• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾಭೀತಿ: ಮುಂದಿನ ಅನಾಹುತ ತಪ್ಪಿಸಿ ರಜೆ ಕೊಡಿ-ಸರ್ಕಾರಿ ನೌಕರರ ಅಳಲು

|

ಬೆಂಗಳೂರು, ಮಾರ್ಚ್ 21: ಕೊರೊನಾವೈರಸ್ ಭೀತಿ ಸರ್ಕಾರಿ ಸಚಿವಾಲಯದ ನೌಕರರಿಗೆ ಎಲ್ಲರಿಗಿಂತ ಹೆಚ್ಚಾಗಿ ಕಾಡತೊಡಗಿದೆ. ಖಾಸಗಿ ಸಂಸ್ಥೆಯ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಆಯ್ಕೆ ಮಾಡಿಕೊಂಡಿದ್ದರೆ, ಸರ್ಕಾರಿ ನೌಕರರಿಗೆ ಯಾವುದೇ ಆಯ್ಕೆ ಸ್ವಾತಂತ್ರ್ಯ ಸಿಕ್ಕಿಲ್ಲ. ಈ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ಸಿಕ್ಕಿರುವ ರಜೆ, ಕೆಲಸದ ಅವಧಿ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೂ ವಿಸ್ತರಿಸುವಂತೆ ಕೋರಲಾಗಿದೆ.

"ದಿನದಿಂದ ದಿನಕ್ಕೆ ಕಚೇರಿಗೆ ಹೋಗಲು ಭಯವಾಗುತ್ತಿದೆ. ಎಂ.ಎಸ್ ಬಿಲ್ಡಿಂಗ್ ನಲ್ಲಿ, ವಿಧಾನಸೌಧ-ವಿಕಾಸಸೌಧ ಗಳ ಮೊಗಸಾಲೆಗಳಲ್ಲಿ, ಲಿಫ್ಟ್ ಗಳಲ್ಲಿ, ಕಾರಿಡಾರ್ ಗಳಲ್ಲಿ ಓಡಾಡುವಾಗ ಯಾರಾದ್ರೂ ಕೆಮ್ಮುದ್ರೆ-ಸೀನಿದ್ರೆ ಭಯವಾಗುತ್ತಿದೆ'' ಎಂದು ಸರ್ಕಾರಿ ನೌಕರರೊಬ್ಬರು ಒನ್ಇಂಡಿಯಾ ಪ್ರತಿನಿಧಿ ಬಳಿ ತಮ್ಮ ಅಳಲು ತೋಡಿಕೊಂಡರು.

ಕೊರೊನಾ; ಆರೋಗ್ಯ ಇಲಾಖೆ, ವೈದ್ಯಕೀಯ ಇಲಾಖೆ ಒಂದೊಂದು ದಿಕ್ಕು!

ಈ ನಡುವೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಮನವಿ ಮಾಡಿಕೊಂಡಂತೆ ಮಾರ್ಚ್ 22ರಂದು " ಜನತಾ ಕರ್ಫ್ಯೂ" ಆಚರಣೆಗೆ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಜೊತೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಅವರಿಗೆ ಮನವಿ ಪತ್ರ ಸಲ್ಲಿಸಿರುವ ನೌಕರರ ಸಂಘದವರು ಕೋವಿಡ್ 19 ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಾದರಿಯಲ್ಲಿ ರಾಜ್ಯ ಸರ್ಕಾರದಲ್ಲೂ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ರಜೆ ಘೋಷಿಸುವಂತೆ ಮನವಿ

ರಜೆ ಘೋಷಿಸುವಂತೆ ಮನವಿ

ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ ಗುರುಸ್ವಾಮಿ ಅವರು ಬರೆದಿರುವ ಪತ್ರದಲ್ಲಿ ಹೀಗೆ ಬರೆಯಲಾಗಿದೆ:

ಪ್ರಚಂಚಾದ್ಯಂತ ಕೋವಿಡ್19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹಲವಾರು ಹಂತಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂಬಂಧವಾಗಿ ರಾಜ್ಯದ ಶಾಲಾ-ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು ಮನೆಯಲ್ಲಿದ್ದಾರೆ; ಆದರೆ ಪೋಷಕರು ಜನಸಂದಣಿ ಇರುವ ಕಛೇರಿಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಸೋಂಕು ಹರಡಲು ಕ್ರಮ ಕೈಗೊಂಡಂತಾಗುವುದಿಲ್ಲ ಎಂದು ಮನವಿಯಲ್ಲಿ ಕೋರಲಾಗಿದೆ.

ಒಂದು ವಾರ ರಜೆ ನೀಡುವುದು ಸೂಕ್ತ

ಒಂದು ವಾರ ರಜೆ ನೀಡುವುದು ಸೂಕ್ತ

ಕೊರೋನಾ ವೈರಸ್ ಭೀತಿ ಇದ್ದರೂ ಸಹ ಅಧಿವೇಶನವನ್ನು ಮುಂದೂಡಿಲ್ಲ, ಮಂತ್ರಿಗಳನ್ನು, ಶಾಸಕರನ್ನು, ಕಾರ್ಯದರ್ಶಿಗಳನ್ನು ಭೇಟಿ ಮಾಡಲು ರಾಜ್ಯದ ಮತ್ತು ದೇಶದ ವಿವಿಧೆಡೆಯಿಂದ ಜನರು ಸಚಿವಾಲಯಗಳಿಗೆ ಬರುತ್ತಿದ್ದಾರೆ‌. ನೌಕರರಲ್ಲಿ ಭಯದ ವಾತಾವರಣವಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಒಂದು ವಾರ ರಜೆ ನೀಡುವುದು ಸೂಕ್ತವೆಂದು ಸಚಿವಾಲಯದ ನೌಕರರು ಒನ್ಇಂಡಿಯಾ ಕನ್ನಡ ತಂಡದ ಜೊತೆ ತಮ್ಮ ಅಳಲನ್ನು ತೋಡಿಕೊಂಡರು.

ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈಗಾಗಲೇ ಸನ್ಮಾನ್ಯ ಪ್ರಧಾನ ಮಂತ್ರಿಗಳು ಮಾರ್ಚ್ 22ರಂದು ಜನತಾ ಕರ್ಫ್ಯೂ ಎಂದು ಘೋಷಿಸಿರುವುದರಿಂದ ಈ ದೇಶದ ನಾಗರಿಕರು ಇದಕ್ಕೆ ಸ್ಪಂದಿರುವಂತೆ ಕರೆ ನೀಡುವುದರಿಂದ ರಾಜ್ಯ ಸರ್ಕಾರಗಳಿಗೂ ಈ ಸಂಬಂಧ ಬೆಂಬಲ ನೀಡುವಂತೆ ತಿಳಿಸಲಾಗಿರುತ್ತದೆ. ರಾಜ್ಯ ಸರ್ಕಾರದ ಈ ಮಹತ್ತರ ಹೋರಾಟಕ್ಕೆ ಕೈಜೋಡಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಮುಂದಾಗುವ ಅನಾಹುತವನ್ನು ತಪ್ಪಿಸಿ

ಮುಂದಾಗುವ ಅನಾಹುತವನ್ನು ತಪ್ಪಿಸಿ

ಕೋವಿಡ್19 ವಿರುದ್ಧ ಇಡೀ ದೇಶದ ಸಾರ್ವಜನಿಕರು ಹೋರಾಡುತ್ತಿರುವುದರಿಂದ ಈ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ರಾಜ್ಯದಲ್ಲಿ ಇದು ಮೂರನೇ ಹಂತದಲ್ಲಿರುವುದರಿಂದ ಮಾರ್ಚ್ 22ರ ಜನತಾ ಕರ್ಫ್ಯೂವನ್ನು ಒಳಗೊಂಡಂತೆ ಮಾರ್ಚ್ 23,24, 26 ಹಾಗೂ 27ರಂದು ಸರ್ಕಾರಿ ರಜೆಯೆಂದು ಘೋಷಿಸಿ ಮುಂದಾಗುವ ಅನಾಹುತವನ್ನು ತಪ್ಪಿಸಲು ತಾವು ಅನುವು ಮಾಡಿಕೊಡುವಂತೆ ಕೋರಿದ್ದಾರೆ.

English summary
Coronavirus Scare: Karnataka Government employees plea for Holiday in and around Ugadi day(March 25).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more