ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ ಹಾಕಿ ಉಚಿತ ಇಂಟರ್ ನೆಟ್ ಸೇವೆ ಪಡೆಯಿರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 20: ವಿಧಾನಸಭೆ ಚುನಾವಣೆಯಲ್ಲಿ ಮತ ಹಾಕುವ ನಗರದ ವಿದ್ಯಾರ್ಥಿಗಳಿಗೆ ಒಂದು ಗಂಟೆ ಉಚಿತ ಇಂಟರ್ ನೆಟ್ ಸೇವೆ ಹಾಗೂ ರಿಯಾಯಿತಿ ದರದಲ್ಲಿ ದಿನಸಿ ಮಾರಾಟದ ಸೌಲಭ್ಯ ದೊರೆಯಲಿದೆ.

ಇದು ಯಾವುದೇ ಪಕ್ಷ ಇಲ್ಲವೇ ಅಭ್ಯರ್ಥಿ ಮತದಾರರಿಗೆ ನೀಡುತ್ತಿರುವ ಆಮಿಷ ಅಲ್ಲ, ರಾಜಾಜಿನಗರದ ಪಬ್ಲಿಕ್ ವಾಯ್ಸ್ ಜಡ್ಜ್ ಮೆಂಟ್ ಸಂಘಟನೆ ಮತದಾನಕ್ಕೂ ಮುನ್ನವೇ ಈ ಸೇವೆ ನೀಡುತ್ತಿರುವುದಾಗಿಯೂ ಹೇಳಿಕೊಂಡಿದೆ.

ನವರಂಗ ಚಿತ್ರಮಂದಿರ ಬಳಿಯಿರುವ ಬ್ರೌಸಿಂಗ್ ಸೆಂಟರ್ ಹಾಗೂ ದಿನಸಿ ಅಂಗಡಿಯಲ್ಲಿ ನಾಗರಿಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಸಂಘಟನೆ ಮುಖ್ಯಸ್ಥ ವಿಶ್ವೇಶ್ವರ ಶರ್ಮಾ ಅಯ್ಯರ್ ತಿಳಿಸಿದ್ದಾರೆ.

Cost the vote, get free internet for hour

ಮತದಾನದಲ್ಲಿ ಯುವಕರು ಭಾಗಿಯಾಗುವಂತೆ ಪ್ರೇರೇಪಿಸಲು ಹಾಗೂ ಮತದಾನದ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಈ ರಿಯಾಯಿತಿ ಸೌಲಭ್ಯ ಪ್ರಕಟಿಸಲಾಗಿದೆ. ಮತ ಹಾಕಿದ ಕುರಿತು ಬೆರಳ ಗುರುತಿನ ಶಾಹಿ ತೋರಿಸಿ ಸೌಲಭ್ಯ ಪಡೆಯಬಹುದು. ಅಲ್ಲದೆ ವಿದ್ಯಾರ್ಥಿಗಳಿ 25 ಪೈಸೆ ಸರದಲ್ಲಿ ಜೆರಾಕ್ಸ್ ಮಾಡಿಕೊಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ದಿನಸಿಗೆ ಶೇ.20-40ರಷ್ಟು ರಿಯಾಯಿತಿ: ಬಡ ಹಾಗೂ ಮಧ್ಯಮ ವರ್ಗದ ಜನರು ಬಳಸುವ ದಿನಸಿ ವಸ್ತುಗಳನ್ನು ಶೇ.40ರಷ್ಟು ರಿಯಾಯಿತಿ ದರದಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದೆ. ಆಟೋ ಡ್ರೈವರ್ ಗಳಿಗೆ ಇನ್ನೂ ಹೆಚ್ಚಿನ ರಿಯಾಯಿತಿ ನೀಡಲಿದ್ದು, ನಿತ್ಯ ಕುಟುಂಬಕ್ಕೆ ಬೇಕಿರುವಷ್ಟು ಮಾತ್ರ ರಿಯಾಯಿತಿಯಲ್ಲಿ ವಿತರಿಸಲಾಗುತ್ತದೆ.

English summary
To promote and inspire the students to cost their vote on May 12, Public voice judgement organization of Rajajinagar in Bangalore has announce one hour internet usage for free of cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X