ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಕೊರೊನಾ ಕಟ್ಟಿಹಾಕಿದ ಈಶ್ವರ!

|
Google Oneindia Kannada News

ಬೆಂಗಳೂರು, ಆಗಸ್ಟ್ 02 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಗಣೇಶ ಚತುರ್ಥಿ ಬಂದಿದೆ. ಈ ವರ್ಷ ಸಾರ್ವಜನಿಕವಾಗಿ ಎಲ್ಲೂ ಗಣೇಶಮೂರ್ತಿಗಳನ್ನು ಕೂರಿಸಲಾಗುವುದಿಲ್ಲ. ಆದರೆ, ಮನೆ, ಅಂಗಡಿ, ಕಚೇರಿಗಳಲ್ಲಿ ಪೂಜೆ ಸಲ್ಲಿಸಬಹುದಾಗಿದೆ.

Recommended Video

ಭಾರತವನ್ನ ಸೇರಿಸಿಕೊಂಡಿರುವ ಚೀನಾದ ಹೊಸ ನಕ್ಷೆ ಮುದ್ರಣ | Oneindia Kannada

ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಶನಿವಾರ ನಗರದಲ್ಲಿ 1852 ಪ್ರಕರಣ ದಾಖಲಾಗಿದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 57,396.

ಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರಗಣೇಶ ಉತ್ಸವಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಪ್ರಕಟಿಸಿದ ಮಹಾರಾಷ್ಟ್ರ

ನಗರದಲ್ಲಿ ಏರುತ್ತಿರುವ ಕೊರೊನಾ ಸೋಂಕನ್ನು ಈಶ್ವರ ಕಟ್ಟಿಹಾಕಿದ್ದಾನೆ. ಅಚ್ಚರಿಯಾದರೂ ಇದು ಸತ್ಯ. ಕಲಾವಿದರ ಕೈ ಚಳಕದಲ್ಲಿ ಮೂಡಿಬಂದಿರುವ ಮೂರ್ತಿ ಇದಾಗಿದೆ. ನಗರದಲ್ಲಿನ ಈ ಗಣೇಶ ಮೂರ್ತಿ ಈಗ ಎಲ್ಲರ ಗಮನ ಸೆಳೆಯುತ್ತಿದೆ.

ಶಿವಮೊಗ್ಗ; ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ರದ್ದು ಶಿವಮೊಗ್ಗ; ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ರದ್ದು

Coronavirus Themed Idol Attracting People

ಕೊರೊನಾ ವೈರಸ್ ಮಾದರಿಯ ಮೂರ್ತಿಗೆ ಹಗ್ಗಹಾಕಿ ಅದನ್ನು ಈಶ್ವರ ಕೈಯಲ್ಲಿ ಹಿಡಿದಿದ್ದಾನೆ. ಪಕ್ಕದಲ್ಲಿ ಗಣೇಶ ಕೂತಿದ್ದಾನೆ. ಇಲಿಗಳು ಗನ್ ಹಿಡಿದುಕೊಂಡು ಕೊರೊನಾವನ್ನು ಹೆದರಿಸುತ್ತಿವೆ. ನಗರದ ವರ್ಕ್‌ ಶಾಪ್‌ವೊಂದರ ಮುಂದಿರುವ ಈ ಕಲಾಕೃತಿ ಎಲ್ಲರ ಗಮನಸೆಳೆಯುತ್ತಿದೆ.

ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ ಗಣೇಶ ಚತುರ್ಥಿ ಸನ್ನಿಹಿತ: ಮೂರ್ತಿಗಳನ್ನು ಕೊಳ್ಳುವವರೇ ಇಲ್ಲ

ಕೇವಲ ಈಶ್ವರ ಮಾತ್ರವಲ್ಲ ಪಿಪಿಇ ಕಿಟ್ ಧರಿಸಿರುವ ನರ್ಸ್, ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ತೆಗೆದುಕೊಂಡು ಹೋಗುವುದು ಸೇರಿದಂತೆ ವಿವಿಧ ಕಲಾಕೃತಿಗಳು ಇಲ್ಲಿ ಗಮನ ಸೆಳೆಯುತ್ತಿವೆ.

ಸಾರ್ವಜನಿಕ ಸ್ಥಳದಲ್ಲಿ ಗಣೇಶ ವಿಗ್ರಹ ಕೂರಿಸಿದರೆ ಹೆಚ್ಚು ಜನರು ಸೇರುತ್ತಾರೆ. ಆಗ ಕೊರೊನಾ ವೈರಸ್ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಈ ಬಾರಿ ಸರಳವಾಗಿ ಗಣೇಶ ಚತುರ್ಥಿ ನಡೆಯಲಿದೆ.

English summary
In Bengaluru city coronavirus themed idol attracting people. Idol kept in the workshop in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X