ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾವೈರಸ್ ಹರಡಿಸೋಣ ಬನ್ನಿ ಎಂದ ಟೆಕ್ಕಿ ಬಂಧನ

|
Google Oneindia Kannada News

ಬೆಂಗಳೂರು, ಮಾರ್ಚ್ 27: ದೇಶದ ಪ್ರತಿಷ್ಠಿತ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ನಲ್ಲಿ ಉದ್ಯೋಗಿ ಎಂದು ಹೇಳಿಕೊಂಡಿರುವ ಟೆಕ್ಕಿಯೊಬ್ಬನನ್ನು ಬೆಂಗಳೂರಿನ ಕ್ರೈಂ ಬ್ರ್ಯಾಂಚ್ ಪೊಲೀಸರು ಇಂದು ಬಂಧಿಸಿದ್ದಾರೆ.

ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಲಾಕ್ ಡೌನ್ ಮಾಡಿ ಸರ್ಕಾರ ಎಲ್ಲಾ ಅಗತ್ಯ ಕ್ರಮ ತೆಗೆದುಕೊಂಡ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ಅನಗತ್ಯ ಪೋಸ್ಟ್ ಮೂಲಕ ಸಾರ್ವಜನಿಕವಾಗಿ ಆತಂಕ ಉಂಟು ಮಾಡಿದ ಆರೋಪವನ್ನು ಟೆಕ್ಕಿ ಹೊತ್ತುಕೊಂಡಿದ್ದಾನೆ. ಕೊರೊನಾ ವೈರಸ್ ಹರಡಲು ಕೈ ಜೋಡಿಸಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಟೆಕ್ಕಿ ಬಗ್ಗೆ ಸಾರ್ವಜನಿಕರೇ ಮೊದಲಿಗೆ ಗುರುತಿಸಿ, ಬೆಂಗಳೂರು ಪೊಲೀಸರ ಸಾಮಾಜಿಕ ಜಾಲ ತಾಣಗಳ ಖಾತೆಗೆ ಟ್ಯಾಗ್ ಮಾಡಿ ತಿಳಿಸಿದ್ದರು.

Corona Scare: Infosys Techie arrested by CCB police for creating Panic

ಬೆಂಗಳೂರಿನಲ್ಲಿ ಕೊರೊನಾ ವೈರಸ್ ಹರಡಲು ಕೈ ಜೋಡಿಸಿ ಎಂದು ಮುಜೀಬ್ ಎಂಬ ವ್ಯಕ್ತಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ ಸಾರ್ವಜನಿಕರೊಬ್ಬರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ತಿಳಿಸಿದ್ದರು. ಟ್ವಿಟ್ಟರ್ ನಲ್ಲಿ ಈ ವ್ಯಕ್ತಿ ಇನ್ಫೋಸಿಸ್ ನಲ್ಲಿ ಕಾರ್ಯ ನಿರ್ವಹಿಸುತ್ತಾನೆ ಎಂದು ತಿಳಿದ ಬಳಿಕ ಇನ್ಫೋಸಿಸ್ ಹ್ಯಾಶ್ ಟ್ಯಾಗ್ ನಿನ್ನೆ ಫುಲ್ ಟ್ರೆಂಡಿಂಗ್ ಆಗಿತ್ತು. ಈತನ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರಿಗೆ ಆಗ್ರಹಿಸಲಾಯಿತು.

Corona Scare: Infosys Techie arrested by CCB police for creating Panic

ನಿಮ್ಮ ಮನೆಯಿಂದ ಹೊರ ಬಂದು ಉಗುಳಿ, ಕೆಮ್ಮಿ, ಈ ಮೂಲಕ ಕೊರೊನಾವೈರಸ್ ಹರಡುವಂತೆ ಮಾಡಲು ಸಹಕರಿಸಿ ಎಂಬುದಾಗಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಈಗ ಪೊಲೀಸರ ಬಂಧನದಲ್ಲಿದ್ದು, ಐಪಿಸಿ ಸೆಕ್ಷನ್ 505 ಅನ್ವಯ ಪ್ರಕರಣ ಎದುರಿಸುತ್ತಿದ್ದಾನೆ. ಈ ರೀತಿ ಪೋಸ್ಟ್ ಹಾಕಲು ಏನು ಕಾರಣ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ವಿಚಾರಣೆ ಜಾರಿಯಲ್ಲಿದೆ.

English summary
Corona Scare: Infosys Techie named Mujeeb has been arrested by CCB police for creating Panic by posting Facebook post saying will spread Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X