• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಕೊವಿಡ್ ಹರಡಿದ್ದು ತಬ್ಲಿಘಿಗಳಿಂದ, ಇದು ಕಾಂಗ್ರೆಸ್ ಕೊರೊನಾ': ಬಿಸಿ ಪಾಟೀಲ್

|

ಬೆಂಗಳೂರು, ಜುಲೈ 11: 'ಕೊವಿಡ್ ಹರಡಲು ತಬ್ಲಿಘಿಗಳೇ ಕಾರಣ. ಅವರಿಂದಲೇ ಕೊರೊನಾ ಹರಡುತ್ತಿರುವುದು. ತಬ್ಲಿಘಿಗಳು ಬಂದ್ಮೇಲೆ ಕೊರೊನಾ ಹೆಚ್ಚಾಗಿದ್ದು' ಎಂದು ಕರ್ನಾಟಕ ಕೃಷಿ ಸಚಿವ ಬಿಸಿ ಪಾಟೀಲ್ ಆರೋಪಿಸಿದ್ದಾರೆ.

   India and China both wants peace says China | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   'ತಬ್ಲಿಘಿಗಳಿಗೆ ಕಾಂಗ್ರೆಸ್‌ನವರು ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ ಇದು ಕಾಂಗ್ರೆಸ್ ಕೊರೊನಾ ಅಂದ್ರೂ ತಪ್ಪಾಗುವುದಿಲ್ಲ. ಕಾಂಗ್ರೆಸ್‌ನವರು ಲೆಕ್ಕ ಕೊಡಿ ಅಭಿಯಾನ ಬಿಟ್ಟು, ಸರ್ಕಾರದ ಜೊತೆಗೆ ನಿಲ್ಲಲಿ' ಎಂದು ವಿಪಕ್ಷದ ವಿರುದ್ಧ ಬಿಸಿ ಪಾಟೀಲ್ ದೂರಿದ್ದಾರೆ.

   ಹಾವೇರಿ: "ದಾಳಿ ಮಾಡಿದ ದೇಶಕ್ಕೆ ಪ್ರತ್ಯುತ್ತರ ಕೊಡೋದು ನಮ್ಮ ಕರ್ತವ್ಯ''

   ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಸಿ ಪಾಟೀಲ್ 'ಕೊರೊನಾ ಜೊತೆ ಜೀವನ ಮಾಡಬೇಕು, ಲಾಕ್‌ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ದಾರಿಯಲ್ಲ' ಎಂದಿದ್ದಾರೆ. ಮುಂದೆ ಓದಿ....

   ಇದು ಕಾಂಗ್ರೆಸ್ ತಬ್ಲಿಘಿ ಕೊರೊನಾ

   ಇದು ಕಾಂಗ್ರೆಸ್ ತಬ್ಲಿಘಿ ಕೊರೊನಾ

   ''ರಾಜ್ಯದಲ್ಲಿ ಈ ತಬ್ಲಿಘಿಗಳಿಂದ ಕೊರೊನಾ ವೈರಸ್ ಜಾಸ್ತಿ ಆಗಿದೆ. ಈ ತಬ್ಲಿಘಿಗಳಿಗೆ ಕಾಂಗ್ರೆಸ್ ಸಪೋರ್ಟ್ ಮಾಡಿದೆ. ಇದರಿಂದ ರಾಜ್ಯದಲ್ಲಿ ಕೊರೊನಾ ಜಾಸ್ತಿ ಆಗಿದೆ. ಕಾಂಗ್ರೆಸ್ ನ್ನು ಕೊರೊನಾ ಕಾಂಗ್ರೆಸ್ ಎಂದು ಕರೀಬೇಕು. ಕಾಂಗ್ರೆಸ್ ನಿಂದಲೇ ಕೊರೊನಾ ಜಾಸ್ತಿಯಾಗಿದೆ. ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಎಂದು ಮಾಡುತ್ತಿದೆ. ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಎಲ್ಲೂ ಹೋಗುವುದಿಲ್ಲ. ಇವಾಗ್ಲಾದ್ರು ರಾಜಕೀಯ ಮಾಡೋದು ಬಿಟ್ಟು ಸರ್ಕಾರದ ಜೊತೆ ಕೈ ಜೋಡಿಸಲಿ' ಕಾಂಗ್ರೆಸ್ ನಾಯಕರಿಗೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ.

   ಅಗಸ್ಟ್‌ವರೆಗೂ ಆನ್‌ಲೈನ್‌ನಲ್ಲಿ ಪರೀಕ್ಷೆ

   ಅಗಸ್ಟ್‌ವರೆಗೂ ಆನ್‌ಲೈನ್‌ನಲ್ಲಿ ಪರೀಕ್ಷೆ

   'ಕೃಷಿ ವಿವಿಯಿಂದ ಮಾಡಬೇಕಾಗಿದ್ದ ಪರೀಕ್ಷೆಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡಲಾಗುತ್ತದೆ. ಎಂ.ಎಸ್ಸಿ(ಅಗ್ರಿಕಲ್ಚರ್) ಮತ್ತು ಎಂ.ಎಸ್ಸಿ(ಜಿಯೋಲಾಜಿ) ಪರೀಕ್ಷೆ ಆನ್‌ಲೈನ್‌ನಲ್ಲಿ ಮಾಡಲು ನಿರ್ಧರಿಸಲಾಗಿದೆ. ಅಗಸ್ಟ್‌ವರೆಗೂ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಯುವುದಿಲ್ಲ. ಅಗಸ್ಟ್‌ವರೆಗೂ ಆನ್‌ಲೈನ್‌ನಲ್ಲಿ ಪರೀಕ್ಷೆ ಮುಂದೂಡಲಾಗಿದೆ. ಮುಂದಿನ ವರ್ಷದ ದಾಖಲಾತಿ ಇನ್ನು ನಿರ್ಧಾರವಾಗಿಲ್ಲ. ಸಿಇಟಿ ಬರೆದ ಬಳಿಕ ಅದು ಆಗಬೇಕಾಗಿರುವುದರಿಂದ ನಿರ್ಧಾರವಾಗಿಲ್ಲ' ಎಂದು ಸಚಿವ ಬಿಸಿ ಪಾಟೀಲ್ ತಿಳಿಸಿದ್ದಾರೆ.

   ಕ್ವಾರೆಂಟೈನ್ ಸಮಯ ವಿಸ್ತರಿಸಲು ಚಿಂತನೆ

   ಕ್ವಾರೆಂಟೈನ್ ಸಮಯ ವಿಸ್ತರಿಸಲು ಚಿಂತನೆ

   'ನಾನು ಕೊಪ್ಪಳದ ಜಿಲ್ಲಾ ಉಸ್ತುವಾರಿ ಮಂತ್ರಿ. ಅಲ್ಲಿಯೂ ಲ್ಯಾಬ್ ತೆರೆಯಲಾಗಿದೆ. ಪ್ರತಿದಿನ 500 ಪ್ರಕರಣಗಳನ್ನು ಪರೀಕ್ಷೆ ಮಾಡಲಾಗುತ್ತಿದೆ. ಈವರೆಗೂ ಕೊಪ್ಪಳ ಜಿಲ್ಲೆಯಲ್ಲಿ 211 ಪ್ರಕರಣಗಳಲ್ಲಿ ಪಾಸಿಟಿವ್ ಪತ್ತೆಯಾಗಿದೆ. ಕ್ವಾರೆಂಟೈನ್ ಸಮಯ ವಿಸ್ತರಿಸಲು ಚಿಂತನೆ ನಡೆಸಲಾಗಿದೆ. ಮುಂಬಯಿ, ಬಳ್ಳಾರಿಯ ಜಿಂದಾಲ್ ಹಾಗೂ ಆಂಧ್ರದ ಗಡಿ ಭಾಗದಿಂದ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಪ್ರಕರಣಗಳು ಪತ್ತೆಯಾಗಿದೆ. ಕೊರೊನಾ ಜೊತೆ ಜೀವನ ಮಾಡಬೇಕು' ಎಂದು ಮಾಹಿತಿ ನೀಡಿದ್ದಾರೆ.

   ರೈತರಿಗೆ ಬಿ ಸಿ ಪಾಟೀಲ್ ಮನವಿ: ಆತಂಕ ಬೇಡ ಎಂದ ಸಚಿವ

   ಎರಡು ದಿನ ಲಾಕ್‌ಡೌನ್‌ ಉತ್ತಮವಲ್ಲ

   ಎರಡು ದಿನ ಲಾಕ್‌ಡೌನ್‌ ಉತ್ತಮವಲ್ಲ

   'ಲಾಕ್‌ಡೌನ್ ಮಾಡುವುದು ಕೊರೊನಾ ನಿಯಂತ್ರಣಕ್ಕೆ ದಾರಿಯಲ್ಲ. ವಾರದಲ್ಲಿ ಎರಡೆರಡು ದಿನ ಲಾಕ್‌ಡೌನ್ ಮಾಡುವುದು ಪರಿಹಾರವಲ್ಲ. ಈಗ ಭಾನುವಾರ ಮಾತ್ರ ಲಾಕ್‌ಡೌನ್ ಮಾಡುತ್ತಿರುವುದು ಸರಿಯಿದೆ. ಗ್ರಾಮೀಣ ಭಾಗದಲ್ಲೂ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈಗ ಗ್ರಾಮೀಣ ಭಾಗದಲ್ಲೂ ಜನ ಜಾಗೃತರಾಗಿದ್ದಾರೆ. ಅಲ್ಲಿಯೂ ಕೂಡ ಸಾಮಾಜಿಕ ಅಂತರ, ಸ್ಯಾನಿಟೈಜ್ ಉಪಯೋಗ, ಮಾಸ್ಕ್ ಬಳಕೆ ಎಲ್ಲವೂ ಆಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ' ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

   English summary
   Karnataka minister B.C Patil alleged that coronavirus is spread by tablighi members in karnataka, Congress party was support this spread. so congress corona he said.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X