ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಮೊದಲ ಅಂತಾರಾಷ್ಟ್ರೀಯ ಪ್ರವಾಸಿ ಮೇಳ

|
Google Oneindia Kannada News

ಬೆಂಗಳೂರು, ಜನವರಿ 3 : ದೇಶದ ಮೊದಲ ಅತಿದೊಡ್ಡ ಪ್ರವಾಸೋದ್ಯಮ ಮೇಳ 'ಕರ್ನಾಟಕ ಅಂತಾರಾಷ್ಟ್ರೀಯ ಪ್ರವಾಸಿ ಎಕ್ಸ್ ಪೋ 2018' ಫೆಬ್ರವರಿ 28 ರಿಂದ ಮಾರ್ಚ್ 2 ರವರೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ.

ಆಳ ಸಮುದ್ರದ ಜೀವ ರಾಶಿಗಳ ಕಣ್ತುಂಬಿಕೊಳ್ಳಲು ಬನ್ನಿ ಸ್ಕೂಬಾ ಉತ್ಸವಕ್ಕೆಆಳ ಸಮುದ್ರದ ಜೀವ ರಾಶಿಗಳ ಕಣ್ತುಂಬಿಕೊಳ್ಳಲು ಬನ್ನಿ ಸ್ಕೂಬಾ ಉತ್ಸವಕ್ಕೆ

ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಮೂರು ದಿನಗಳ ಅತಿದೊಡ್ಡ ಪ್ರವಾಸಿ ಮೇಳವನ್ನು ಏರ್ಪಡಿಸಲಾಗುತ್ತಿದೆ. ಮೇಳದಲ್ಲಿ 25ಕ್ಕೂ ಹೆಚ್ಚು ದೇಶಗಳ 400 ಕ್ಕೂ ಹೆಚ್ಚಿನ ನೋಂದಾಯಿತ ಖರೀದಿದಾರರು ಮತ್ತು ಮಾಧ್ಯಮಗಳು ಪಾಲ್ಗೊಳ್ಳಲಿದ್ದಾರೆ ಎಂದು ಪ್ರವಾಸೋದ್ಯಮ ಮತ್ತು ಐಟಿ,ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಜನವರಿ 1ರಿಂದ ಗಲ್ಫ್ ರಾಷ್ಟ್ರಗಳ ಪ್ರವಾಸ ಸಿಕ್ಕಾಪಟ್ಟೆ ದುಬಾರಿಜನವರಿ 1ರಿಂದ ಗಲ್ಫ್ ರಾಷ್ಟ್ರಗಳ ಪ್ರವಾಸ ಸಿಕ್ಕಾಪಟ್ಟೆ ದುಬಾರಿ

Country's Biggest Tourism fest in Bengaluru from Feb.28

12 ಸಾವಿರಕ್ಕೂ ಹೆಚ್ಚಿನ ಬಿ2ಬಿ ಸಂದರ್ಶನಗಳು ನಡೆಯಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದು, ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವುದು ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಉದ್ಯಮಗಳ ಮೂಲಕ ಬಂಡವಾಳ ಹೂಡಿಕೆಗೆ ಒತ್ತು ನೀಡುವುದು ಈ ಮೇಳದ ಉದ್ದೇಶವಾಗಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸಿಗರಿಗಿಲ್ಲ ಹೊಸವರ್ಷದ ಖುಷಿ!ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಪ್ರವಾಸಿಗರಿಗಿಲ್ಲ ಹೊಸವರ್ಷದ ಖುಷಿ!

ಮಾಸ್ಟರ್ ಪ್ಲ್ಯಾನ್: ರಾಜ್ಯದ 20 ಪ್ರಮುಖ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯ ಇನ್ನಿತರೆ ಸೌಲಭ್ಯಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲಾಗಿದೆ. ಪ್ರಮುಖವಾಗಿ ಯಾದಗಿರಿ ಕೋಟೆ, ಕಲಬುರಗಿ ಕೋಟೆ, ತಲಕಾವೇರಿ, ಬೇಲೂರು, ಹಳೆಬೀಡು, ಹಂಪಿ ಸೇರಿದಂತೆ ಪ್ರಮುಖ 20 ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈಗಾಗಲೇ 7 ತಾಣಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

English summary
Country's first biggest international tourism fest will be held in Bengaluru from February 28 to March 1. Around 400 agencies of 25 different contries will participate in the fest. Minister for Department of Tourism Karnataka Priyank Kharge told details to reporters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X