ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಕಂಟಕ: ಬೆಂಗಳೂರಿನ ಮಾಲ್, ಥಿಯೇಟರ್ ಗಳು ಖಾಲಿ ಖಾಲಿ

|
Google Oneindia Kannada News

ಮಾರಣಾಂತಿಕ ಕೊರೊನಾ ವೈರಸ್ ಭೀತಿ ಭಾರತೀಯರಿಗೂ ಕಾಡುತ್ತಿದೆ. ಭಾರತದಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ ಆಗಿದೆ. ಇದರಿಂದ ಬೆಚ್ಚಿ ಬಿದ್ದಿರುವ ಜನ ಹೊರಗೆ ಬರುವುದಕ್ಕೆ ಹಿಂದು ಮುಂದು ನೋಡುತ್ತಿದ್ದಾರೆ. ಪರಿಣಾಮ, ಬೆಂಗಳೂರಿನ ಮಾಲ್ ಗಳು ಮತ್ತು ಥಿಯೇಟರ್ ಗಳು ಬಿಕೋ ಎನ್ನುತ್ತಿವೆ.

ವೀಕೆಂಡ್ ಬಂದರೆ ಸಾಕು, ಬೆಂಗಳೂರಿನಲ್ಲಂತೂ ಎಲ್ಲಾ ಮಾಲ್ ಗಳು ತುಂಬಿ ತುಳುಕುತ್ತಿದ್ದವು. ಆದ್ರೆ, ಇವತ್ತು ಬೆಂಗಳೂರಿನ ಎಲ್ಲಾ ಮಾಲ್ ಗಳು ಖಾಲಿ ಹೊಡೆಯುತ್ತಿವೆ.

SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?SARS, MERS ಮಹಾಮಾರಿಗಳಿಗೆ ಬಗ್ಗದ ಭಾರತ ಕೊರೊನಾ ಗುಮ್ಮನಿಗೆ ಜಗ್ಗಿತೇ?

ಜನಸಂದಣಿ ಇರುವ ಜಾಗಕ್ಕೆ ಹೋದರೆ, ಎಲ್ಲಿ ಸೋಂಕು ತಗುಲುತ್ತೋ ಎಂಬ ಭಯದಿಂದ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಕಡೆಗೆ ಬೆಂಗಳೂರಿನ ಮಂದಿ ಮುಖ ಮಾಡುತ್ತಿಲ್ಲ. ಕೊರೊನಾ ಭೀತಿಯಿಂದಾಗಿ ಮಾಲ್ ಗಳಲ್ಲಿ ವ್ಯಾಪಾರ ನಡೆಯುತ್ತಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲೂ ಜನ ಇಲ್ಲದ ಕಾರಣ ಬಾಕ್ಸ್ ಆಫೀಸ್ ಕಲೆಕ್ಷನ್ ಗೂ ಹೊಡೆತ ಬಿದ್ದಿದೆ.

Coronavirus Scare: Bengaluru Malls And Theatres Are Empty

ಇನ್ನೂ ಗಾಂಧಿನಗರದಲ್ಲಿ ಇರುವ ಸಿಂಗಲ್ ಸ್ಕ್ರೀನ್ ಥಿಯೇಟರ್ ಗಳನ್ನೂ ಕೇಳೋರೇ ಇಲ್ಲ. ವೀಕೆಂಡ್ ನಲ್ಲಿ ಮನರಂಜನೆಗಾಗಿ ಸಿನಿಮಾ ನೋಡುತ್ತಿದ್ದವರು ಇದೀಗ ಕೊರೊನಾ ಕಂಟಕದಿಂದ ಮನೆಯಲ್ಲೇ ಉಳಿದುಕೊಂಡಿದ್ದಾರೆ.

 ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್ ರಾಜ್ಯದಲ್ಲಿ ಈವರೆಗೆ ಒಂದೇ ಒಂದು ಕೊರೊನಾ ಪ್ರಕರಣ ಇಲ್ಲ; ಡಾ.ಸುಧಾಕರ್

ಕೊರೊನಾ ಪ್ರಕರಣಗಳು: ವಿಶ್ವದಾದ್ಯಂತ ಇಲ್ಲಿಯವರೆಗೂ ಒಟ್ಟು 101,781 ಮಂದಿಗೆ ನೋವಲ್ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲಿ 3490 ರಲ್ಲಿ ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಒಟ್ಟು 33 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಕರ್ನಾಟಕದಲ್ಲಿ ಈವರೆಗೂ ಕೊರೊನಾ ಸೋಂಕಿತ ಪ್ರಕರಣ ದಾಖಲಾಗಿಲ್ಲ.

English summary
Coronavirus scare: Bengaluru Malls and Theatres are empty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X