ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ!

|
Google Oneindia Kannada News

ಬೆಂಗಳೂರು, ಮೇ 19: ನೆಗೆಟಿವ್ ಸುದ್ದಿ ಕೇಳಿ ಕೇಳಿ ಭೀತಿ ಪಡುತ್ತಿದ್ದ ಜನತೆಗೆ ಬೆಂಗಳೂರು ಮಹಾನಗರದಿಂದ ಸ್ವಲ್ಪ ನಿರಾಳವಾಗುವ ಆಶಾದಾಯಕ ಸುದ್ದಿಯೊಂದು ಬಂದಿದೆ.

ಬೆಡ್, ಆಕ್ಸಿಜನ್, ವೆಂಟಿಲೇಟರ್ ಮುಂತಾದ ಕಾರಣಗಳಿಂದ ಬಳಲಿ ಬೆಂಡಾಗಿ ಹೋಗಿದ್ದ ಬೆಂಗಳೂರಿನಲ್ಲಿ ಸತತವಾಗಿ (ಒಂದು ದಿನ ಹೊರತು ಪಡಿಸಿ) ಒಂದು ವಾರದಿಂದ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ.

ಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಇಳಿಕೆ; ಅಂಕಿ-ಸಂಖ್ಯೆಗಳುಬೆಂಗಳೂರಲ್ಲಿ ಕೋವಿಡ್ ಪರೀಕ್ಷೆ ಇಳಿಕೆ; ಅಂಕಿ-ಸಂಖ್ಯೆಗಳು

ಟೆಸ್ಟಿಂಗ್ ಪ್ರಮಾಣ ಯಾಕೆ ಕಮ್ಮಿಯಾಗುತ್ತಿದೆ ಎನ್ನುವುದಕ್ಕೆ ಈಗಾಗಲೇ ಬಿಬಿಎಂಪಿ ಆಯುಕ್ತರು ಸ್ಪಷ್ಟನೆಯನ್ನು ನೀಡಿದ್ದಾರೆ. ಲಾಕ್ ಡೌನ್ ಕಾರಣದಿಂದ ಸಾರ್ವಜನಿಕ ಸಾರಿಗೆ ನಿಲ್ದಾಣಗಳಲ್ಲಿ ರ‍್ಯಾಂಡಮ್ ಆರ್ಟಿಪಿಸಿಆರ್ ಟೆಸ್ಟ್ ಕಮ್ಮಿಯಾಗಿದೆ ಎಂದು ಆಯುಕ್ತರು ಹೇಳಿದ್ದರು.

 ರಾಷ್ಟ್ರೀಯ ಲಾಕ್‌ಡೌನ್ ನಿರ್ಧಾರ ಪ್ರಧಾನಿ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ: 4 ಕಾರಣಗಳು ರಾಷ್ಟ್ರೀಯ ಲಾಕ್‌ಡೌನ್ ನಿರ್ಧಾರ ಪ್ರಧಾನಿ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ: 4 ಕಾರಣಗಳು

ಕಳೆದ ಒಂದು ವಾರದ ಆರೋಗ್ಯ ಇಲಾಖೆಯ ಡೇಟಾ ಪ್ರಕಾರ, ಮೃತ ಪಡುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡು ಬಂದಿಲ್ಲ. ಆದರೆ, ಬಿಡುಗಡೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರ ಅಂಕಿಅಂಶವನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

 ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆಯ 31,795 ಜನ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆಯ 31,795 ಜನ ಆಸ್ಪತ್ರೆಯಿಂದ ಬಿಡುಗಡೆ

ಮಂಗಳವಾರ (ಮೇ 19) ಒಂದೇ ದಿನ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ದಾಖಲೆಯ 31,795 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆ ಮೂಲಕ ಮೇ 12-18ರ ಅವಧಿಯಲ್ಲಿ ಬಿಡುಗಡೆಯಾದವರ ಸಂಖ್ಯೆ 1,09,061ಕ್ಕೆ ಏರಿದೆ.

ದಿನಾಂಕ: ಮೇ 12
ಹೊಸ ಕೇಸ್: 16,286
ಬಿಡುಗಡೆಯಾದವರ ಸಂಖ್ಯೆ: 18,089
ಸಕ್ರಿಯ ಪ್ರಕರಣ: 3,60,619

 ಗುಣಮುಖರಾದವರ ಸಂಖ್ಯೆ ಹೊಸ ಸೋಂಕಿತರಿಗಿಂತ ಹೆಚ್ಚು

ಗುಣಮುಖರಾದವರ ಸಂಖ್ಯೆ ಹೊಸ ಸೋಂಕಿತರಿಗಿಂತ ಹೆಚ್ಚು

ದಿನಾಂಕ: ಮೇ 13
ಹೊಸ ಕೇಸ್: 15,191
ಬಿಡುಗಡೆಯಾದವರ ಸಂಖ್ಯೆ: 15,191
ಸಕ್ರಿಯ ಪ್ರಕರಣ: 3,59,565

ದಿನಾಂಕ: ಮೇ 14
ಹೊಸ ಕೇಸ್: 14,316
ಬಿಡುಗಡೆಯಾದವರ ಸಂಖ್ಯೆ: 12,898
ಸಕ್ರಿಯ ಪ್ರಕರಣ: 3,60,862

 ಬಿಡುಗಡೆಯಾದವರ ಸಂಖ್ಯೆ 1,09,061ಕ್ಕೆ ಏರಿದೆ

ಬಿಡುಗಡೆಯಾದವರ ಸಂಖ್ಯೆ 1,09,061ಕ್ಕೆ ಏರಿದೆ

ದಿನಾಂಕ: ಮೇ 15
ಹೊಸ ಕೇಸ್: 13,402
ಬಿಡುಗಡೆಯಾದವರ ಸಂಖ್ಯೆ: 7,379
ಸಕ್ರಿಯ ಪ್ರಕರಣ: 3,66,791

ದಿನಾಂಕ: ಮೇ 16
ಹೊಸ ಕೇಸ್: 8,344
ಬಿಡುಗಡೆಯಾದವರ ಸಂಖ್ಯೆ: 13,612
ಸಕ್ರಿಯ ಪ್ರಕರಣ: 3,61,830

Recommended Video

ಅಮೇರಿಕಾ ಅಧ್ಯಕ್ಷ Biden ಮಾತಿಗೆ ಬೆಲೆ ಕೊಡುತ್ತಾ ಇಸ್ರೇಲ್ | Oneindia Kannada
 ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ

ಕೊರೊನಾ: ರಾಜಧಾನಿ ಬೆಂಗಳೂರಿನಲ್ಲಿ ಆಶಾದಾಯಕ ಬೆಳವಣಿಗೆ

ದಿನಾಂಕ: ಮೇ 17
ಹೊಸ ಕೇಸ್: 13,338
ಬಿಡುಗಡೆಯಾದವರ ಸಂಖ್ಯೆ: 10,097
ಸಕ್ರಿಯ ಪ್ರಕರಣ: 3,64,382

ದಿನಾಂಕ: ಮೇ 18
ಹೊಸ ಕೇಸ್: 8,676
ಬಿಡುಗಡೆಯಾದವರ ಸಂಖ್ಯೆ: 31,795
ಸಕ್ರಿಯ ಪ್ರಕರಣ: 3,40,965

English summary
Coronavirus: Satisfactory Data Of Discharge Numbers In BBMP Limit From May 12 to May 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X