ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಧಾನಸೌಧ, ವಿಕಾಸಸೌಧದಲ್ಲೂ ಕೊರೊನಾ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ

|
Google Oneindia Kannada News

ಬೆಂಗಳೂರು, ಮಾರ್ಚ್ 16: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು,ಕೇವಲ ವಿಮಾನ ನಿಲ್ದಾಣಕ್ಕಷ್ಟೇ ಸೀಮಿತವಾಗಿದ್ದ ಸ್ಕ್ರೀನಿಂಗ್ ವ್ಯವಸ್ಥೆಯನ್ನು ವಿಧಾನಸೌಧ, ವಿಕಾಸಸೌಧದಲ್ಲೂ ಅಳವಡಿಸಲಾಗಿದೆ.

ಈ ಕುರಿತು ಸಚಿವ ಶ್ರೀರಾಮುಲು ಮಾಹಿತಿ ನೀಡಿದ್ದಾರೆ. ವಿಧಾನಸೌಧ, ಹೈಕೋರ್ಟ್ ಸೇರಿದಂತೆ ಕಲಬುರಗಿ ಮತ್ತು ಧಾರವಾಡ ಪೀಠ, ವಿಕಾಸಸೌಧ, ಬಹುಮಹಡಿ ಕಟ್ಟಡ , ಶಾಸಕರ ಭವನ, ಸಿಟಿ ಸಿವಿಲ್ ಕೋರ್ಟ್‌ಗಳಿಗೂ ವಿಸ್ತರಿಸಲಾಗಿದೆ.

ಅರ್ಬನ್ ಸ್ಟಾಫ್ ನರ್ಸ್‌ಗಳನ್ನು ಸ್ಕ್ರೀನಿಂಗ್ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಒಂದು ವೇಳೆ ಅವರ ಸಂಖ್ಯೆಯಲ್ಲಿ ಕೊರತೆಯಾದರೆ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸ್ಟಾಫ್ ನರ್ಸ್‌ಗಳನ್ನು ಬಳಸಿಕೊಳ್ಳಬಹುದು.

ಕೊರೊನಾ ಭೀತಿ; ಮದುವೆ ಮಾಡುವ ಬಗ್ಗೆ ಬಿಬಿಎಂಪಿ ಸ್ಪಷ್ಟನೆಕೊರೊನಾ ಭೀತಿ; ಮದುವೆ ಮಾಡುವ ಬಗ್ಗೆ ಬಿಬಿಎಂಪಿ ಸ್ಪಷ್ಟನೆ

ಈ ಸ್ಥಳಗಳಿಗೆ ಬರುವ ಪ್ರತಿ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಕಡ್ಡಾಯವಾಗಿ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು ಎಂದು ಆರೋಗ್ಯ ಇಲಾಖೆ ಭಾನುವಾರ ಆದೇಶ ಹೊರಡಿಸಿದೆ.

ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆ ಕಡ್ಡಾಯ

ವಿಮಾನ ನಿಲ್ದಾಣ, ಬಂದರುಗಳಲ್ಲಿ ತಪಾಸಣೆ ಕಡ್ಡಾಯ

ಎಲ್ಲಾ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ತಪಾಸಣೆಯನ್ನು ಕಡ್ಡಾಯಗೊಳಿಸಿರುವ ಇಲಾಖೆ ಎ,ಬಿ ಮತ್ತು ಸಿ ಎಂದು ಮೂರು ವರ್ಗಗಳಾಗಿ ವಿಂಗಡಿಸಿ ಪ್ರತ್ಯೇಕ ನಿಗಾದಲ್ಲಿ ಇರಿಸುವ ಕೆಲಸ ಆರಂಭಿಸಿದೆ. ಇತ್ತೀಚೆಗೆ ವಿದೇಶಕ್ಕೆ ಭೇಟಿ ನೀಡಿ ಬಂದಿದ್ದವರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ.

ಕನಾಟಕದಲ್ಲಿ ಎಲ್ಲಿ ಎಷ್ಟು ಮಂದಿಗೆ ಚಿಕಿತ್ಸೆ

ಕನಾಟಕದಲ್ಲಿ ಎಲ್ಲಿ ಎಷ್ಟು ಮಂದಿಗೆ ಚಿಕಿತ್ಸೆ

ಭಾನುವಾರ ಬೆಂಗಳೂರು ರಾಜೀವ್‌ಗಾಂಧಿ ಹೃದ್ರೋಗಗಳ ಸಂಸ್ಥೆಯಲ್ಲಿ ನಾಲ್ಕು ಮಂದಿ, ಬೆಂಗಳೂರಿನ ಇತರೆ ಕೊರೊನಾ ನಿಗಾ ಆಸ್ಪತ್ರೆಗಳಲ್ಲಿ ಒಂಬತ್ತು, ದಕ್ಷಿಣ ಕನ್ನಡ ನಾಲ್ಕು, ಬಳ್ಳಾರಿ ನಾಲ್ಕು, ವಿಜಯಪುರ ಹಾಗೂ ಗದಗದಲ್ಲಿ ತಲಾ ಇಬ್ಬರು, ಧಾರವಾಡದಲ್ಲಿ ಒಬ್ಬರು ಒಳರೋಗಿಗಳಾಗಿ ದಾಖಲಿಸಲಾಗಿದೆ.
ಕಲಬುರಗಿಯಲ್ಲಿ ಡಿಸಿಗಳು ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ, ಜನನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ.

ಕೊರೋನಾದಿಂದ ಮೃತ ವ್ಯಕ್ತಿಯ ಕುಟುಂಬದ ನಾಲ್ವರಿಗೆ ಕಫ ಟೆಸ್ಟ್ ಮಾಡಲಾಗಿದೆ.ಸೋಂಕಿತರ ಮನೆ ಕಡೆ ಯಾರೂ ಹೋಗದಂತೆ ಎಚ್ಚರಿಕೆ ಕೊಟ್ಟಿದ್ದೇವೆ. ಆದಷ್ಟು ಸ್ಬಚ್ಚತೆಯನ್ನ ಎಲ್ಲರೂ ಕಾಪಾಡಬೇಕು,ಸರ್ಕಾರ ಎಲ್ಲಾರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನ ತೆಗೆದುಕೊಂಡಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಕೊರೊನಾ ಭೀತಿಯಿದ್ದರೂ ಡಿಕೆಶಿ ಮನೆ ಮುಂದೆ ಜನಸಾಗರ!ಕೊರೊನಾ ಭೀತಿಯಿದ್ದರೂ ಡಿಕೆಶಿ ಮನೆ ಮುಂದೆ ಜನಸಾಗರ!

ಕೊರೊನಾ ನಿಯಂತ್ರಣಕ್ಕೆ 84 ಕೋಟಿ ರೂ. ಖರ್ಚು

ಕೊರೊನಾ ನಿಯಂತ್ರಣಕ್ಕೆ 84 ಕೋಟಿ ರೂ. ಖರ್ಚು

ಕೊರೊನಾ ವೈರಸ್ ನಿಯಂತ್ರಣಕ್ಕೆ 84 ಕೋಟಿ ರೂ. ಖರ್ಚು ಮಾಡಲು ಕೇಂದ್ರ ಗೃಹ ಇಲಾಖೆ ನಿರ್ದೇಶನ ನೀಡಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ. ಪ್ರಕೃತಿ ವಿಕೋಪ ನಿರ್ವಹಣಾ ನಿಧಿಯಲ್ಲಿ ಮೀಸಲಿರುವ 84 ಕೋಟಿ ಖರ್ಚು ಮಾಡಲು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿದೆ.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ

ಕೊರೊನಾ ನಿಯಂತ್ರಣ ಕ್ಕೆ ಬೇಕಾದ ಔಷಧ, ಸ್ವಚ್ಚತೆ, ಸ್ಯಾನಿಟೇಷನ್, ಉಪಕರಣಗಳ ಖರೀದಿ, ಪೊಲೀಸ್ ಭದ್ರತೆ ಹಾಗೂ ಅಗ್ನಿಶಾಮಕ ಇಲಾಖೆಗೆ ಹಣ ಬಳಕೆ ಮಾಡಲು ಸೂಚನೆ ನೀಡಲಾಗಿದೆ. ಎಸ್ ಡಿ ಆರ್ ಎಫ್ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಎಸ್ ಡಿ ಆರ್ ಎಫ್ ಮೀಸಲು ಹಣದಲ್ಲಿ ಶೇ.25 ರಷ್ಟು ಹಣ ಬಳಸಲು ಕೇಂದ್ರ ಅನುಮತಿ ಕೊರೊನಾ ವೈರಸ್ ರಾಷ್ಟ್ರೀಯ ವಿಪತ್ತು ಎಂಬ ಕಾರಣಕ್ಕೆ ಕೇಂದ್ರದ ಹಣ ಬಳಕೆಗೆ ಅನುಮತಿ ನೀಡಿದೆ.

English summary
Corona Scare Government introduced Thermal Screening system in Vidhana Soudha And Vikasa soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X