ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫ್ರಾನ್ಸ್‌ನಿಂದ ಬಂದ ಮಹಿಳೆಗೆ ಕೊರೊನಾ ಶಂಕೆ, ಬೌರಿಂಗ್ ಆಸ್ಪತ್ರೆಗೆ ದಾಖಲು

|
Google Oneindia Kannada News

ಬೆಂಗಳೂರು, ಮಾರ್ಚ್ 12: ಕೊರೊನಾ ವೈರಸ್ ಭೀತಿ ಹೆಚ್ಚಿರುವ ಕಾರಣ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಪ್ರಮುಖವಾಗಿ ಏರ್‌ಪೋರ್ಟ್‌ಗಳಲ್ಲಿ ಹೆಚ್ಚು ನಿಗಾ ವಹಿಸಲಾಗಿದೆ. ಹೊರದೇಶದಿಂದ ಯಾರೇ ಬರಲಿ ಅಥವಾ ಹೊರ ದೇಶಗಳಿಗೆ ಇಲ್ಲಿಂದ ಯಾರೇ ಹೋಗಲಿ ಅಂತವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

ಹೀಗೆ, ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಪರೀಕ್ಷಿಸುವ ವೇಳೆ ಫ್ರಾನ್ಸ್‌ನಿಂದ ಬಂದ ಮಹಿಳೆಯೊಬ್ಬರಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಥರ್ಮಿಂಗ್ ಸ್ಕ್ರೀನ್ ಪರೀಕ್ಷೆ ವೇಳೆ ಆಕೆಗೆ ಜ್ವರ ಇರುವುದು ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ವೈದ್ಯಾಧಿಕಾರಿಗಳು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಆಕೆಯನ್ನು ಕರೆದುಕೊಂಡು ಬಂದು ದಾಖಲಿಸಿದ್ದಾರೆ.

ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?ಭಾರತದಲ್ಲಿ ಕೊರೊನಾ 'ಅಟ್ಟಹಾಸ': ಕೇರಳ ಟಾಪ್, ಕರ್ನಾಟಕ ಎಷ್ಟು?

ಕೊರೊನಾ ಸೋಂಕು ಇರಬಹುದಾ ಎಂಬ ಸಂಶಯಗೊಂಡಿರುವ ವೈದ್ಯರು ಆಕೆಯ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಸದ್ಯಕ್ಕೆ ಆಕೆಯ ಸ್ಥಿತಿ ಸಹಜವಾಗಿದ್ದು, ರಕ್ತ ಪರೀಕ್ಷೆಯ ವರದಿ ಬಂದ ಮೇಲೆ ಫಲಿತಾಂಶ ಏನು ಎಂಬುದನ್ನು ನಿರ್ಧರಿಸಲಾಗುತ್ತೆ.

France Woman Admitted To Bowring Hospital

ಫ್ರಾನ್ಸ್‌ನಿಂದ ಬಂದಿರುವ ಮಹಿಳೆ, ಮೂಲತಃ ಫ್ರಾನ್ಸ್ ಅಥವಾ ಭಾರತೀಯ ಮೂಲದವರು ಎಂಬ ಮಾಹಿತಿ ಸದ್ಯಕ್ಕೆ ಸಿಕ್ಕಿಲ್ಲ. ಇನ್ನುಳಿದಂತೆ ಫ್ರಾನ್ಸ್‌ನಲ್ಲಿ ಸುಮಾರು 2281 ಕೊರೊನಾ ಕೇಸ್‌ ಪತ್ತೆಯಾಗಿದೆ. ಇದುವರೆಗೂ 48 ಜನರು ಸಾವನಪ್ಪಿದ್ದಾರೆ ಎನ್ನಲಾಗಿದೆ.

Coronavirus: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳು ವಿದೇಶಕ್ಕೆ ಹೋಗುವಂತಿಲ್ಲCoronavirus: ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿಗಳು ವಿದೇಶಕ್ಕೆ ಹೋಗುವಂತಿಲ್ಲ

ಕರ್ನಾಟಕದಲ್ಲಿ ಒಟ್ಟು ನಾಲ್ಕು ಜನರಲ್ಲಿ ಕೊರೊನಾ ವೈರಸ್‌ ಪತ್ತೆಯಾಗಿದೆ. ಇದರಲ್ಲಿ ಅಮೆರಿಕದಿಂದ ಬಂದ ಟೆಕ್ಕಿ ಹಾಗೂ ದುಬೈನಿಂದ ಬಂದ ಟೆಕ್ಕಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ವಿದೇಶದಿಂದ ಬರುವ ವ್ಯಕ್ತಿಗಳಿಂದ ಆತಂಕ ಹೆಚ್ಚಾಗುತ್ತಿದೆ.

English summary
A woman, who come from france was admitted to bowring hospital for fever.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X