ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ಶಂಕಿತರ ಕೈಗೆ ಸ್ಟಾಂಪ್

|
Google Oneindia Kannada News

ಬೆಂಗಳೂರು, ಮಾರ್ಚ್ 19: ಮಹಾರಾಷ್ಟ್ರದಂತೆ ಕರ್ನಾಟಕದಲ್ಲಿಯೂ ಕೊರೊನಾ ವೈರಸ್ ಶಂಕಿತರ ಕೈಗೆ ಸ್ಟಾಂಪ್ ಹಾಕಲಾಗುತ್ತಿದೆ. ಈ ಮೂಲಕ ಸೋಂಕಿತರನ್ನು ಸುಲಭವಾಗಿ ಕಂಡುಹಿಡಿಯಲು ಯೋಜನೆ ಹಾಕಿಕೊಳ್ಳಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರುವ ಪ್ರಯಾಣಿಕರಿಗೆ ಕೊರೊನಾ ತಪಾಸಣೆ ಮಾಡಲಾಗುತ್ತಿದೆ. ಈ ವೇಳೆ ಕೊರೊನಾ ವೈರಸ್ ಹರಡುವ ಶಂಕೆ ಇದ್ದ ವ್ಯಕ್ತಿಗಳ ಎಡಕೈಗೆ ಸ್ಟಾಂಪ್ ಹಾಕಲಾಗುತ್ತಿದೆ. ಶಂಕೆಗೆ ಒಳಪಟ್ಟ ವ್ಯಕ್ತಿ ಎಷ್ಟು ದಿನಗಳವರೆಗೆ ಮನೆಯಲ್ಲಿಯೇ ವಾಸ (ಕ್ವಾರಂಟೈನ್) ಇರಬೇಕು ಎಂದು ದಿನಾಂಕವನ್ನು ಅಲ್ಲಿ ತಿಳಿಸಲಾಗಿದೆ.

ಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿಕೊರೊನಾ ವೈರಸ್ ನಿಂದ ಸಾವು: ಮೃತದೇಹಗಳ ನಿರ್ವಹಣೆಗೂ ಮಾರ್ಗಸೂಚಿ

ಕೊರೊನಾ ವೈರಸ್ ಶಂಕೆಗೆ ಒಳಪಟ್ಟ ವ್ಯಕ್ತಿ ಮನೆಯಲ್ಲಿಯೇ ವಾಸ (ಕ್ವಾರಂಟೈನ್) ಮಾಡಬೇಕಾಗುತ್ತದೆ. ಆ ವ್ಯಕ್ತಿಯಿಂದ ಬೇರೆ ವ್ಯಕ್ತಿಗೆ ವೈರಸ್ ಹರಡದಂತೆ ನೋಡಿಕೊಳ್ಳಬೇಕಾಗುತ್ತದೆ. ಆದರೆ, ವೈರಸ್ ಶಂಕೆ ಇರುವ ವ್ಯಕ್ತಿಗಳು ಮಹಾರಾಷ್ಟ್ರದ ನಾಗ್ಪುರದ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿದ್ದರು.

Coronavirus Suspects Under Home Quarantine Have To Hand Stamped In Bengaluru International Airport

ಹೀಗಾಗಿ, ವೈರಸ್ ಶಂಕೆ ಇರುವ ವ್ಯಕ್ತಿಗಳನ್ನು ಕಂಡು ಹಿಡಿಯಲು ಅಲ್ಲಿನ ಸರ್ಕಾರ ಸ್ಟಾಂಪ್ ಹಾಕುವ ನಿಯಮ ತಂದಿತ್ತು. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಈ ರೀತಿ ಮಾಡಲಾಗುತ್ತಿದೆ.

ವಿದ್ಯಾರ್ಥಿಗಳ ಜೀವ ತೆಗೆದ ಕೊರೊನಾದಿಂದ ಸಿಕ್ಕ ರಜೆವಿದ್ಯಾರ್ಥಿಗಳ ಜೀವ ತೆಗೆದ ಕೊರೊನಾದಿಂದ ಸಿಕ್ಕ ರಜೆ

ಚುನಾವಣೆಯಲ್ಲಿ ಬೆರಳಿಗೆ ಇಂಕ್ ಹಾಕುವ ರೀತಿ ಈ ಸ್ಟಾಂಪ್ ಇದೆ. ಹಲವು ದಿನಗಳ ಕಾಲ ಸ್ಟಾಂಪ್ ಸೋಂಕು ಶಂಕೆ ಇರುವ ವ್ಯಕ್ತಿಗಳ ಕೈಮೇಲೆ ಇರಲಿದೆ. ಸ್ಟಾಂಪ್ ನಲ್ಲಿ 'ಪ್ರೌಡ್ ಟು ಪ್ರೊಟೆಕ್ಟ್ ಬೆಂಗಳೂರು' ಎಂದು ಬರೆಯಲಾಗಿದೆ.

English summary
Coronavirus in karnataka: Coronavirus suspects under home quarantine have to hand stamped in bengaluru international airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X