannada

ಅವರ ಬ್ಯಾಗ್‌ಗಳನ್ನು ತಪಾಸಣೆ ಮಾಡುವಾಗ ಇದು ಬೆಳಕಿಗೆ ಬಂದಿದೆ, ಮಧ್ಯ ವಯಸ್ಕ ದಂಪತಿ ಪ್ಯಾರಿಸ್‌ನಿಂದ ಏರ್‌ ಫ್ರಾನ್ಸ್ ವಿಮಾನದಲ್ಲಿ ಬಂದಿದ್ದರು. ಪ್ರತ್ಯೇಕ ಪ್ರಕರಣದಲ್ಲಿ ದುಬೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ವ್ಯಕ್ತಿಯಿಂದ 686 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ, ಸುಮಾರು 31 ಲಕ್ಷ ರೂ ಮೌಲ್ಯದ ಆಭರಣಗಳಿದ್ದವು.

English summary
Over 200 iPhones worth Rs 2.8 crore were seized at Bengaluru’s Kempegowda International Airport on Sunday by Customs officials from a couple. The couple are of Indian origin but are United States passport holders and were detained after the phones were seized from their baggage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X