ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಯಲ್ಲಿ ಏನಾಗ್ತಿದೆ; ಕರ್ನಾಟಕ ಟಾಸ್ಕ್ ಫೋರ್ಸ್ ಸಭೆಯ ಕ್ಲಿಯರ್ ಪಿಕ್ಚರ್!

|
Google Oneindia Kannada News

ಬೆಂಗಳೂರು, ಜುಲೈ.21: ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವುದರ ಕುರಿತು ಸರ್ಕಾರವು ಟಾಸ್ಕ್ ಫೋರ್ಸ್ ಸಭೆಯನ್ನು ನಡೆಸಲಾಯಿತು.

Recommended Video

Drone Prathap in Police Custody, what next..? | Oneindia Kannada

ಕರ್ನಾಟಕದಲ್ಲಿ ಕೊವಿಡ್-19 ಸೋಂಕಿನ ನಿಯಂತ್ರಣ ಏನು ಮಾಡುವುದು. ಕೊರೊನಾವೈರಸ್ ಸೋಂಕಿನ ತಪಾಸಣೆ ಪ್ರಮಾಣವನ್ನು ಹೆಚ್ಚಿಸುವುದು ಹೇಗೆ. ಯಾವ ರೀತಿಯ ಉಪಕರಣಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಟಾಸ್ಕ್ ಫೋರ್ಸ್ ಸಭೆಯಲ್ಲಿ ಚರ್ಚಿಸಲಾಯಿತು.

ಲೆಕ್ಕ ಕೊಡಿ ಅಂದ್ರೆ ಹಿಂಗೇನ್ರೀ ಕೊಡೋದು? ಬಿಎಸ್ವೈ ಸರಕಾರದ ವಿರುದ್ದ ಸಿದ್ದರಾಮಯ್ಯ ಮತ್ತೆ ವಾಗ್ದಾಳಿಲೆಕ್ಕ ಕೊಡಿ ಅಂದ್ರೆ ಹಿಂಗೇನ್ರೀ ಕೊಡೋದು? ಬಿಎಸ್ವೈ ಸರಕಾರದ ವಿರುದ್ದ ಸಿದ್ದರಾಮಯ್ಯ ಮತ್ತೆ ವಾಗ್ದಾಳಿ

ಟಾಸ್ಕ್ ಫೋರ್ಸ್ ಸಭೆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿದರು. ಕೊರೊನಾವೈರಸ್ ಸೋಂಕು ಹರಡುವಿಕೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಚರ್ಚಿಸಲಾಗಿದ್ದು, ಆದಷ್ಟು ಶೀಘ್ರದಲ್ಲೇ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಇದರ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ಅವರ ನಡೆ ಸಾಕಷ್ಟು ಅನುಮಾನವನ್ನು ಹುಟ್ಟು ಹಾಕಿತು.

ಕೊವಿಡ್-19 ಔಷಧಿ ಖರೀದಿಸುವ ಕುರಿತು ನಿರ್ಧಾರ

ಕೊವಿಡ್-19 ಔಷಧಿ ಖರೀದಿಸುವ ಕುರಿತು ನಿರ್ಧಾರ

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ನಿರ್ವಹಣೆಗೆ ಸೂಕ್ತ ಔಷಧಿಗಳ ಅಗತ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಅವಶ್ಯವಾಗಿರುವ ಔಷಧಿಗಳನ್ನು ಖರೀದಿಸುವ ಬಗ್ಗೆ ತೀರ್ಮಾನಿಸಲಾಯಿತು. ರೆಮೆಡಿಸ್ ಸಿಬಿ ಎಂಬ ಔಷಧಿ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸೋಂಕಿತರ ಪರೀಕ್ಷೆಗೆ ರಾಪಿಡ್ ಆಂಟಿಜೆನ್ ಕಿಟ್

ಸೋಂಕಿತರ ಪರೀಕ್ಷೆಗೆ ರಾಪಿಡ್ ಆಂಟಿಜೆನ್ ಕಿಟ್

ಕೊರೊನಾವೈರಸ್ ಸೋಂಕಿತರ ವೈದ್ಯಕೀಯ ಪರೀಕ್ಷೆಯ ಪ್ರಕ್ರಿಯೆ ವಿಳಂಬವಾಗುತ್ತಿರುವುದೇ ಸೋಂಕು ಹರಡುವಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಸೋಂಕು ತಪಾಸಣೆ ಪ್ರಕ್ರಿಯೆಗೆ ವೇಗ ನೀಡುವ ಉದ್ದೇಶದಿಂದ ರಾಪಿಡ್ ಆಂಟಿಜೆನ್ ಕಿಟ್ ಗಳನ್ನು ಖರೀದಿಸಲಾಗುತ್ತದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.

ಕೊವಿಡ್-19 ಸೋಂಕಿತರ ತಪಾಸಣೆ ವೆಚ್ಚದಲ್ಲಿ ಇಳಿಕೆ

ಕೊವಿಡ್-19 ಸೋಂಕಿತರ ತಪಾಸಣೆ ವೆಚ್ಚದಲ್ಲಿ ಇಳಿಕೆ

ಕೊರೊನಾವೈರಸ್ ಸೋಂಕಿತರ ತಪಾಸಣೆಗೆ ಈ ಮೊದಲು ನಿಗದಿಗೊಳಿಸಿದ್ದ 4,500 ರೂಪಾಯಿ ದರವನ್ನು 3 ಸಾವಿರ ರೂಪಾಯಿಗೆ ಕಡಿತಗೊಳಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ 3 ಸಾವಿರ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ 2 ಸಾವಿರ ರೂಪಾಯಿಗೆ ಕೊವಿಡ್-19 ಟೆಸ್ಟ್ ಮಾಡಿಸಿಕೊಳ್ಳಬಹುದು. ಈ ವೇಳೆ ಪಿಪಿಇ ಕಿಟ್ ಸೇರಿದಂತೆ ಯಾವುದೇ ರೀತಿ ಹೆಚ್ಚುವರಿ ಹಣವನ್ನು ಹಾಕುವಂತಿಲ್ಲ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಕೊವಿಡ್-19 ಆಸ್ಪತ್ರೆಗಳಾಗಿ ಸರ್ಕಾರಿ ಆಸ್ಪತ್ರೆಗಳ ಪರಿವರ್ತನೆ

ಕೊವಿಡ್-19 ಆಸ್ಪತ್ರೆಗಳಾಗಿ ಸರ್ಕಾರಿ ಆಸ್ಪತ್ರೆಗಳ ಪರಿವರ್ತನೆ

ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸಹಕಾರ ನೀಡಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಶೇ.50 ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆ ಕೊಡಬೇಕು. ಉಳಿದ ಬೆಡ್‌ಗಳನ್ನು ಬೇರೆ ಬೇರೆ ವಿಭಾಗಗಳಿಗೆ ನೀಡಬೇಕು. ಇನ್ನು, ಸರ್ಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕೊವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಬೇಕೆಂದು ನಿರ್ಧರಿಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಟಾಸ್ಕ್ ಫೋರ್ಸ್ ಸಭೆಗೂ ಮುನ್ನ ಎದ್ದುಹೋದ ಆರೋಗ್ಯ ಸಚಿವರು

ಟಾಸ್ಕ್ ಫೋರ್ಸ್ ಸಭೆಗೂ ಮುನ್ನ ಎದ್ದುಹೋದ ಆರೋಗ್ಯ ಸಚಿವರು

ಕೊರೊನಾವೈರಸ್ ಸೋಂಕು ನಿಯಂತ್ರಣದ ಕುರಿತು ಮಹತ್ವದ ಸಭೆ ನಡೆಯುತ್ತಿದ್ದರೆ ಆರೋಗ್ಯ ಸಚಿವರ ನಡೆ ಸಾಕಷ್ಟು ಅನುಮಾನವನ್ನು ಹುಟ್ಟುಹಾಕುವಂತಿತ್ತು. ಒಂದು ಕಡೆಯಲ್ಲಿ ಟಾಸ್ಕ್ ಫೋರ್ಸ್ ಸಭೆಯಲ್ಲಿ ಗಂಭೀರ ವಿಚಾರ ಚರ್ಚೆಯಾಗುತ್ತಿದ್ದವು. ಆದರೆ ಇದರ ನಡುವೆ ಆರೋಗ್ಯ ಸಚಿವ ಶ್ರೀರಾಮುಲು ಅವರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಸಭೆಯಿಂದ ಹೊರ ನಡೆದರು.

English summary
Coronavirus Pandemic: Highlights Of Karnataka Taskforce Meeting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X