ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಟೆಕ್ಕಿ ಮಗಳಿಗೆ ಕೊರೊನಾ: ಶಾಲೆಯ 1700 ಸಹಪಾಠಿಗಳಿಗೆ ತಪಾಸಣೆ!

|
Google Oneindia Kannada News

ಬೆಂಗಳೂರು, ಮಾರ್ಚ್ 11: ಇಷ್ಟು ದಿನ ಕೊರೊನಾ ಗುಮ್ಮನಿಂದ ಕರ್ನಾಟಕ ಸೇಫ್ ಆಗಿತ್ತು. ಆದ್ರೆ, ಅದ್ಯಾವಾಗ ಅಮೇರಿಕಾದಿಂದ ಬೆಂಗಳೂರಿಗೆ ಬಂದ ಸಾಫ್ಟ್ ವೇರ್ ಎಂಜಿನಿಯರ್ ಗೆ ಡೆಡ್ಲಿ ಕೊರೊನಾ ವೈರಸ್ ಪಾಸಿಟೀವ್ ರಿಪೋರ್ಟ್ ಬಂತೋ, ಆಗ್ಲಿಂದ ಕರ್ನಾಟಕದ ಮಂದಿಗೆ ನೆಮ್ಮದಿಯಾಗಿ ಉಸಿರಾಡುವುದೂ ಕಷ್ಟವಾಗಿ ಪರಿಣಮಿಸಿದೆ.

Recommended Video

karnataka ban selling offood cut fruits on footpaths | Street food Banned | Bangalore

ಅಮೇರಿಕಾ ಮತ್ತು ದುಬೈಗೆ ಹೋಗಿ, ಮಾರ್ಚ್ 1ನೇ ತಾರೀಖು ಬೆಳಗ್ಗೆ ಬೆಂಗಳೂರಿಗೆ ವಾಪಸ್ ಆದ ಟೆಕ್ಕಿಗೆ ಕೊರೊನಾ ಸೋಂಕು ತಗುಲಿತ್ತು. ಟೆಕ್ಕಿಯಿಂದಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಆತನ ಪತ್ನಿ ಮತ್ತು ಮಗಳಿಗೂ ಕೊರೊನಾ ಸೋಂಕು ತಗುಲಿದೆ. ಟೆಕ್ಕಿಯ ಸಹೋದ್ಯೋಗಿ ಕೂಡ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ ಈ ನಾಲ್ವರನ್ನೂ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್ಬೆಂಗಳೂರಿನ ಟೆಕ್ಕಿಗೆ ಕೊರೊನಾ: ಕಂಪನಿ ನೌಕರರಿಗೆ ವರ್ಕ್ ಫ್ರಮ್ ಹೋಮ್

ಈ ಮಧ್ಯೆ ಕೊರೊನಾ ಸೋಂಕು ತಗುಲಿರುವ ಟೆಕ್ಕಿಯ ಪುತ್ರಿ ಓದುತ್ತಿರುವ ಶಾಲೆಯ 360 ಸಿಬ್ಬಂದಿ ಮತ್ತು 1700 ವಿದ್ಯಾರ್ಥಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ

ಎಂಟನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ

ಬೆಂಗಳೂರಿನ ಟೆಕ್ಕಿಯ ಪುತ್ರಿಗಿನ್ನೂ 13 ವರ್ಷ ವಯಸ್ಸು. ಬೆಂಗಳೂರಿನ ಪೂರ್ವ ಭಾಗದಲ್ಲಿ ಇರುವ ಶಾಲೆ (ಸಿಬಿಎಸ್ಇ ಸಿಲಬಸ್) ಯಲ್ಲಿ ಆಕೆ ಎಂಟನೇ ತರಗತಿ ಓದುತ್ತಿದ್ದಾಳೆ. ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢವಾದ ಬೆನ್ನಲೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.

1700 ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ

1700 ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ

ಶಾಲೆಯ 1700 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರೂ ಸೇರಿದಂತೆ 360 ಸಿಬ್ಬಂದಿ ಮತ್ತು ಎಲ್ಲಾ ವಿದ್ಯಾರ್ಥಿಗಳ ಪೋಷಕರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!ಅಚ್ಚರಿ ಸುದ್ದಿ: ಡೆಡ್ಲಿ ಕೊರೊನಾ ವಿರುದ್ಧ ಹೋರಾಡಿ ಸಾವನ್ನೇ ಗೆದ್ದ 100ರ ಅಜ್ಜ!

ವೈದ್ಯಕೀಯ ತಪಾಸಣೆ ಅತ್ಯಗತ್ಯ

ವೈದ್ಯಕೀಯ ತಪಾಸಣೆ ಅತ್ಯಗತ್ಯ

''13 ವರ್ಷದ ಟೆಕ್ಕಿಯ ಪುತ್ರಿ ಮಾರ್ಚ್ 7 ರವರೆಗೂ ಶಾಲೆಗೆ ಹಾಜರ್ ಆಗಿದ್ದಳು. ಹೀಗಾಗಿ, ಆಕೆ ಯಾರೊಂದಿಗೆ ಸಂಪರ್ಕ ಬೆಳೆಸಿದ್ದಳೋ, ಎಲ್ಲರಿಗೂ ಮೆಡಿಕಲ್ ಸ್ಕ್ರೀನಿಂಗ್ ಅತ್ಯಗತ್ಯ. ತಂದೆಯ ಜೊತೆಗೆ ತಾಯಿ ಮತ್ತು ಮಗಳಿಗೆ ಹತ್ತಿರದ ಸಂಪರ್ಕ ಇದ್ದ ಕಾರಣ, ಕೊರೊನಾ ಸೋಂಕು ತಗುಲಿದೆ. ಹೀಗಾಗಿ, ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಅವರೆಲ್ಲರ ಫ್ಯಾಮಿಲಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದೇವೆ. ಯಾರಿಗೇ ಸೋಂಕು ತಗುಲಿದ್ದರೂ, ಅವರನ್ನ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುವುದು'' ಎಂದು ಆರೋಗ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಪಾಸಣೆ

ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಪಾಸಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, 13 ವರ್ಷದ ಟೆಕ್ಕಿಯ ಪುತ್ರಿ ಓದುತ್ತಿದ್ದ ಕ್ಲಾಸ್ ನಲ್ಲಿ 40 ವಿದ್ಯಾರ್ಥಿಗಳಿದ್ದರು. ಆ ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರ ವೈದ್ಯಕೀಯ ತಪಾಸಣೆಯನ್ನ ಅವರುಗಳ ನಿವಾಸದಲ್ಲೇ ನೆರವೇರಿಸಲು ಇಲಾಖೆ ನಿರ್ಧರಿಸಿದೆ. ಸೋಂಕಿನ ಲಕ್ಷಣಗಳು ಯಾರಿಗೇ ಕಂಡುಬಂದರೂ, ರಾಜೀವ್ ಗಾಂಧಿ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುವುದು.

ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?ಕೊರೊನಾ ಕಾರ್ಮೋಡ: ಬೆಂಗಳೂರಲ್ಲಿ 4, ಹಾಗಾದ್ರೆ ಭಾರತದಲ್ಲಿ ಎಷ್ಟು?

English summary
Coronvirus Scare: Ahead of one student tested positive in Bangalore school, all the other students has been screening for coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X