ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಹೊಸ ಪ್ರದೇಶಗಳಲ್ಲಿ ಕೊರೊನಾವೈರಸ್ ದಾಳಿ

|
Google Oneindia Kannada News

ಬೆಂಗಳೂರು, ಮೇ 26: ನಗರದ ದಿನೇ ದಿನೇ ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಆತಂಕದ ಸಂಗತಿ ಎಂದರೆ ಇದು ಬೇರೆ ಬೇರೆ ಪ್ರದೇಶಗಳಿಗೆ ಹಬ್ಬುತ್ತಿದೆ.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಒಂದು ಎರಡು ದಾಖಲಾಗುತ್ತಿದ್ದವು. ಆದರೆ ಸೋಮವಾರ ಬರೋಬ್ಬರಿ 8 ಪ್ರಕರಣಗಳು ದಾಖಲಾಗಿವೆ. ಅಂತರಾಜ್ಯ ಪ್ರಯಾಣ ಮಾಡಿದವರಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಮತ್ತು ಬೆಂಗಳೂರಿನ ಸ್ಥಳೀಯರಲ್ಲಿ ಸೋಂಕು ಪತ್ತೆಯಾಗಿದೆ.

ಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರು ನಂಬರ್ 1: ಕೇಂದ್ರ ಸಚಿವಕೋವಿಡ್ ನಿಯಂತ್ರಣದಲ್ಲಿ ಬೆಂಗಳೂರು ನಂಬರ್ 1: ಕೇಂದ್ರ ಸಚಿವ

ಪುಟ್ಟೇನಹಳ್ಳಿಯಲ್ಲಿ ಮೂರು, ಯಲಹಂಕ ನ್ಯೂ ಟೌನ್‍ನಲ್ಲಿ ಒಂದು, ನಾಗರಬಾವಿ ಒಂದು, ಲಕ್ಕಸಂದ್ರ ಮತ್ತು ಡಿಜೆ ಹಳ್ಳಿಯಲ್ಲಿ ತಲಾ ಒಂದೊಂದು ಕೇಸ್ ದಾಖಲಾಗಿವೆ.

Coronavirus Attack In New Areas Of Bengaluru

ಈ ಮೂಲಕ ಗ್ರೀನ್‌ ಝೋನ್, ಸೇಫ್ ಏರಿಯಾಗಳೆಂದು ಎನಿಸಿಕೊಂಡಿರುವ ಪ್ರದೇಶಗಳು ಕೊರೊನಾ ವೈರಸ್ ಸ್ಥಾನವಾಗಿ ಬದಲಾಗುತ್ತಾ ಎನ್ನುವುದು ಪ್ರಶ್ನೆಯಾಗಿದೆ.

ಲಕ್ಕಸಂದ್ರದಲ್ಲಿ ಪತ್ನಿಯಿಂದಲೇ ಪತಿಗೆ ಸೋಂಕು ತಗುಲಿದೆ. ರಾಮನಗರ ಮೂಲದ ಮಹಿಳೆ ಕ್ಯಾನ್ಸರ್ ಚಿಕಿತ್ಸೆಗೆ ಅಂತ ಬೆಂಗಳೂರಿನ ತಂಗಿ ಮನೆಯಲ್ಲಿ ಉಳಿದಿದ್ದರು. ಅವರಿಗೆ ಸೋಂಕು ಕಾಣಿಸಿಕೊಂಡು ಅವರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಪತಿಗೂ ಸೋಂಕು ಕಾಣಿಸಿಕೊಂಡಿದೆ.

ಪುಟ್ಟೆನಹಳ್ಳಿಯಲ್ಲಿ 54 ವರ್ಷದ ವೃದ್ಧನಿಗೆ ಸೋಂಕು ಪತ್ತೆಯಾಗಿದೆ. ಚೆನ್ನೈನಿಂದ ಬಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬೆಂಗಳೂರಿನ ಅಪಾರ್ಟ್ ಮೆಂಟ್‍ನಲ್ಲಿ ವ್ಯಕ್ತಿಯ ಜೊತೆ ಇದ್ದ ಹೆಂಡತಿ, ಮಗ ಮತ್ತು ಮಗಳಿಗೆ ಸೋಂಕು ಪತ್ತೆಯಾಗಿದೆ.

ಮಹಾರಾಷ್ಟ್ರದಿಂದ ಕಾರಿನಲ್ಲಿ ಬಂದ 54 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಜೊತೆಗೆ ಯಲಹಂಕ ನ್ಯೂಟೌನ್ ವ್ಯಕ್ತಿಗೆ ಕೊರೊನಾ ವಕ್ಕರಿಸಿದ್ದಾನೆ. ಇವರೆಲ್ಲರನ್ನ ಕ್ವಾರಂಟೈನ್ ಮಾಡಿದ್ದರು. ಕ್ವಾರಂಟೈನ್ ಮಾಡಿದ ಐದು ದಿನದಲ್ಲಿ ಟೆಸ್ಟ್ ಮಾಡಿದಾಗ ಸೋಂಕು ಪತ್ತೆಯಾಗಿದೆ.

ಪಾದರಾಯನಪುರದಲ್ಲಿ ರ್‍ಯಾಂಡಮ್ ಟೆಸ್ಟ್‌ನಲ್ಲಿ 30 ವರ್ಷದ ಮಹಿಳೆಗೆ ಸೋಂಕು ತಗುಲಿದೆ.ಗ್ರೀನ್ ಝೋನ್ ವಾರ್ಡ್ ಆಗಿದ್ದ ಡಿ.ಜೆ.ಹಳ್ಳಿಯಲ್ಲಿ ಮುಸ್ಲಿಂ ಮಹಿಳೆಗೆ ಪಾಸಿಟಿವ್ ಬಂದಿದೆ. ಈ ಮೂಲಕ ಈಗ ಕಂಟೈನ್ಮೆಂಟ್ ಝೋನ್ ಆಗಿದೆ. ಈಕೆಯ ಟ್ರಾವೆಲ್ ಹಿಸ್ಟರಿಯೇ ಆರೋಗ್ಯ ಇಲಾಖೆಗೆ ತಿಳಿದಿಲ್ಲ. ಯಾರೆಲ್ಲಾ ಸಂಪರ್ಕದಲ್ಲಿ ಇದ್ದಾರೋ ಎಂಬ ಆತಂಕ ಶುರುವಾಗಿದೆ.

English summary
Coronavirus cases are increasing day by day in Bengaluru. But the worry is that it is spreading to different areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X